ದೇಶ

Video: ಹಲವು ವರ್ಷಗಳ ಬಳಿಕ ತ್ರಯಂಬಕೇಶ್ವರ ದೇಗುಲ ಅಮೃತಕುಂಡದಲ್ಲಿ ಶಿವಲಿಂಗ ದರ್ಶನ; ಭಕ್ತರಲ್ಲಿ ಸಂಭ್ರಮ

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ದೇವಾಲಯದ ಸಂರಕ್ಷಣಾ ಕಾರ್ಯದ ಅಂಗವಾಗಿ ಸುಮಾರು 65 ಅಡಿ ಆಳದ ಅಮೃತಕುಂಡದ ನೀರನ್ನು ಹೊರಹಾಕಿ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು.

Video: ಹಲವು ವರ್ಷಗಳ ಬಳಿಕ ತ್ರಯಂಬಕೇಶ್ವರ ದೇಗುಲ ಅಮೃತಕುಂಡದಲ್ಲಿ ಶಿವಲಿಂಗ ದರ್ಶನ; ಭಕ್ತರಲ್ಲಿ ಸಂಭ್ರಮ
ತ್ರಯಂಬಕೇಶ್ವರ ದೇಗುಲ ಅಮೃತಕುಂಡದಲ್ಲಿ ಶಿವಲಿಂಗ ದರ್ಶನ
Published On :

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಪ್ರಸಿದ್ಧ ತ್ರಯಂಬಕೇಶ್ವರ ಜ್ಯೋತಿರ್ಲಿಂಗ ದೇವಾಲಯದಲ್ಲಿ ಹಲವು ವರ್ಷಗಳ ಬಳಿಕ ಅಪರೂಪದ ದೃಶ್ಯವೊಂದು ಭಕ್ತರ ಗಮನ ಸೆಳೆದಿದೆ.

ದೇವಾಲಯ ಆವರಣದಲ್ಲಿರುವ ಐತಿಹಾಸಿಕ ಅಮೃತಕುಂಡದ ತಳಭಾಗದಲ್ಲಿರುವ ಶಿವಲಿಂಗವು ಹಲವು ವರ್ಷಗಳ ನಂತರ ದರ್ಶನ ನೀಡಿದ್ದು, ಭಕ್ತರಲ್ಲಿ ಭಕ್ತಿ ಹಾಗೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ದೇವಾಲಯದ ಸಂರಕ್ಷಣಾ ಕಾರ್ಯದ ಅಂಗವಾಗಿ ಸುಮಾರು 65 ಅಡಿ ಆಳದ ಅಮೃತಕುಂಡದ ನೀರನ್ನು ಹೊರಹಾಕಿ ಸ್ವಚ್ಛತಾ ಕಾರ್ಯ ಕೈಗೊಂಡಿತ್ತು.

ಈ ವೇಳೆ ಕುಂಡದ ತಳಭಾಗದಲ್ಲಿದ್ದ ಶಿವಲಿಂಗವು ಸ್ಪಷ್ಟವಾಗಿ ಗೋಚರಿಸಿದೆ.

ಅಂದಹಾಗೆ ಅಮೃತಕುಂಡವು ಪೇಶ್ವೆ ಕಾಲದ ಐತಿಹಾಸಿಕ ಪರಂಪರೆಯನ್ನು ಹೊಂದಿದೆ ಎಂದು ನಂಬಲಾಗುತ್ತದೆ. ಈ ಕುಂಡದ ನೀರನ್ನು ತ್ರಯಂಬಕೇಶ್ವರ ದೇವಾಲಯದಲ್ಲಿ ಪ್ರತಿನಿತ್ಯ ನಡೆಯುವ ಪೂಜೆ ಹಾಗೂ ಅಭಿಷೇಕ ವಿಧಿವಿಧಾನಗಳಿಗೆ ಬಳಸಲಾಗುತ್ತದೆ.

ಧಾರ್ಮಿಕವಾಗಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಡುವ ಈ ಕುಂಡವು ದೇವಾಲಯದ ಪ್ರಮುಖ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ಶಿವಲಿಂಗ ದರ್ಶನದ ಸುದ್ದಿ ಹರಡುತ್ತಿದ್ದಂತೆ ಭಕ್ತರಲ್ಲಿ ಕುತೂಹಲ ಹೆಚ್ಚಾಗಿದ್ದು, ದೇಗುಲದತ್ತ ಭಕ್ತರ ಸಾಗರವೇ ದರ್ಶನಕ್ಕಾಗಿ ಹರಿದುಬರುತ್ತಿದೆ.

ಆದರೆ ಸುರಕ್ಷತಾ ಕಾರಣಗಳಿಂದ ಅಮೃತಕುಂಡದೊಳಗೆ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ದೇವಾಲಯ ಆಡಳಿತ ತಿಳಿಸಿದೆ. ಹೀಗಾಗಿ ಭಕ್ತರು ದೂರದಿಂದಲೇ ಶಿವಲಿಂಗದ ದರ್ಶನ ಪಡೆಯುತ್ತಿದ್ದಾರೆ.

ತ್ರಯಂಬಕೇಶ್ವರ ದೇವಾಲಯವು ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ. ಹಲವು ವರ್ಷಗಳ ಬಳಿಕ ಅಮೃತಕುಂಡದಲ್ಲಿ ಶಿವಲಿಂಗವು ಗೋಚರಿಸಿರುವುದು ಧಾರ್ಮಿಕ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗುತ್ತಿದ್ದು, ಭಕ್ತರಲ್ಲಿ ವಿಶೇಷ ಭಾವನಾತ್ಮಕ ಸಂಭ್ರಮಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.