ಜೆಡಿ(ಯು) ತೊರೆದ ಕೆ.ಸಿ ತ್ಯಾಗಿ; ಮುಂದಿನ ನಡೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ
ಜೆಡಿ(ಯು) ಪ್ರಧಾನ ಕಾರ್ಯದರ್ಶಿ, ಮುಖ್ಯ ವಕ್ತಾರ ಮತ್ತು ರಾಜಕೀಯ ಸಲಹೆಗಾರ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಕೆಸಿ ತ್ಯಾಗಿ ಅವರು ಈಗ ಜೆಡಿ(ಯು)ಗೆ ಗುಡ್ ಬೈ ಹೇಳಿದ್ದಾರೆ.

ನವದೆಹಲಿ: ಜೆಡಿ(ಯು) ಹಿರಿಯ ನಾಯಕ ಕೆ.ಸಿ. ತ್ಯಾಗಿ ಮಂಗಳವಾರ ಪಕ್ಷವನ್ನು ತೊರೆದಿದ್ದಾರೆ ಮತ್ತು ತಮ್ಮ ಮುಂದಿನ ನಡೆ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುವುದಾಗಿ ಹೇಳಿದ್ದಾರೆ.
ಜೆಡಿ(ಯು) ಪ್ರಧಾನ ಕಾರ್ಯದರ್ಶಿ, ಮುಖ್ಯ ವಕ್ತಾರ ಮತ್ತು ರಾಜಕೀಯ ಸಲಹೆಗಾರ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಕೆಸಿ ತ್ಯಾಗಿ ಅವರು ಈಗ ಜೆಡಿ(ಯು)ಗೆ ಗುಡ್ ಬೈ ಹೇಳಿದ್ದಾರೆ.
"ಹೌದು, ನಾನು ಪಕ್ಷವನ್ನು ತೊರೆದಿದ್ದೇನೆ" ಎಂದು ತ್ಯಾಗಿ ಪಿಟಿಐಗೆ ತಿಳಿಸಿದ್ದಾರೆ.
"ಪಕ್ಷದ ಸದಸ್ಯತ್ವ ಅಭಿಯಾನ ಕೊನೆಗೊಂಡಿದೆ. ಈ ಬಾರಿ ನಾನು ಪಕ್ಷದ ಸದಸ್ಯತ್ವವನ್ನು ನವೀಕರಿಸಿಲ್ಲ" ಎಂದು ಮಾಜಿ ರಾಜ್ಯಸಭಾ ಸದಸ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ಸಮಾಜದ ವಂಚಿತ ವರ್ಗಗಳು ಸೇರಿದಂತೆ ದೀನದಲಿತರು, ರೈತರು ಮತ್ತು ಕೃಷಿಕರ ಹಿತಾಸಕ್ತಿಗಳಿಗೆ ಸಂಬಂಧಿಸಿದ "ದೊಡ್ಡ ಮತ್ತು ವಿಶಾಲವಾದ ಸೈದ್ಧಾಂತಿಕ ಅಂಶಗಳಿಗೆ" ತಮ್ಮ ಬದ್ಧತೆ " ಅಷ್ಟೇ ದೃಢವಾಗಿದೆ" ಎಂದು ಅವರು ಪ್ರತಿಪಾದಿಸಿದ್ದಾರೆ.
"ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನನ್ನ ಒಡನಾಡಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಗ್ಗೆ ನನಗೆ ವೈಯಕ್ತಿಕ ಗೌರವ ಇದೆ. ಅದು ಬದಲಾಗಿಲ್ಲ" ಎಂದು ತ್ಯಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



