ದೇಶ

'ಸದನದಲ್ಲೇ ಮೂಳೆ ಮುರಿಯುತ್ತೇವೆ': ತಮಿಳುನಾಡು ಸಿಎಂ ವಿಜಯ್‌ಗೆ ಬೆದರಿಕೆ ಹಾಕಿದ ಡಿಎಂಕೆ ಶಾಸಕನ ಬಂಧನ

ವಿಧಾನಸಭೆಯಲ್ಲೇ ಸಿಎಂ ಅವರ ಮೂಳೆ ಮುರಿಯುತ್ತೇನೆ ಎಂದು ಮಾರ್ಕಂಡೇಯನ್ ಅವರು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಈ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ದಳವು ಎಫ್ಐಆರ್ ದಾಖಲಿಸಿದ್ದು, ಇದೀಗ ಡಿಎಂಕೆ ಶಾಸಕರನ್ನು ಬಂಧಿಸಿದೆ.

'ಸದನದಲ್ಲೇ ಮೂಳೆ ಮುರಿಯುತ್ತೇವೆ': ತಮಿಳುನಾಡು ಸಿಎಂ ವಿಜಯ್‌ಗೆ ಬೆದರಿಕೆ ಹಾಕಿದ ಡಿಎಂಕೆ ಶಾಸಕನ ಬಂಧನ
ಮಾರ್ಕಂಡೇಯನ್
Published On :

ತೂತುಕುಡಿ: ಕೋವಿಲ್ಪಟ್ಟಿಯಲ್ಲಿ ಶನಿವಾರ ತಡರಾತ್ರಿ ನಡೆದ ಕೃತಜ್ಞತಾ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಬೆದರಿಕೆ ಹಾಕಿದ ತೂತುಕುಡಿ ಡಿಎಂಕೆ ಪಕ್ಷದ ವಿಲಾತಿಕುಲಂ ಶಾಸಕ ಜಿವಿ ಮಾರ್ಕಂಡೇಯನ್ ಅವರನ್ನು ಸೋಮವಾರ ಬಂಧಿಸಲಾಗಿದೆ.

ವಿಧಾನಸಭೆಯಲ್ಲೇ ಸಿಎಂ ಅವರ ಮೂಳೆ ಮುರಿಯುತ್ತೇನೆ ಎಂದು ಮಾರ್ಕಂಡೇಯನ್ ಅವರು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ಈ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಅಪರಾಧ ದಳವು ಎಫ್ಐಆರ್ ದಾಖಲಿಸಿದ್ದು, ಇದೀಗ ಡಿಎಂಕೆ ಶಾಸಕರನ್ನು ಬಂಧಿಸಿದೆ.

ತಮಿಳು ವೆಟ್ರಿ ಕಳಗಂ(ಟಿವಿಕೆ) ಈಶಾನ್ಯ ಜಿಲ್ಲಾ ಜಂಟಿ ಕಾರ್ಯದರ್ಶಿ ಪಿ ಕಾಸಿರಾಮನ್ ಅವರು ಡಿಎಂಕೆ ಶಾಸಕರ ವಿರುದ್ಧ ತೂತುಕುಡಿ ಎಸ್‌ಪಿ ಅಭಿಷೇಕ್ ಗುಪ್ತಾ ಅವರಿಗೆ ದೂರು ನೀಡಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ದೂರಿನ ಮೇರೆಗೆ ಜಿಲ್ಲಾ ಅಪರಾಧ ವಿಭಾಗವು ಮಾರ್ಕಂಡೇಯನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 351(3),352,353(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.

ಇಂದು ಬೆಳಗ್ಗೆ, ಪೊಲೀಸ್ ತಂಡ, ಮಾರ್ಕಂಡೇಯನ್ ಅವರನ್ನು ಬಂಧಿಸಲು ಅವರ ನಿವಾಸಕ್ಕೆ ತೆರಳಿದ್ದಾಗ ಡಿಎಂಕೆ ಕಾರ್ಯಕರ್ತರು, ಪೊಲೀಸರ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಆದಾಗ್ಯೂ, ಡಿಸಿಬಿ ಇನ್ಸ್‌ಪೆಕ್ಟರ್ ಪಿ ಜಾನಕಿ ನೇತೃತ್ವದ ಪೊಲೀಸ್ ತಂಡ ಮಾರ್ಕಂಡೇಯನ್ ಅವರನ್ನು ಬಂಧಿಸಿ ವಿಚಾರಣೆಗಾಗಿ ಎಸ್‌ಪಿ ಕಚೇರಿಗೆ ಕರೆದೊಯ್ದರು. ವಿಚಾರಣೆ ಮುಂದುವರೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.