ಹಾರ್ಮುಜ್ ಮೂಲಕ ಗುಜರಾತ್ ತಲುಪಿದ LPG ಹೊತ್ತ ಮತ್ತೊಂದು ಹಡಗು 'ನಂದಾ ದೇವಿ'; Video
ಮೊದಲ ಹಡಗು 'ಶಿವಾಲಿಕ್' ಸೋಮವಾರ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿತು. ಇಂದು 'ನಂದಾ ದೇವಿ' ದೇವಭೂಮಿ ದ್ವಾರಕಾ ಜಿಲ್ಲೆಯ ವಾಡಿನಾರ್ ಬಂದರಿಗೆ ಆಗಮಿಸಿದೆ.

ಗಾಂಧಿನಗರ: ಮಧ್ಯ ಪ್ರಾಚ್ಯ ಸಂಘರ್ಷದ ನಡುವೆ ಭಾರತಕ್ಕೆ ಬಿಗ್ ರಿಲೀಫ್ ಸಿಕ್ಕಿದ್ದು, ಭಾರತದ ಎರಡನೇ ಎಲ್‌ಪಿಜಿ ವಾಹಕ, ಸುಮಾರು 46,500 ಮೆಟ್ರಿಕ್ ಟನ್ ಎಲ್‌ಪಿಜಿ(LPG) ಹೊತ್ತ 'ನಂದಾ ದೇವಿ' ಹಡಗು ಮಂಗಳವಾರ ಗುಜರಾತ್‌ನ ವಾಡಿನಾರ್ ಬಂದರಿಗೆ ಸುರಕ್ಷಿತವಾಗಿ ಆಗಮಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊದಲ ಹಡಗು 'ಶಿವಾಲಿಕ್' ಸೋಮವಾರ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿತು. ಇಂದು 'ನಂದಾ ದೇವಿ' ದೇವಭೂಮಿ ದ್ವಾರಕಾ ಜಿಲ್ಲೆಯ ವಾಡಿನಾರ್ ಬಂದರಿಗೆ ಆಗಮಿಸಿದ್ದು, ಎಲ್‌ಪಿಜಿ(ದ್ರವೀಕೃತ ಪೆಟ್ರೋಲಿಯಂ ಅನಿಲ) ವನ್ನು ಮತ್ತೊಂದು ಸಣ್ಣ ಹಡಗಿಗೆ ವರ್ಗಾಯಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ದೀನ್‌ದಯಾಳ್ ಬಂದರು ಪ್ರಾಧಿಕಾರದ ಅಧ್ಯಕ್ಷ ಸುಶೀಲ್ ಕುಮಾರ್ ಸಿಂಗ್ ವರದಿಗಾರರಿಗೆ ತಿಳಿಸಿದ್ದಾರೆ.
"46,500 ಮೆಟ್ರಿಕ್ ಟನ್ ಎಲ್‌ಪಿಜಿ ಸರಕನ್ನು ಇದರಲ್ಲಿ ತರಲಾಗಿದೆ. ಈ ಸರಕನ್ನು ಬಿಡಬ್ಲ್ಯೂ ಬಿರ್ಚ್ ಎಂಬ ಹಡಗಿಗೆ ವರ್ಗಾಯಿಸಲಾಗುವುದು. ನಂತರ ಅದು ಪೂರ್ವ ಕರಾವಳಿಯ ಎನ್ನೋರ್(ತಮಿಳುನಾಡು) ಮತ್ತು ಹಲ್ಡಿಯಾ(ಪಶ್ಚಿಮ ಬಂಗಾಳ) ಬಂದರುಗಳಿಗೆ ತಲುಪಿಸುತ್ತದೆ" ಎಂದು ಅವರು ಹೇಳಿದರು.
"ಇದು ವಡಿನಾರ್‌ನಲ್ಲಿ ನಾವು ನಿರಂತರವಾಗಿ ನಡೆಸುತ್ತಿರುವ ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನವಾಗಿದೆ. ಆದಾಗ್ಯೂ, ಸಚಿವಾಲಯ ಹೊರಡಿಸಿರುವ ಪ್ರಸ್ತುತ ನಿರ್ದೇಶನವು ಒಳಬರುವ ಎಲ್‌ಪಿಜಿ ಹಡಗುಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



