ಇತ್ತೀಚಿಗೆ ಶಿವಸೇನೆ ಸೇರಿದ ಠಾಕ್ರೆ ಬಣದ ಸಂಸದನ ವಿರುದ್ಧ ಕ್ರಮ: ಮಹಾ ಸಿಎಂ ಫಡ್ನವೀಸ್ ಭರವಸೆ
ಇಬ್ಬರು ನಾಯಕರ ನಡುವಿನ ಜಗಳಕ್ಕೆ ಪ್ರತಿಕ್ರಿಯಿಸಿದ ಫಡ್ನವೀಸ್, ಯಾರೂ ಬೆದರಿಕೆಗಳಿಗೆ ಹೆದರಬಾರದು ಮತ್ತು ರಾಜ್ಯವು ಅಂತಹ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಪ್ರತಿಪಾದಿಸಿದರು.

ಮುಂಬೈ: ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದ ಸಂಜಯ್ ರಾವತ್ ಅವರು ಗುರುವಾರ ಮುಂಬೈ ಪೊಲೀಸ್ ಆಯುಕ್ತ ದೇವನ್ ಭಾರ್ತಿ ಅವರಿಗೆ ಪತ್ರ ಬರೆದು, ಇತ್ತೀಚೆಗೆ ಆಡಳಿತಾರೂಢ ಶಿವಸೇನೆಗೆ ಸೇರ್ಪಡೆಗೊಂಡ ಸಂಸದ ಸಂಜಯ್ ದಿನಾ ಪಾಟೀಲ್ ಅವರು, ಪ್ರತಿಭಟನಾಕಾರರ ಮೇಲೆ 'ಬಾಂಬ್ ಎಸೆಯುವುದಾಗಿ' ಬೆದರಿಕೆ ಹಾಕಿದ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ರಾವತ್ ಮತ್ತು ಪಾಟೀಲ್ ನಡುವಿನ ಮಾತಿನ ಚಕಮಕಿ, ಪತ್ರದ ಬಗ್ಗೆ ಇಂದು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಬೆದರಿಕೆ ಹಾಕುವವರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಇಬ್ಬರು ನಾಯಕರ ನಡುವಿನ ಜಗಳಕ್ಕೆ ಪ್ರತಿಕ್ರಿಯಿಸಿದ ಫಡ್ನವೀಸ್, ಯಾರೂ ಬೆದರಿಕೆಗಳಿಗೆ ಹೆದರಬಾರದು ಮತ್ತು ರಾಜ್ಯವು ಅಂತಹ ಯಾವುದೇ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಪ್ರತಿಪಾದಿಸಿದರು.
ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ, ಪಾಟೀಲ್ ಅವರ ಆಪಾದಿತ ಹೇಳಿಕೆಗಳು ಭಯೋತ್ಪಾದನೆ ಮತ್ತು ಕ್ರಿಮಿನಲ್ ಉದ್ದೇಶಕ್ಕೆ ಸಮಾನವಾಗಿವೆ ಎಂದು ಹಾವತ್ ಹೇಳಿದ್ದಾರೆ.
ಇತ್ತೀಚೆಗೆ ಉದ್ಧವ್ ಠಾಕ್ರೆ ನೇತೃತ್ವದ ಸೇನಾ-ಯುಬಿಟಿಯಿಂದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಸೇರಿದ ಆರು ಸಂಸದರಲ್ಲಿ ದಿನಾ ಪಾಟೀಲ್ ಅವರು ಒಬ್ಬರಾಗಿದ್ದಾರೆ.
ಠಾಕ್ರೆ ಬಣ ತೊರೆದ ಸಂಸದರ ವಿರುದ್ಧ ಮಹಾರಾಷ್ಟ್ರದ ಜನರಲ್ಲಿ ಅಪಾರ ಕೋಪವಿದೆ ಮತ್ತು ಮತದಾರರಿಗೆ 'ದ್ರೋಹ' ಮಾಡಲಾಗಿದೆ ಎಂದು ಜನ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪ್ರತಿಭಟನೆ ನಡೆಸುವುದು ಮತ್ತು ಚುನಾಯಿತ ಪ್ರತಿನಿಧಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಜನರ ಹಕ್ಕು ಎಂದು ರಾವತ್ ಹೇಳಿದ್ದಾರೆ.
ಆದಾಗ್ಯೂ, ಮುಂಬೈ ಈಶಾನ್ಯ ಸಂಸದ ಸಂಜಯ್ ದಿನಾ ಪಾಟೀಲ್ ಅವರು, ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಯಾರಾದರೂ ತನ್ನ ವಿರುದ್ಧ ಪ್ರತಿಭಟಿಸಿದರೆ, ಅವರ ಮೇಲೆ 'ಬಾಂಬ್‌ಗಳನ್ನು ಎಸೆಯುತ್ತೇನೆ', ಅವರ ಮನೆಗಳಿಗೆ ನುಗ್ಗಿ 'ಹೊಡೆಯುತ್ತೇನೆ' ಎಂದು ಪಾಟೀಲ್ ಹೇಳಿದ್ದಾರೆ ಎಂದು ರಾವತ್ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



