ದೇಶ

ರಾಹುಲ್ ಗಾಂಧಿ ರಾಜಕೀಯಕ್ಕೆ ಬರದಿದ್ದರೆ ಏನು ಮಾಡುತ್ತಿದ್ದರು ಗೊತ್ತಾ? ಇಲ್ಲಿದೆ ಅಚ್ಚರಿಯ ಉತ್ತರ!

ಇಂದು ತಿರುವನಂತಪುರಂನ ಟೆಕ್ನೋಪಾರ್ಕ್‌ನಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

ರಾಹುಲ್ ಗಾಂಧಿ ರಾಜಕೀಯಕ್ಕೆ ಬರದಿದ್ದರೆ ಏನು ಮಾಡುತ್ತಿದ್ದರು ಗೊತ್ತಾ? ಇಲ್ಲಿದೆ ಅಚ್ಚರಿಯ ಉತ್ತರ!
ರಾಹುಲ್ ಗಾಂಧಿ
Published On :

ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಾವು ರಾಜಕೀಯಕ್ಕೆ ಬರದಿದ್ದರೆ, ಬಹುಶಃ ಏರೋಸ್ಪೇಸ್ ಜಗತ್ತಿನ ಉದ್ಯಮಿಯಾಗಿರುತ್ತಿದ್ದೆ ಎಂದು ಶನಿವಾರ ಹೇಳಿದ್ದಾರೆ.

ಇಂದು ತಿರುವನಂತಪುರಂನ ಟೆಕ್ನೋಪಾರ್ಕ್‌ನಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಈ ಪ್ರಶ್ನೆಗೆ ಉತ್ತರಿಸಿದ್ದಾರೆ.

ನನ್ನನ್ನು ಅನೇಕ ಜನ ಪಕ್ಕಾ ರಾಜಕಾರಣಿ ಎಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ನಾನು ಇತರ ಹಲವು ಕೆಲಸಗಳನ್ನು ಮಾಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಾವು ಯಾರನ್ನಾದರೂ ರಾಜಕಾರಣಿ, ತಂತ್ರಜ್ಞ, ಟೆಕ್ಕಿ ಅಥವಾ ಎಂಜಿನಿಯರ್ ಎಂದು ಕರೆಯುವುದು ಅವರನ್ನು "ಸಂಕುಚಿತಗೊಳಿಸದಂತೆ" ಎಂದು ರಾಹುಲ್ ಗಾಂಧಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

"ನಾನು ರಾಜಕೀಯ ಪಕ್ಷದಲ್ಲಿ ಕೆಲಸ ಮಾಡದಿದ್ದರೆ, ನಾನು ಬಹುಶಃ ಏರೋಸ್ಪೇಸ್ ಜಗತ್ತಿನಲ್ಲಿ ಕೆಲವು ಉದ್ಯಮ ನಡೆಸುತ್ತಿದ್ದೆ. ನಾನು ಪೈಲಟ್, ನನ್ನ ತಂದೆ ಮತ್ತು ನನ್ನ ಚಿಕ್ಕಪ್ಪ ಕೂಡ ಪೈಲಟ್ ಆಗಿದ್ದರು. ಆದ್ದರಿಂದ, ನಮಗೆ ಸ್ವಲ್ಪ ಒತ್ತಡವಿದೆ" ಎಂದು ಅವರು ಹೇಳಿದರು.

"ನಾವು ಎಲ್ಲದರ ಬಗ್ಗೆಯೂ ಕುತೂಹಲ ಹೊಂದಿರಬೇಕು. ನೀವು ಎಲ್ಲದಕ್ಕೂ ಮುಕ್ತ ಮನಸ್ಸನ್ನು ಹೊಂದಿರಬೇಕು" ಎಂದು ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.