ಜಾಗತಿಕ ಸಂಘರ್ಷಗಳಿಗೆ ಕಾರಣ ಸ್ವಾರ್ಥಪರ ಆಸಕ್ತಿ, ಪ್ರಭುತ್ವದ ಆಸೆ; ಜಗತ್ತಿನ ಶಾಂತಿಗೆ ಭಾರತವೇ ಆದರ್ಶಪ್ರಾಯ: ಮೋಹನ್ ಭಾಗವತ್; Video
ಕಳೆದ 2,000 ವರ್ಷಗಳಿಂದ ವಿಶ್ವವು ಸಂಘರ್ಷಗಳನ್ನು ಪರಿಹರಿಸಲು ವಿವಿಧ ತತ್ವಗಳನ್ನು ಪ್ರಯೋಗಿಸಿದ್ದರೂ ಹೆಚ್ಚಿನ ಯಶಸ್ಸು ಕಂಡಿಲ್ಲ. ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರಗಳು ಮತ್ತು ಮೇಲುಗೈ-ಕೆಳಮಟ್ಟದ ಕಲ್ಪನೆಗಳು ಇನ್ನೂ ಸಮಾಜದಲ್ಲಿ ಮುಂದುವರಿಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾಗತಿಕ ಸಂಘರ್ಷಗಳ ಮೂಲ ಕಾರಣಗಳು ಸ್ವಾರ್ಥಪರ ಆಸಕ್ತಿಗಳು ಮತ್ತು ಪ್ರಭುತ್ವ ಸಾಧಿಸುವ ಆಸೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ. ನಾಗ್ಪುರದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ (VHP)ನ ವಿಧರ್ಭ ಪ್ರಾಂತ ಕಚೇರಿಗೆ ಶಿಲಾನ್ಯಾಸ ಮಾಡಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ದೀರ್ಘಕಾಲಿಕ ಶಾಂತಿ ನೆಲೆಸಲು ಏಕತೆ, ಶಿಸ್ತು ಮತ್ತು ಧರ್ಮ ಪಾಲನೆಯ ಮೂಲಕ ಮಾತ್ರ ಪ್ರಭುತ್ವ ಸಾಧಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಕಳೆದ 2,000 ವರ್ಷಗಳಿಂದ ವಿಶ್ವವು ಸಂಘರ್ಷಗಳನ್ನು ಪರಿಹರಿಸಲು ವಿವಿಧ ತತ್ವಗಳನ್ನು ಪ್ರಯೋಗಿಸಿದ್ದರೂ ಹೆಚ್ಚಿನ ಯಶಸ್ಸು ಕಂಡಿಲ್ಲ. ಧಾರ್ಮಿಕ ಅಸಹಿಷ್ಣುತೆ, ಬಲವಂತದ ಮತಾಂತರಗಳು ಮತ್ತು ಮೇಲುಗೈ-ಕೆಳಮಟ್ಟದ ಕಲ್ಪನೆಗಳು ಇನ್ನೂ ಸಮಾಜದಲ್ಲಿ ಮುಂದುವರಿಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತದ ಪ್ರಾಚೀನ ಜ್ಞಾನವು ಎಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಬದುಕನ್ನು ನಡೆಸುವುದು ಎಂಬ ಸಂದೇಶವನ್ನು ನೀಡುತ್ತದೆ. ಸಂಘರ್ಷದಿಂದ ಸಮನ್ವಯ ಮತ್ತು ಸಹಕಾರದ ಕಡೆಗೆ ಬದುಕು ನಡೆಸುವ ಅಗತ್ಯವಿದೆ ಎಂದು ಕರೆ ನೀಡಿದರು. ಇತ್ತೀಚಿನ ವಿಜ್ಞಾನವೂ ಇದೇ ದಿಕ್ಕಿನಲ್ಲಿ ನಿಧಾನವಾಗಿ ಸಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಗತ್ತಿನ ಸಂಘರ್ಷಗಳಿಗೆ ಸ್ವಾರ್ಥ ಮತ್ತು ಪ್ರಭುತ್ವದ ಆಸೆಯೇ ಮೂಲ ಕಾರಣವೆಂದು ಅವರು ಮತ್ತೊಮ್ಮೆ ಹೇಳಿ ಶಾಶ್ವತ ಶಾಂತಿ ಏಕತೆ, ಶಿಸ್ತು ಹಾಗೂ ಧರ್ಮ ಪಾಲನೆಯಿಂದ ಮಾತ್ರ ಸಾಧ್ಯವೆಂದರು.
