ರಾಜ್ಯಸಭೆ ಚುನಾವಣೆ: 11 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ; ಪಕ್ಷ ನಿಷ್ಠರಿಗೆ ಸ್ಥಾನ
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ಪ್ರಸ್ತುತ 113 ಸದಸ್ಯರನ್ನು ಹೊಂದಿದ್ದು, ಎನ್‌ಡಿಎ 148 ಸದಸ್ಯರನ್ನು ಹೊಂದಿದೆ.

ನವದೆಹಲಿ: ಒಟ್ಟು 10 ರಾಜ್ಯಗಳ 24 ಸ್ಥಾನಗಳಿಗೆ ಜೂನ್ 18 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಗುರುವಾರ 11 ಅಭ್ಯರ್ಥಿಗಳನ್ನು ಘೋಷಿಸಿದೆ.
ಒಡಿಶಾದ ಉಪಚುನಾವಣೆಗೆ, ಇತ್ತೀಚಿಗೆ ಬಿಜು ಜನತಾದಳ(ಬಿಜೆಡಿ) ತೊರೆದು ಬಿಜೆಪಿ ಸೇರಿದ್ದ ದೇಬಾಶಿಶ್ ಸಮಂತಾರಾಯ್ ಅವರನ್ನು ಕೇಸರಿ ಪಕ್ಷ ಕಣಕ್ಕಿಳಿಸಿದೆ.
ಇಬ್ಬರು ಪ್ರಮುಖ ಮಹಿಳಾ ನಾಯಕಿಯರಿಗೂ ಬಿಜೆಪಿ ಅವಕಾಶ ನೀಡಿದ್ದು, ಬಿಜೆಪಿಯ ಮಣಿಪುರ ಅಧ್ಯಕ್ಷೆ ಎ ಶಾರದಾ ದೇವಿ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಲ್ಕಾ ಗುರ್ಜರ್ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್ ಮತ್ತು ರಾಜಸ್ಥಾನದ ಪ್ರಬಲ ನಾಯಕ ಸತೀಶ್ ಪೂನಿಯಾ ಕೂಡ ಪಟ್ಟಿಯಲ್ಲಿದ್ದಾರೆ.
ಅರುಣಾಚಲ ಪ್ರದೇಶದಿಂದ ತಾಯ್ ತಾಗಾಕ್ ಅವರನ್ನು, ಗುಜರಾತ್ ನಲ್ಲಿ ರಾಜುಭಾಯಿ ಶುಕ್ಲಾ, ಮುಖೇಶ್ ಭಾಯಿ ರಾಠ್ವಾ, ಮಾನಸಿಂಗ್ ಪರ್ಮಾರ್ ಮತ್ತು ಜಿತೇಂದ್ರ ಮೇಘಜೀಬಾಯಿ ಕಂಜಾರಿಯಾ ಅವರನ್ನು ಕಣಕ್ಕಿಳಿಸಿದೆ.
ರಾಜಸ್ಥಾನದಿಂದ ಅಲ್ಕಾ ಗುರ್ಜರ್ ಮತ್ತು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಪೂನಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.
ಪಕ್ಷ ಮತ್ತು ಅದರ ಸಂಘಟನೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡುವ ಪಕ್ಷದ ಬದ್ಧತೆಯನ್ನು ಈ ಆಯ್ಕೆಗಳು ಒತ್ತಿಹೇಳುತ್ತವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ಪ್ರಸ್ತುತ 113 ಸದಸ್ಯರನ್ನು ಹೊಂದಿದ್ದು, ಎನ್‌ಡಿಎ 148 ಸದಸ್ಯರನ್ನು ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



