TMCಗೆ ಮತ್ತೊಂದು ಶಾಕ್: ದೀದಿ ದಿಲ್ಲಿಯಲ್ಲಿರುವಾಗಲೇ ಪಕ್ಷ ತೊರೆದ ರಾಜ್ಯಸಭಾ ಸಂಸದ, ಆಪ್ತ ಸುಖೇಂದು ಶೇಖರ್ ರೇ!
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಕಳೆದುಕೊಂಡ ನಂತರ ತೃಣಮೂಲ ಪಕ್ಷ ಪಕ್ಷ ಭಾರಿ ಬಂಡಾಯವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಬಂದಿದೆ.

ನವದೆಹಲಿ: ಮಮತಾ ಬ್ಯಾನರ್ಜಿ ಅವರಿಗೆ ದೊಡ್ಡ ಹಿನ್ನಡೆಯಾಗಿ, ದೀರ್ಘಕಾಲದ ಸಹಾಯಕ ಸುಖೇಂದು ಶೇಖರ್ ರೇ ತೃಣಮೂಲ ಪಕ್ಷವನ್ನು ತೊರೆದು, ಪಕ್ಷದಲ್ಲಿನ ಬಿಕ್ಕಟ್ಟಿನ ಮಧ್ಯೆ ರಾಜ್ಯಸಭಾ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಕಳೆದುಕೊಂಡ ನಂತರ ತೃಣಮೂಲ ಪಕ್ಷ ಪಕ್ಷ ಭಾರಿ ಬಂಡಾಯವನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಬಂದಿದೆ.
ರಾಜೀನಾಮೆ ನೀಡಲು ರೇ ಇಂದು ಬೆಳಿಗ್ಗೆ ಸಂಸತ್ತಿಗೆ ಆಗಮಿಸಿದರು, ವಿಪಕ್ಷಗಳ ಮೈತ್ರಿಕೂಟದ ಸಭೆಯಲ್ಲಿ ಭಾಗಿಯಾಗಲು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ದಿಲ್ಲಿಯಲ್ಲಿರುವಾಗಲೇ ರಾಜ್ಯಸಭಾ ಸಂಸದನ ರಾಜೀನಾಮೆ ಬಂದಿರುವುದು ಪಕ್ಷದಲ್ಲಿನ ತಳಮಳವನ್ನು ಹೆಚ್ಚಿಸಿದೆ.
2011 ರಲ್ಲಿ ಬಂಗಾಳದಲ್ಲಿ ಅವರ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರೇ ಅವರು ಬ್ಯಾನರ್ಜಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