ಧರ್ಮದ ಮಹತ್ವವನ್ನು ವಿವರಿಸಿದ ಮೋಹನ್ ಭಾಗವತ್, ಅದು ಕೇವಲ ಶಾಸ್ತ್ರಗಳಲ್ಲಿ ಸೀಮಿತವಾಗಿರಬಾರದು; ಜನರ ನಡೆ-ನುಡಿಯಲ್ಲಿ ಪ್ರತಿಫಲಿಸಬೇಕು ಎಂದು ಹೇಳಿದರು. ಶಿಸ್ತು ಮತ್ತು ನೈತಿಕ ಮೌಲ್ಯಗಳನ್ನು ಪಾಲಿಸಲು ನಿರಂತರ ಅಭ್ಯಾಸ ಅಗತ್ಯವಿದ್ದು, ಇದರಲ್ಲಿ ವೈಯಕ್ತಿಕ ತ್ಯಾಗವೂ ಇರಬಹುದು ಎಂದು ಅವರು ಹೇಳಿದರು.
ಭಾರತ ಜಗತ್ತಿಗೆ ಆದರ್ಶ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಇಂದಿನ ಪರಿಸ್ಥಿತಿಯಲ್ಲಿ ಭಾರತ ಮಾತ್ರ ಸಮರ್ಥವಾಗಿದೆ ಎಂಬ ಅಭಿಪ್ರಾಯವನ್ನು ವಿಶ್ವದ ವಿವಿಧ ದೇಶಗಳಿಂದ ಕೇಳಿಬರುತ್ತಿದೆ ಎಂದು ಹೇಳಿದರು.
ಭಾರತದ ಸ್ವಭಾವದಲ್ಲೇ ಶಾಂತಿ ಸ್ಥಾಪನೆ ಇರುವುದರಿಂದ, ಈ ಹೊಣೆಗಾರಿಕೆ ಭಾರತದ್ದೇ ಆಗಿದೆ ಎಂದು ಅವರು ಹೇಳಿದರು. ಭಾರತದ ಜನರು ಮಾನವೀಯತೆಯ ಧರ್ಮವನ್ನು ಅನುಸರಿಸುತ್ತಾರೆ, ಆದರೆ ಜಗತ್ತಿನ ಇತರೆ ಭಾಗಗಳು ಜಂಗಲ್ ಲಾವನ್ನು ಅನುಸರಿಸುತ್ತಿವೆ. ಈ ಅಸ್ಥಿರವಾಗಿರುವ ಜಗತ್ತಿಗೆ ಧರ್ಮದ ಆಧಾರ ನೀಡುವ ಮೂಲಕ ಸಮತೋಲನವನ್ನು ಪುನಃ ಸ್ಥಾಪಿಸುವುದು ನಮ್ಮ ಕರ್ತವ್ಯ ಎಂದರು.
ಇತ್ತೀಚೆಗೆ ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರು ಬ್ಲೂಂಬರ್ಗ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಮಧ್ಯಪ್ರಾಚ್ಯದ ಯುದ್ಧವನ್ನು ನಿಲ್ಲಿಸಲು ಭಾರತ ಪಾತ್ರವಹಿಸಬಹುದು ಎಂದು ಅಭಿಪ್ರಾಯಪಟ್ಟಿದ್ದರು. ನಮಗೆ ಯುದ್ಧ ವಿರಾಮ ಅಗತ್ಯವಿದೆ. ಯುರೋಪ್ ಅಥವಾ ಭಾರತ ಇದರಲ್ಲಿ ಭಾಗವಹಿಸಬಹುದೇ ಎಂಬುದನ್ನು ನಾನು ಯೋಚಿಸುತ್ತಿದ್ದೇನೆ. ವಿದೇಶಾಂಗ ಸಚಿವ ಜೈಶಂಕರ್ ಅವರು ಯುದ್ಧ ವಿರಾಮ ಮತ್ತು ಮಾತುಕತೆಗಳ ಅಗತ್ಯವನ್ನು ಒತ್ತಿಹೇಳಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ, ಭಾರತಕ್ಕೆ ಯುಎಇಯ ಮೊದಲ ರಾಯಭಾರಿಯಾಗಿದ್ದ ಹುಸೇನ್ ಹಸನ್ ಮಿರ್ಜಾ ಅವರು ಕೂಡ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೇವಲ ಒಂದು ಫೋನ್ ಕರೆ ಮೂಲಕವೇ ಈ ಸಂಘರ್ಷವನ್ನು ಪರಿಹರಿಸಬಹುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




