ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಕೇರಳ ಕ್ರಿಕೆಟ್ ಕೋಚ್‌ಗೆ 99 ವರ್ಷ ಜೈಲು ಶಿಕ್ಷೆ; ಇನ್ನೂ 3 ಪ್ರಕರಣ ಬಾಕಿ!
ತಿರುವನಂತಪುರಂನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು, ನಗರದ ಶ್ರೀವರಾಹಂ ನಿವಾಸಿ ಮನುಗೆ 48 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಮೂರನೇ ಪ್ರಕರಣದಲ್ಲಿ 79,000 ರೂ. ದಂಡ ವಿಧಿಸಿದೆ.

ತಿರುವನಂತಪುರಂ: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಮೂರು ಪ್ರತ್ಯೇಕ ಪೋಕ್ಸೊ ಪ್ರಕರಣಗಳಲ್ಲಿ ತಪ್ಪಿತಸ್ಥರಾದ ಕೇರಳ ಕ್ರಿಕೆಟ್ ಅಸೋಸಿಯೇಷನ್(ಕೆಸಿಎ) ಮಾಜಿ ಕೋಚ್ ಎಂ ಮನು(40)ಗೆ ಈಗ ಒಟ್ಟು 99 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್ನೂ ಮೂರು ಪ್ರಕರಣಗಳ ತೀರ್ಪು ಬಾಕಿ ಇರುವುದರಿಂದ, ಒಟ್ಟು ಜೈಲು ಶಿಕ್ಷೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇತ್ತೀಚಿನ ತೀರ್ಪಿನಲ್ಲಿ, ತಿರುವನಂತಪುರಂನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯವು, ನಗರದ ಶ್ರೀವರಾಹಂ ನಿವಾಸಿ ಮನುಗೆ 48 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಮೂರನೇ ಪ್ರಕರಣದಲ್ಲಿ 79,000 ರೂ. ದಂಡ ವಿಧಿಸಿದೆ. ಮೂರನೇ ಪ್ರಕರಣದಲ್ಲಿಯೂ ವಿಶೇಷ ನ್ಯಾಯಾಧೀಶೆ ಅಂಜು ಮೀರಾ ಬಿರ್ಲಾ ತೀರ್ಪು ನೀಡಿದ್ದಾರೆ.
ನಾಲ್ಕನೇ ಪ್ರಕರಣದಲ್ಲೂ ಮನು ತಪ್ಪಿತಸ್ಥನೆಂದು ನ್ಯಾಯಾಲಯವು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 427 ರ ಅಡಿಯಲ್ಲಿ ನ್ಯಾಯಾಲಯವು, ಇತ್ತೀಚಿನ ಶಿಕ್ಷೆಯು ಹಿಂದಿನ ಶಿಕ್ಷೆಗಳೊಂದಿಗೆ ಸತತವಾಗಿ ಮುಂದುವರಿಯುತ್ತವೆ ಎಂದು ಹೇಳಿದೆ. ಮನುಗೆ ಈ ಹಿಂದೆ ಮೊದಲ ಪ್ರಕರಣದಲ್ಲಿ 16 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಎರಡನೇ ಪ್ರಕರಣದಲ್ಲಿ 35 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಶನಿವಾರ 48 ವರ್ಷಗಳ ಶಿಕ್ಷೆಯೊಂದಿಗೆ, ಕಾಮುನಿಗೆ ಒಟ್ಟು 99 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ತರಬೇತಿಗೆ ಬರುತ್ತಿದ್ದವರಿಗೆ ಲೈಂಗಿಕ ಕಿರುಕುಳ
ಕೇರಳ ಕ್ರಿಕೆಟ್ ಅಸೋಸಿಯೇಷನ್ ಪರವಾಗಿ ಕ್ರಿಕೆಟ್ ತರಬೇತಿ ನೀಡುತ್ತಿದ್ದ ಮನು ಅವರ ಬಳಿ 2018 ರಲ್ಲಿ ಯುವ ಆಟಗಾರ್ತಿಯೊಬ್ಬರು ತರಬೇತಿ ಪಡೆಯುತ್ತಿದ್ದರು. ಆ ಸಮಯದಲ್ಲಿ, ಮನು ಆಟಗಾರ್ತಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕ್ರಿಕೆಟ್ ಕೋಚ್ನ ಈ ನಡೆಯಿಂದ ಆಘಾತಕ್ಕೊಳಗಾದ ಯುವತಿ ಈ ಘಟನೆಯ ನಂತರ ತರಬೇತಿಗೆ ಬರುವುದನ್ನು ನಿಲ್ಲಿಸಿದ್ದಾರೆ. ತನ್ನ ಹೀನ ಕೃತ್ಯವನ್ನು ಇಲ್ಲಿಗೆ ನಿಲ್ಲಿಸದ ಮನು ಮತ್ತಷ್ಟು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಒಟ್ಟು 6 ಪ್ರಕರಣ ದಾಖಲು
ತರಬೇತಿಗೆಂದು ಬರುತ್ತಿದ್ದ ಯುವತಿಯರನ್ನು ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಮನು, ಯುವತಿಯರ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಅವುಗಳನ್ನು ಮುಂದಿಟ್ಟುಕೊಂಡು ಆ ಯುವತಿಯರ ಮೇಲೆ ನಿರಂತರವಾಗಿ ಲೈಂಗಕ ದೌರ್ಜನ್ಯ ನಡೆಸಿರುವುದಾಗಿ ಸಂತ್ರಸ್ತ ಯುವತಿ ತಿರುವನಂತಪುರಂದ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಒಂದು ದೂರು ದಾಖಲಾದ ಬಳಿಕ ಇದರಿಂದ ಪ್ರೇರಿತರಾದ ಉಳಿದ ಸಂತ್ರಸ್ತೆಯರು ಕೂಡ ದೂರುಗಳನ್ನು ದಾಖಲಿಸಿದ್ದಾರೆ.
ದೂರಿನನ್ವಯ ಆಪಾದಿತ ಕೋಚ್ ಮನುವನ್ನು ತಿರುವನಂತಪುರಂ ಪೊಲೀಸರು ಬಂದಿಸಿದ್ದಾರೆ. ಮನು ವಿರುದ್ಧ ಪ್ರಸ್ತುತ 6 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ವಿಚಾರಣೆ ತಿರುವನಂತಪುರಂ ಪೋಕ್ಸೊ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



