ರಾಹುಲ್ ಗಾಂಧಿಯನ್ನು 'ಟಪೋರಿ' ಎಂದು ಕರೆದ ಕಂಗನಾ; ಕಾರಣ ಏನು ಗೊತ್ತಾ? Video
"ನಾವು ಮಹಿಳೆಯರು, ಅವರು(ರಾಹುಲ್ ಗಾಂಧಿ) ನಡೆದುಕೊಳ್ಳುವ ರೀತಿ ನೋಡಿದ್ರೆ ನಮಗೆ ತುಂಬಾ ಇರುಸುಮುರುಸಾಗುತ್ತದೆ. ಅವರು 'ಟಪೋರಿ'ಯಂತೆ ಬಂದು ಸಂದರ್ಶನಗಳನ್ನು ನೀಡುವವರನ್ನು ಕೆಣಕುತ್ತಾರೆ.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತರ ಸಂಸದರೊಂದಿಗೆ ವರ್ತಿಸಿದ ರೀತಿಯನ್ನು ಪ್ರಶ್ನಿಸಿದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಕಂಗನಾ ರನೌತ್ ಅವರು, ಲೋಕಸಭೆಯ ವಿರೋಧ ಪಕ್ಷದ ನಾಯಕ ಸಂದರ್ಶನ ನೀಡುವವರನ್ನು "ಕೆಣಕುತ್ತಿದ್ದಾರೆ" ಎಂದು ಬುಧವಾರ ಆರೋಪಿಸಿದ್ದಾರೆ.
ANI ಜೊತೆ ಮಾತನಾಡಿದ ರನೌತ್, "ನಾವು ಮಹಿಳೆಯರು, ಅವರು(ರಾಹುಲ್ ಗಾಂಧಿ) ನಡೆದುಕೊಳ್ಳುವ ರೀತಿ ನೋಡಿದ್ರೆ ನಮಗೆ ತುಂಬಾ ಇರುಸುಮುರುಸಾಗುತ್ತದೆ. ಅವರು 'ಟಪೋರಿ'ಯಂತೆ ಬಂದು ಸಂದರ್ಶನಗಳನ್ನು ನೀಡುವವರನ್ನು ಕೆಣಕುತ್ತಾರೆ. ಆದರೆ ಅವರು ತಮ್ಮ ಸಹೋದರಿಯ ನಡವಳಿಕೆ ನೋಡಿ ಕಲಿಯಬೇಕು. ಇದು ನಾಚಿಕೆಗೇಡಿನ ಸಂಗತಿ" ಎಂದು ಕಿಡಿ ಕಾರಿದ್ದಾರೆ.
ರಾಹುಲ್ ಗಾಂಧಿ ಸಂಸತ್ತಿನ ಮಕರ ದ್ವಾರ ಪ್ರವೇಶದ್ವಾರದಲ್ಲಿ ಚಹಾ ಮತ್ತು ಬಿಸ್ಕತ್ತು ಸೇವಿಸಿದ ಘಟನೆಗೆ ಕ್ಷಮೆಯಾಚಿಸಬೇಕೆಂದು 84 ಮಾಜಿ ಅಧಿಕಾರಿಗಳು, 116 ಮಾಜಿ ಸೈನಿಕರು ಮತ್ತು ನಾಲ್ವರು ವಕೀಲರು ಪತ್ರ ಬರೆದ ನಂತರ ಕಂಗನಾ ಈ ಹೇಳಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್ಪಿ ವೈದ್ ನೇತೃತ್ವದಲ್ಲಿ ಬರೆದ ಪತ್ರದಲ್ಲಿ, ಮಾರ್ಚ್ 12 ರ ಘಟನೆ "ತೀವ್ರ ಕಳವಳಕಾರಿ" ಮತ್ತು "ಸಂಸದೀಯ ಅಧಿಕಾರದ ಪ್ರಜ್ಞಾಪೂರ್ವಕ ನಿರ್ಲಕ್ಷ್ಯ" ಎಂದು ಹೇಳಲಾಗಿದೆ.
ಎಎನ್ಐ ಜೊತೆ ಮಾತನಾಡಿದ ಎಸ್ಪಿ ವೈದ್ ಅವರು, ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ನಡವಳಿಕೆ ವಿರೋಧ ಪಕ್ಷದ ನಾಯಕನ ನಡವಳಿಕೆಗೆ ತಕ್ಕುದಲ್ಲ ಮತ್ತು ಇದು ದುರಹಂಕಾರ"ವನ್ನು ತೋರಿಸುತ್ತದೆ ಎಂದಿದ್ದಾರೆ.

Watch | ಸಂಸತ್ ಮುಂದೆಯೇ ಟೀ ಕುಡೀತಾರೆ, ಸಮೋಸಾ ತಿನ್ತಾರೆ; ದೇಶಕ್ಕೇ ಅವಮಾನ- ರಾಹುಲ್ ವಿರುದ್ಧ ಅಮಿತ್ ಶಾ ವಾಗ್ದಾಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


