ಭಾರತೀಯರಿಗೆ ಬಂಪರ್: ಕಚ್ಚಾ ತೈಲ ಬಿಕ್ಕಟಿನ ನಡುವೆ ಅಂಡಮಾನ್ ದ್ವೀಪದಲ್ಲಿ ಹೊಸ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ! Video ನೋಡಿ
ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿ.ಮೀ ದೂರದಲ್ಲಿ 355 ಮೀಟರ್ ನೀರಿನ ಆಳದಲ್ಲಿ ನೈಸರ್ಗಿಕ ಅನಿಲ್ ಬಾವಿಯನ್ನು ಕೊರೆಯಲಾಗಿದೆ.

ಪೋರ್ಟ್‌ಬ್ಲೇರ್: ಪಶ್ಚಿಮ ಏಷ್ಯಾ ಸಂಘರ್ಷದಿಂದ ಕಚ್ಚಾ ತೈಲ ಬಿಕ್ಕಟ್ಟು ಮತ್ತು ಇಂಧನ ಬೆಲೆ ಹೆಚ್ಚಳದ ನಡುವೆ, ಸರ್ಕಾರಿ ಸ್ವಾಮ್ಯದ ಆಯಿಲ್ ಇಂಡಿಯಾ ಲಿಮಿಟೆಡ್, ಅಂಡಮಾನ್ ದ್ವೀಪದಲ್ಲಿ ಹೊಸ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ ಮಾಡಿದೆ.
ಕಂಪನಿಯು ತನ್ನ ಮೂರನೇ ಅನ್ವೇಷಣಾ ಬಾವಿ ವಿಜಯಪುರಂ-3 ರಲ್ಲಿ ನೈಸರ್ಗಿಕ ಅನಿಲವನ್ನು ಪತ್ತೆ ಮಾಡಿರುವುದಾಗಿ ಹೇಳಿದೆ. ಇದನ್ನು AN-OSHP-2018/1 ಬ್ಲಾಕ್‌ನಲ್ಲಿ ಮುಕ್ತ ಪರವಾನಗಿ ನೀತಿ (OALP) ಅಡಿಯಲ್ಲಿ ಕೊರೆಯಲಾಗಿದೆ ಎಂದು ತಿಳಿಸಿದೆ.
ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿ.ಮೀ ದೂರದಲ್ಲಿ 355 ಮೀಟರ್ ನೀರಿನ ಆಳದಲ್ಲಿ ನೈಸರ್ಗಿಕ ಅನಿಲ್ ಬಾವಿಯನ್ನು ಕೊರೆಯಲಾಗಿದೆ. ಈ ಆವಿಷ್ಕಾರದೊಂದಿಗೆ, OIL ಈಗ ಬ್ಲಾಕ್‌ನಲ್ಲಿ ಇಲ್ಲಿಯವರೆಗೆ ಕೊರೆಯಲಾದ ಮೂರು ಅನ್ವೇಷಣಾ ಬಾವಿಗಳಲ್ಲಿ ಎರಡರಲ್ಲಿ ಹೈಡ್ರೋಕಾರ್ಬನ್‌ಗಳ ಉಪಸ್ಥಿತಿಯನ್ನು ಸ್ಥಾಪಿಸಿದೆ.
ಈ ಬಗ್ಗೆ ಸ್ವತಃ ಪೆಟ್ರೋಲಿಯಂ ಖಾತೆ ಸಚಿವ ಹರ್ದಿಪ್ ಸಿಂಗ್ ಪುರಿ ಅವರು ಮಾಹಿತಿ ನೀಡಿದ್ದು, ಅಂಡಮಾನ್ ದ್ವೀಪದಲ್ಲಿ ಹೊಸ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆಯಾಗಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಶ್ರೀ ವಿಜಯಪುರಂ-3ನಲ್ಲಿ 355 ಮೀಟರ್ ಆಳದಲ್ಲಿ ನೈಸರ್ಗಿಕ ಅನಿಲ ಪತ್ತೆಯಾಗಿದೆ. ಇದು ಅಂಡಮಾನ್ ಸಮುದ್ರದ ಅಪಾರ ಇಂಧನ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಜಲಾನಯನ ಪ್ರದೇಶದಲ್ಲಿ ನಡೆಯುತ್ತಿರುವ ಪರಿಶೋಧನಾ ಅಭಿಯಾನದಲ್ಲಿ ಮತ್ತೊಂದು ಯಶಸ್ಸನ್ನು ಸೂಚಿಸುತ್ತದೆ ಎಂದು ಪುರಿ ಹೇಳಿದ್ದಾರೆ.
ಸಮುದ್ರದ 355 ಮೀಟರ್ ಆಳದಲ್ಲಿ, ಭೂಮಿಯ ಒಳಗಡೆ ಸುಮಾರು 1,900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿ ಈ ಗ್ಯಾಸ್ ಪತ್ತೆಯಾಗಿದೆ. ಸಿಕ್ಕಿರುವ ಗ್ಯಾಸ್ ಎಂತಹದ್ದು, ಅದರ ಗುಣಮಟ್ಟ ಹೇಗಿದೆ ಮತ್ತು ಅದು ಎಷ್ಟು ಉಪಯುಕ್ತ ಎಂದು ತಿಳಿಯಲು ಆಯಿಲ್ ಇಂಡಿಯಾ ಸಂಸ್ಥೆಯು ಸದ್ಯ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



