ಕಾಂಗ್ರೆಸ್‌ನಿಂದ ಬೇರ್ಪಟ್ಟ ಪಕ್ಷಗಳು ಮರಳಬೇಕು: TMCಗೆ ವಿಲೀನದ ಆಫರ್ ಬೆನ್ನಲ್ಲೇ ಸಂಜಯ್ ರಾವತ್ ಹೇಳಿಕೆ
ಇಂತಹ ಪುನರೇಕೀಕರಣವು 'ಕಾಲದ ಅಗತ್ಯ'ವಾಗಿದೆ ಮತ್ತು ಈ ಮಾರ್ಗಗಳ ಬಗ್ಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿ ಈಗಾಗಲೇ ಚಿಂತನೆ ನಡೆಯುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಮುಂಬೈ: ಕಾಂಗ್ರೆಸ್ ನಿಂದ ಈ ಹಿಂದೆ ಬೇರ್ಪಟ್ಟ ನಾಯಕರು ಸ್ಥಾಪಿಸಿದ ಪಕ್ಷಗಳು ಈಗ ಮರಳಿ ಕಾಂಗ್ರೆಸ್ ಜೊತೆ ವಿಲೀನವಾಗಬೇಕು ಎಂದು ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ನಾಯಕ ಸಂಜಯ್ ರಾವತ್ ಬುಧವಾರ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ-ಶರದ್ಚಂದ್ರ ಪವಾರ್ ಅವರಂತಹ ನಾಯಕರು ಕಾಂಗ್ರೆಸ್ ನಿಂದ ಬೇರ್ಪಟ್ಟು ಪಕ್ಷಗಳನ್ನು ಸ್ಥಾಪಿಸಿದ್ದರು. ಅವರೆಲ್ಲಾ ಈ ಹಿಂದೆ ಕಾಂಗ್ರೆಸ್‌ನ ಭಾಗವಾಗಿದ್ದರು ಮತ್ತು ಈಗ ಕಾಂಗ್ರೆಸ್ ಗೆ ಮರಳಿ ಹಳೆಯ ಪಕ್ಷವನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.
ಇಂತಹ ಪುನರೇಕೀಕರಣವು 'ಕಾಲದ ಅಗತ್ಯ'ವಾಗಿದೆ ಮತ್ತು ಈ ಮಾರ್ಗಗಳ ಬಗ್ಗೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿ ಈಗಾಗಲೇ ಚಿಂತನೆ ನಡೆಯುತ್ತಿದೆ ಎಂದು ಅವರು ಪ್ರತಿಪಾದಿಸಿದರು.

ಪಶ್ಚಿಮ ಬಂಗಾಳದಲ್ಲಿ TMC ಅಸ್ತಿತ್ವಕ್ಕೇ ಕುತ್ತು: ಕಾಂಗ್ರೆಸ್ ಜೊತೆ ವಿಲೀನ? ದೀದಿಗೆ ಉಪಾಧ್ಯಕ್ಷೆ ಪಟ್ಟದ ಆಫರ್!
"ಕಾಂಗ್ರೆಸ್ ತೊರೆದು ತಮ್ಮದೇ ಆದ ಪಕ್ಷಗಳನ್ನು ರಚಿಸಿದ ಘಟಕಗಳು ಕಾಂಗ್ರೆಸ್ ಧ್ವಜದ ಅಡಿಯಲ್ಲಿ ಬಂದು ಅದನ್ನು ಬಲಪಡಿಸಬೇಕು ಎಂದು ನಾವು ಖಾಸಗಿಯಾಗಿ ಮಾತನಾಡುತ್ತಲೇ ಇದ್ದೇವೆ. ಇದು ಈ ಸಮಯದ ಅಗತ್ಯ" ಎಂದು ರಾವತ್ ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ, ಬಿಜು ಜನತಾದಳ ಮತ್ತು ತೆಲಂಗಾಣದ ಕೆಲವು ಪಕ್ಷಗಳನ್ನು ಉಲ್ಲೇಖಿಸಿದರು.
ಈ ಪಕ್ಷಗಳಿಗೆ ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಸಹಾಯದ ಅಗತ್ಯವಿದೆ ಎಂದು ರಾಜ್ಯಸಭಾ ಸಂಸದರು ಹೇಳಿದರು. "ಕಾಂಗ್ರೆಸ್ ತೊರೆದಿರುವ ಪ್ರತಿಯೊಬ್ಬರೂ, ಅದು ನಾಯಕರಾಗಿರಲಿ ಅಥವಾ ಪಕ್ಷಗಳಾಗಿರಲಿ, ನೀವು ಒಟ್ಟಾಗಿ ಕಾಂಗ್ರೆಸ್ ಗೆ ಮರಳಿ, ಕಾಂಗ್ರೆಸ್ ನ್ನು ಹೆಚ್ಚು ಶಕ್ತಿಶಾಲಿಯನ್ನಾಗಿ ಮಾಡಬೇಕು ಮತ್ತು (ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎಗೆ) ಪರ್ಯಾಯವನ್ನು ನೀಡಬೇಕು" ಎಂದು ಅವರು ಹೇಳಿದರು.
"ನನ್ನ ಮಾಹಿತಿಯ ಪ್ರಕಾರ, ಕಾಂಗ್ರೆಸ್ ಮತ್ತು ಇತರ ಪಕ್ಷಗಳಲ್ಲಿ ಇದರ ಬಗ್ಗೆ ಸ್ವಲ್ಪ ಚಿಂತನೆ ಇದೆ" ಎಂದು ರಾವತ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


