ದೇಶ

ನಕ್ಸಲೈಟ್ ಆಗಲು ಮುಂದಾಗಿದ್ದ Pawan Kalyan: 17 ವರ್ಷಕ್ಕೆ ಬಂದೂಕು ಹಿಡಿದು ಹೋರಾಟ; ತಡೆದಿದ್ದು ಅಣ್ಣ Chiranjeevi

ತಾವು ಒಂದು ಕಾಲದಲ್ಲಿ ನಕ್ಸಲ್ ಆಗಲು ನಿರ್ಧರಿಸಿದ್ದೆ. ಆದರೆ ಅಣ್ಣ ಮೆಗಾಸ್ಟಾರ್ ಚಿರಂಜೀವಿ ತಮ್ಮನ್ನು ತಡೆದು ದಾರಿ ತೋರಿಸಿದರು ಎಂದಿದ್ದಾರೆ.

ನಕ್ಸಲೈಟ್ ಆಗಲು ಮುಂದಾಗಿದ್ದ Pawan Kalyan: 17 ವರ್ಷಕ್ಕೆ ಬಂದೂಕು ಹಿಡಿದು ಹೋರಾಟ; ತಡೆದಿದ್ದು ಅಣ್ಣ Chiranjeevi
ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್
Published On :

ಅಮರಾವತಿ: ಟಾಲಿವುಡ್ ನಟ ಹಾಗೂ ಆಂಧ್ರ ಪ್ರದೇಶದ ಹಾಲಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಒಂದು ಕಾಲದಲ್ಲಿ ನಕ್ಸಲೈಟ್ ಆಗಲು ಮುಂದಾಗಿದ್ದ ರೋಚಕ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಈ ಬಗ್ಗೆ ಸ್ವತಃ ನಟ ಪವನ್ ಕಲ್ಯಾಣ್ ಬಹಿರಂಗ ಪಡಿಸಿದ್ದು, ಸ್ಮಿತಾ ಪ್ರಕಾಶ್ ಅವರೊಂದಿಗಿನ ANI ಪಾಡ್‌ಕ್ಯಾಸ್ಟ್‌ನಲ್ಲಿ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. ತಾವು ನಕ್ಸಲಿಸಂಗೆ ಬಹುತೇಕ ಸೇರಲು ನಿರ್ಧರಿಸಿದ್ದೆ ಮತ್ತು ಅದರಲ್ಲಿ ತೊಡಗಿಸಿಕೊಳ್ಳದಿರಲು ನಿರ್ಧರಿಸುವ ಮೊದಲು ಕೆಲವು ಜನಸಭೆಗಳಲ್ಲಿ (ಸಾರ್ವಜನಿಕ ಸಭೆಗಳು) ಭಾಗವಹಿಸಿದ್ದೆ ಎಂದು ಹೇಳಿದ್ದಾರೆ.

ತಾವು ಒಂದು ಕಾಲದಲ್ಲಿ ನಕ್ಸಲ್ ಆಗಲು ನಿರ್ಧರಿಸಿದ್ದೆ. ಆದರೆ ಅಣ್ಣ ಮೆಗಾಸ್ಟಾರ್ ಚಿರಂಜೀವಿ ತಮ್ಮನ್ನು ತಡೆದು ದಾರಿ ತೋರಿಸಿದರು ಎಂದಿದ್ದಾರೆ. ಪವನ್ ಕಲ್ಯಾಣ್ ಅವರಿಗೆ 17-21 ವರ್ಷ ವಯಸ್ಸಾಗಿದ್ದಾಗ ಸಮಾಜದಲ್ಲಾಗುತ್ತಿದ್ದ ಅನ್ಯಾಯಗಳ ವಿರುದ್ಧ ಭಾರಿ ಸಿಟ್ಟು ಇತ್ತಂತೆ.

‘ಆ ವಯಸ್ಸಿನಲ್ಲಿ ನನಗೆ ಗನ್ ಹಿಡಿದು ನಕ್ಸಲೈಟ್ ಸೇರುವ ಹುಚ್ಚು ಆಲೋಚನೆ ಬಂದಿತ್ತು. ಗುಟ್ಟಾಗಿ ವಿದ್ಯಾರ್ಥಿ ಸಂಘಟನೆಗಳ ಸಭೆಗಳಿಗೂ ಹೋಗುತ್ತಿದ್ದೆ. ನನ್ನ ತಲೆಯಲ್ಲಿ ಆಕ್ರೋಶದ ಯೋಚನೆಗಳು ಸ್ಫೋಟಗೊಳ್ಳುತ್ತಿದ್ದವು’ ಎಂದು ಪವನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

'ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಶ್ರೀಲಂಕಾದಲ್ಲಿ ಎಲ್‌ಟಿಟಿಇ (ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ) ಚಳುವಳಿ, ಚೆನ್ನೈನಲ್ಲಿ ಪರಿಣಾಮಗಳನ್ನು ಬೀರಿತು, ಶೀತಲ ಸಮರದ ಪ್ರತಿಬಿಂಬಗಳು, ಏಕೀಕೃತ ಜರ್ಮನಿಯಲ್ಲಿ ಅಶಾಂತಿ, ಖಲಿಸ್ತಾನಿ ಉಗ್ರಗಾಮಿತ್ವ ಮತ್ತು ಇನ್ನೂ ಹೆಚ್ಚಿನವುಗಳು ತನ್ನ ಮೇಲೆ ಪರಿಣಾಮ ಬೀರಿದ್ದವು. ನಕ್ಸಲೀಯರೊಳಗೆ ಸೇರುವುದನ್ನು ನಾನು ಆನಂದಿಸಿದೆ. ನಾನು ಬಂದೂಕನ್ನು ಎತ್ತಿಕೊಳ್ಳಲು ಬಯಸಿದ್ದೆ. ಆಗ ನನ್ನ ಸಹೋದರ ನನ್ನನ್ನು ಹೆಚ್ಚು ರಚನಾತ್ಮಕವಾದದ್ದಕ್ಕೆ ತಡೆದರು ಎಂದು ಹೇಳಿದರು.

ಅಣ್ಣ ಚಿರಂಜೀವಿ ತಡೆದರು

ಇನ್ನು ನನ್ನ ಹುಚ್ಚುಕೋಪವನ್ನು ಕಂಡ ನಟ ಚಿರಂಜೀವಿ, ತೀವ್ರ ಆತಂಕಗೊಂಡಿದ್ದರು. ಈ ವೇಳೆ ಆ ಹುಚ್ಚು ಕೋಪ ಎಲ್ಲಿಂದ ಬರುತ್ತದೆ? ಕೇಳಿದ್ದರು. ಆಗ ನಾನು ಹೇಳಿದೆ, ನಾನು ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದೇನೆ, ನಾವು ಇದನ್ನು ಮತ್ತು ಅದನ್ನು ಮಾಡಬೇಕು. ಅವನು ತುಂಬಾ ಚಿಂತಿತನಾಗಿದ್ದರು. ಆಗ ಪವನ್ ಕಲ್ಯಾಣ್ ಅವರನ್ನು ಕೂರಿಸಿ ಚಿರಂಜೀವಿ ಒಂದು ಪ್ರಶ್ನೆ ಕೇಳಿದ್ದರು.

‘ನಾನು ಚಿರಂಜೀವಿ ಆಗಿರದಿದ್ದರೆ, ನಿನ್ನ ಸಂಬಳ ಹಾಗೂ ಕಷ್ಟದ ಮೇಲೆ ಇಡೀ ಕುಟುಂಬ ಅವಲಂಬಿತವಾಗಿದ್ದರೆ ನೀನು ಇದೇ ನಿರ್ಧಾರ ತೂಗುತ್ತಿದ್ದೆಯಾ’ ಎಂದು ಪ್ರಶ್ನಿಸಿದ್ದರು. ಅಣ್ಣನ ಈ ಜವಾಬ್ದಾರಿಯುತ ಮಾತಿಗೆ ಪವನ್ ಬಳಿ ಯಾವುದೇ ಉತ್ತರವಿರಲಿಲ್ಲ. ಆ ಬಳಿಕ ಅವರು ಆ ದಾರಿಯಿಂದ ಹಿಂದೆ ಸರಿದಿದ್ದಾಗಿ ಹೇಳಿಕೊಂಡಿದ್ದಾರೆ.

ಚಿರಂಜೀವಿ ಅವರೇ ನನ್ನ ಏಕೈಕ ಹೀರೋ

ಅಂತೆಯೇ ‘ನನಗೆ ಜಗತ್ತಿನಲ್ಲಿ ಒಬ್ಬರೇ ಹೀರೋ, ಅದು ಮೆಗಾಸ್ಟಾರ್ ಚಿರಂಜೀವಿ. ಅವರ ಪಕ್ಕ ನಿಂತಾಗ ನಾನು ಕೂಡ ಒಬ್ಬ ನಟ ಎಂಬುದನ್ನೇ ಮರೆತುಬಿಡುತ್ತೇನೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.