ಖರ್ಗೆಯವರಿಗೆ CM ಆಗುವ ಆಸೆ; ಕಾಂಗ್ರೆಸ್ನಲ್ಲಿ ನಾಯಕತ್ವ ಬಿಕ್ಕಟ್ಟು: ಡಿಕೆಶಿ ಪರ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಕ್ಕೆ ಬಿಜೆಪಿ ನಾಯಕ ಟೀಕೆ; Video
ಮುಖ್ಯಮಂತ್ರಿ ಆಗುವ ಅವರ ಸ್ವಂತ ಮಹತ್ವಾಕಾಂಕ್ಷೆಯನ್ನು ಗಮನಿಸಿದರೆ, ಅವರು ಕೋಪಗೊಳ್ಳುವುದು ಅನಿವಾರ್ಯವಾಗಿತ್ತು ಎಂದು ಟೀಕಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಲು ಬಯಸುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ನಾಯಕತ್ವದ ಬಿಕ್ಕಟ್ಟು ಉಂಟಾಗಿದೆ. ತಮ್ಮದೇ ಪಕ್ಷದ ಮುಖ್ಯಮಂತ್ರಿಗೆ ಕಾರ್ಯಕರ್ತರು ಜಯಘೋಷ ಮಾಡಿದ ಕಾರಣಕ್ಕೆ ಪಕ್ಷದ ಅಧ್ಯಕ್ಷರೇ ಕಾರ್ಯಕರ್ತರ ಮೇಲೆ ಕೋಪಗೊಂಡಿರುವುದು ಇದೇ ಮೊದಲ ಬಾರಿ ಎಂದು ಬಿಜೆಪಿಯ ವಕ್ತಾರ ಗೌರವ್ ವಲ್ಲಭ್ ಟೀಕಿಸಿದ್ದಾರೆ.
ಮುಖ್ಯಮಂತ್ರಿ ಆಗುವ ಅವರ ಸ್ವಂತ ಮಹತ್ವಾಕಾಂಕ್ಷೆಯನ್ನು ಗಮನಿಸಿದರೆ, ಅವರು ಕೋಪಗೊಳ್ಳುವುದು ಅನಿವಾರ್ಯವಾಗಿತ್ತು. ಅದಕ್ಕಾಗಿಯೇ ಕಾಂಗ್ರೆಸ್ ಅಧ್ಯಕ್ಷರು ತಮ್ಮದೇ ಪಕ್ಷದ ಮುಖ್ಯಮಂತ್ರಿಯ ಪರವಾಗಿ ಘೋಷಣೆಗಳನ್ನು ಕೂಗುವುದನ್ನು ಸಹಿಸಿಕೊಳ್ಳಲಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡುತ್ತಾ ಹೇಳಿದ್ದಾರೆ.
ಈಗ ಕಾಂಗ್ರೆಸ್ ಪಕ್ಷವು 'ಕಾಂಗ್ರೆಸ್ ರಾಹುಲ್', 'ಕಾಂಗ್ರೆಸ್ ಪ್ರಿಯಾಂಕಾ' ಮತ್ತು 'ಕಾಂಗ್ರೆಸ್ ಮಮ್ಮಿ' ಎಂಬ ಮೂರು ಭಾಗಗಳಾಗಿ ವಿಭಜನೆಯಾಗಿದೆ. 'ಕಾಂಗ್ರೆಸ್ ಖರ್ಗೆ' ಎನ್ನುವುದು ಈ ಮೂರು ಘಟಕಗಳ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ನಡೆಸುವ ಪರವಾನಗಿ ಪಡೆಯುವ ಕನಸು ಕಾಣುತ್ತಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮನಸ್ಸಿನ ಮಾತನ್ನು ಹೊರಹಾಕಿದರು. ತಮ್ಮದೇ ಪಕ್ಷದ ಮುಖ್ಯಮಂತ್ರಿಯ ಪರವಾಗಿ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದರು. ಇದಕ್ಕಿಂತ ದೊಡ್ಡ ರಾಜಕೀಯ ವಿರೋಧಾಭಾಸ ಇನ್ನೇನಿರಬಹುದು ಎಂದು ವ್ಯಂಗ್ಯವಾಡಿದರು.
ಶಶಿ ತರೂರ್ ಅವರನ್ನು ಪಕ್ಷದಿಂದ ಹೊರಹಾಕುವ ಅಧಿಕಾರ ಪವನ್ ಖೇರಾ ಅವರಿಗೆ ಇದೆಯೇ? ಕಾಂಗ್ರೆಸ್ ಪಕ್ಷವನ್ನು ಗಾಂಧಿ ಕುಟುಂಬ ನಡೆಸುತ್ತದೆ. ಈ ವಿಷಯದಲ್ಲಿ ಗಾಂಧಿ ಕುಟುಂಬ ಮೌನ ವಹಿಸಿರುವುದರಿಂದ, ತರೂರ್ ಅವರ ಅಭಿಪ್ರಾಯಗಳನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ವಿದೇಶಾಂಗ ನೀತಿಯ ಬಗ್ಗೆ ಶಶಿ ತರೂರ್ ಅವರಿಗೆ ಇರುವ ಜ್ಞಾನದ 1 ಶೇಕಡಾ ಆದರೂ ಇವರಲ್ಲಿ ಯಾರಿಗಾದರೂ ಇದೆಯೇ? 'ಪಿಎ ಸಮುದಾಯ'ದ ಈ ಜನರು ಯಾವುದೇ ಹೇಳಿಕೆ ನೀಡುವ ಮೊದಲು ಪ್ರತಿದಿನ ಶಶಿ ತರೂರ್ ಅವರಿಂದ ಈ ವಿಷಯದಲ್ಲಿ ಪಾಠ ಕಲಿಯಬೇಕು. ಇಲ್ಲದಿದ್ದರೆ ಅವರು ಕೇವಲ ಹಾಸ್ಯಾಸ್ಪದ ವ್ಯಕ್ತಿಗಳಾಗಿಬಿಡುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



