ಕಡ್ಡಾಯ ಮುಟ್ಟಿನ ರಜೆ: 'ಹೀಗಾದ್ರೆ.. ಯಾವುದೇ ಕಂಪನಿಗಳೂ ಮಹಿಳೆಯರನ್ನ ಕೆಲಸಕ್ಕೆ ಸೇರಿಸಿಕೊಳ್ಳಲ್ಲ'; ಬೇಡಿಕೆ ತಿರಸ್ಕರಿಸಿದ Supreme Court
ಮಾಲೀಕರು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂಜರಿಯಬಹುದು, ಮತ್ತು ಮಹಿಳೆಯರಲ್ಲಿ ಕೀಳರಿಮೆ ಬೆಳೆಯಬಹುದು. ಇಂತಹ ಕಾನೂನು ಅವರ ವೃತ್ತಿಜೀವನವನ್ನು ಅಂತ್ಯಗೊಳಿಸಬಹುದು..

ನವದೆಹಲಿ: ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ ಕಾನೂನು ತರುವ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಇದರಿಂದ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಭಿಪ್ರಾಯಪಟ್ಟಿದೆ.
ಮುಟ್ಟಿನ ರಜೆಗಾಗಿ ಕಡ್ಡಾಯ ಕಾನೂನು ತರಬೇಕು ಎನ್ನುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, 'ಮಾಲೀಕರು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂಜರಿಯಬಹುದು, ಮತ್ತು ಮಹಿಳೆಯರಲ್ಲಿ ಕೀಳರಿಮೆ ಬೆಳೆಯಬಹುದು. ಇಂತಹ ಕಾನೂನು ಅವರ ವೃತ್ತಿಜೀವನವನ್ನು ಅಂತ್ಯಗೊಳಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಯಾಯಮೂರ್ತಿ ಸೂರ್ಯ ಕಾಂತ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯಗಳು ಮುಟ್ಟಿನ ರಜೆ ನಿಯಮಗಳನ್ನು ರೂಪಿಸಲು ನಿರ್ದೇಶನ ಕೋರಿ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಸಲ್ಲಿಸಿದ ಅರ್ಜಿಯನ್ನು ಇಂದು(ಮಾರ್ಚ್13)ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳು 'ಇಂತಹ ಕಾನೂನು ದುಡಿಯುವ ಮಹಿಳೆಯರಲ್ಲಿ ಮಾನಸಿಕ ಭಯ ಅಥವಾ ಅನಿಸಿಕೆಯನ್ನು ಉಂಟುಮಾಡುತ್ತದೆ. ಅವರು ಪುರುಷರಿಗಿಂತ ಕಡಿಮೆ ಎಂಬ ಭಾವನೆಯನ್ನು ಹುಟ್ಟುಹಾಕುತ್ತದೆ ಎಂದು ವಾದಿಸಿದ್ದಾರೆ.
ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿ, ಈ ಕಾನೂನನ್ನು ಕಡ್ಡಾಯ ಮಾಡಿದರೆ ಹೆಣ್ಣುಮಕ್ಕಳಿಗೆ ಯಾರೂ ಕೆಲಸ ಕೊಡುವುದಿಲ್ಲ ಬದಲಾಗಿ, ಅಲ್ಲಿಗೆ ಅವರ ವೃತ್ತಿ ಜೀವನ ಕೊನೆಗೊಳ್ಳುತ್ತದೆ, ನೀವು ಮನೆಯಲ್ಲಿಯೇ ಕುಳಿತುಕೊಳ್ಳಿ ಎಂದು ಹೇಳುತ್ತಾರೆ.
ಜಾಗೃತಿ ಮೂಡಿಸುವುದು ಮತ್ತು ಸಂವೇದನೆ ಮೂಡಿಸುವುದು ಬೇರೆ, ಆದರೆ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಕಾನೂನನ್ನು ನೀವು ತಂದ ತಕ್ಷಣ, ಯಾರೂ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮಹಿಳೆಯರ ಕೆಲಸಕ್ಕೆ ಸೇರಿಸಿಕೊಳ್ಳಲ್ಲ
ನಿರ್ದಿಷ್ಟವಾಗಿ ಹೇಳುವುದಾದರೆ, ಅರ್ಜಿದಾರರು ಹೆಣ್ಣುಮಕ್ಕಳು, ಅದು ವಿದ್ಯಾರ್ಥಿನಿಯರಾಗಿರಲಿ ಅಥವಾ ಕೆಲಸ ಮಾಡುವ ವೃತ್ತಿಪರರಾಗಿರಲಿ, ಮುಟ್ಟಿನ ಸಮಯದಲ್ಲಿ ರಜೆ ನೀಡುವುದನ್ನು ಕಡ್ಡಾಯಗೊಳಿಸಬೇಕೆಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
2013 ರಲ್ಲಿ ಕೇರಳ ಸರ್ಕಾರವು ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಮುಟ್ಟಿನ ರಜೆಯನ್ನು ಮಂಜೂರು ಮಾಡಿತ್ತು ಎಂದು ಹಿರಿಯ ವಕೀಲ ಎಂ.ಆರ್. ಶಂಶಾದ್ ಹೇಳಿದ್ದಾರೆ.
ಆಗ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಧಾರವು ಲಿಂಗ ನ್ಯಾಯಯುತ ಸಮಾಜವನ್ನು ಸಾಕಾರಗೊಳಿಸುವ ಬದ್ಧತೆಯ ಭಾಗವಾಗಿದೆ ಎಂದು ಹೇಳಿದ್ದರು. ಖಾಸಗಿ ಕಂಪನಿಗಳು ಇದೇ ರೀತಿಯ ಸಡಿಲಿಕೆಗಳನ್ನು ಮಾಡಿವೆ ಎಂದು ಶಂಶಾದ್ ವಾದಿಸಿದ್ದರು.
ಜನವರಿಯಲ್ಲಿ ಸುಪ್ರೀಂ ಕೋರ್ಟ್ ಮುಟ್ಟಿನ ನೈರ್ಮಲ್ಯದ ಬಗ್ಗೆ ನಿರ್ಣಾಯಕ ತೀರ್ಪು ನೀಡಿತು., ಅದು ‘ಹೆಣ್ಣು ಮಗುವಿನ ಜೀವನ, ಘನತೆ, ಆರೋಗ್ಯ ಮತ್ತು ಶಿಕ್ಷಣದ ಹಕ್ಕಿನ ಅವಿಭಾಜ್ಯ ಅಂಗ’ ಎಂದು ಹೇಳಿತ್ತು.
ಉಚಿತ ಸ್ಯಾನಿಟರಿ ನ್ಯಾಪ್ಕಿನ್ಗಳು, ಕ್ರಿಯಾತ್ಮಕ ಲಿಂಗ-ಪ್ರತ್ಯೇಕ ಶೌಚಾಲಯಗಳು ಮತ್ತು ಮುಟ್ಟಿನ ಆರೋಗ್ಯ ಜಾಗೃತಿ ಅಭಿಯಾನಗಳನ್ನು ನಡೆಸಲು ನ್ಯಾಯಾಲಯವು ಎಲ್ಲಾ ಸರ್ಕಾರಗಳಿಗೆ ಕಡ್ಡಾಯ ನಿರ್ದೇಶನಗಳನ್ನು ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




