ದೇಶ

PM-ಕಿಸಾನ್ ಯೋಜನೆಯಡಿ ಮಹಾರಾಷ್ಟ್ರ ರೈತನಿಗೆ ಕೇವಲ '1 ಪೈಸೆ' ಜಮೆ; ಅನ್ನದಾತನಿಗೆ 'ಅಪಹಾಸ್ಯ'

ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ತನ್ನ ಬ್ಯಾಂಕ್ ಖಾತೆಗೆ ರೂ. 0.01 ಜಮೆ ಮಾಡಲಾಗಿದೆ ಎಂಬ ಸಂದೇಶವನ್ನು ನನ್ನ ತಾಯಿ ಲಕ್ಷ್ಮಿಬಾಯಿ ಸ್ವೀಕರಿಸಿದಾಗ ಕುಟುಂಬವು ದಿಗ್ಭ್ರಮೆಗೊಂಡಿತು ಎಂದು ಹೇಳಿದ್ದಾರೆ.

PM-ಕಿಸಾನ್ ಯೋಜನೆಯಡಿ ಮಹಾರಾಷ್ಟ್ರ ರೈತನಿಗೆ ಕೇವಲ '1 ಪೈಸೆ' ಜಮೆ; ಅನ್ನದಾತನಿಗೆ 'ಅಪಹಾಸ್ಯ'
ಸಾಂದರ್ಭಿಕ ಚಿತ್ರ
Published On :

ಮುಂಬೈ: ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು, ಮಹಾರಾಷ್ಟ್ರದ ರೈತರೊಬ್ಬರ ಖಾತೆ ಕೇವಲ '1 ಪೈಸೆ' ಜಮೆ ಆಗಿರುವುದಾಗಿ ಅವರ ಮೊಬೈಲ್ ಫೋನ್‌ಗೆ ಸಂದೇಶ ಬಂದಿದೆ. ಅವರ ಖಾತೆಗೆ 2 ಸಾವಿರ ರೂ. ಜಮೆ ಮಾಡುವ ಬದಲು ಕೇವಲ ಒಂದು ಪೈಸೆ ಮಾತ್ರ ಜಮಾ ಆಗಿದ್ದು, ಅನ್ನದಾತನ ದ್ರೋಹ ಮಾಡಲಾಗಿದೆ.

ಆದಾಗ್ಯೂ, ಮಂಗಳವಾರ ಕೃಷಿ ಇಲಾಖೆಯು, ಈ ಸಂದೇಶವು ತಾಂತ್ರಿಕ ದೋಷದಿಂದ ಬಂದಿದೆ. ಸರಿಯಾದ ಕಂತನ್ನು ಈಗಾಗಲೇ ಸಮಸ್ಯೆಯಿಲ್ಲದೆ ಪ್ರಕ್ರಿಯೆಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಸೋಮವಾರ ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿದ ಭಂಡಾರ ಜಿಲ್ಲೆಯ ಜೆವಾನಾಲ ಗ್ರಾಮದ 65 ವರ್ಷದ ರೈತ ಮಗ ಖೇಮರಾಜ್ ಗಿರೆಪುಂಜೆ, ಪಿಎಂ-ಕಿಸಾನ್ ಯೋಜನೆಯಡಿಯಲ್ಲಿ ತನ್ನ ಬ್ಯಾಂಕ್ ಖಾತೆಗೆ ರೂ. 0.01 ಜಮೆ ಮಾಡಲಾಗಿದೆ ಎಂಬ ಸಂದೇಶವನ್ನು ನನ್ನ ತಾಯಿ ಲಕ್ಷ್ಮಿಬಾಯಿ ಸ್ವೀಕರಿಸಿದಾಗ ಕುಟುಂಬವು ದಿಗ್ಭ್ರಮೆಗೊಂಡಿತು ಎಂದು ಹೇಳಿದ್ದಾರೆ.

ನಿರ್ಣಾಯಕ ಖಾರಿಫ್ ಬಿತ್ತನೆ ಋತು ಪ್ರಾರಂಭವಾಗುತ್ತಿದ್ದಂತೆ ಬೀಜ ಮತ್ತು ರಸಗೊಬ್ಬರಕ್ಕೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಅವರು ಹೇಳಿಕೊಂಡರು.

ತಾಂತ್ರಿಕ ದೋಷದಿಂದಾಗಿ ಫಲಾನುಭವಿಗೆ ಸಂದೇಶ ಹೋಗಿರಬಹುದು. ಆದರೆ ದಾಖಲೆಗಳ ಪ್ರಕಾರ, ರೈತನ ಬ್ಯಾಂಕ್ ಖಾತೆಗೆ ಸಾಮಾನ್ಯ 2,000 ರೂ. ಯಶಸ್ವಿಯಾಗಿ ಜಮಾ ಆಗಿದೆ ಎಂದು ಭಂಡಾರ ಜಿಲ್ಲಾ ಕೃಷಿ ಅಧಿಕಾರಿ ಸಂಗೀತಾ ಮಾನೆ ಅವರು ಸ್ಪಷ್ಟಪಡಿಸಿದ್ದಾರೆ.

ಜೂನ್‌ 20 ರಂದು ಪ್ರಧಾನಿ ನರೇಂದ್ರ ಮೋದಿ ಅವರು, ದೇಶಾದ್ಯಂತ ಇರುವ 9.44 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.