'ನಾಚಿಕೆ ಆಗಲ್ವಾ.. ರೂಂ ಬುಕ್ ಮಾಡಿಕೊಡ್ಲಾ..': ಕ್ಯಾಬ್ ನಲ್ಲಿ ಅಶ್ಲೀಲ ವರ್ತನೆ; ಯುವ ಜೋಡಿ ಚಳಿ ಬಿಡಿಸಿದ ಚಾಲಕ! Video
ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಯುವಜೋಡಿಯೊಂದು ತಮ್ಮ ಪ್ರಯಾಣಕ್ಕೆ ಕ್ಯಾಬ್ ಬುಕ್ ಮಾಡಿಕೊಂಡಿದ್ದು, ಪ್ರಯಾಣದ ವೇಳೆ ಹಿಂಬದಿ ಸೀಟಿನಲ್ಲಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದೆ.

ನವದೆಹಲಿ: ಕ್ಯಾಬ್ ಬುಕ್ ಮಾಡಿ ಪ್ರಯಾಣದ ವೇಳೆ ಹಿಂಬದಿ ಸೀಟಿನಲ್ಲಿ ಸರಸ-ಸಲ್ಲಾಪದಲ್ಲಿ ತೊಡಗಿದ್ದ ಯುವಜೋಡಿಗೆ ಕಾರು ಚಾಲಕ ಚಳಿ ಬಿಡಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿರುವಂತೆ ಯುವಜೋಡಿಯೊಂದು ತಮ್ಮ ಪ್ರಯಾಣಕ್ಕೆ ಕ್ಯಾಬ್ ಬುಕ್ ಮಾಡಿಕೊಂಡಿದ್ದು, ಪ್ರಯಾಣದ ವೇಳೆ ಹಿಂಬದಿ ಸೀಟಿನಲ್ಲಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದೆ.
ತನ್ನ ತೊಡೆ ಮೇಲೆ ಮಲಗಿದ ಯುವತಿ ಜೊತೆ ಅಶ್ಲೀಲವಾಗಿ ಮಾತನಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ವೇಳೆ ಒಂದಷ್ಟು ಹೊತ್ತ ಸುಮ್ಮನಿದ್ದ ಚಾಲಕ ಯುವಜೋಡಿಯ ಅಸಭ್ಯ ವರ್ತನೆ ಕಂಡು ಆಕ್ರೋಶಗೊಂಡಿದ್ದಾನೆ.
ಕಾರು ಚಾಲನೆಯಲ್ಲಿರುವಂತೆಯೇ ಯುವಜೋಡಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ರೂಂ ಬುಕ್ ಮಾಡಿಕೊಡ್ಲಾ..? ನಾಚಿಕೆಯಾಗಲ್ವಾ.. ಸಾರ್ವಜನಿಕವಾಗಿ ಈ ರೀತಿ ವರ್ತಿಸುತ್ತಿದ್ದೀರಿ ಎಂದು ಕಿಡಿಕಾರಿದ್ದಾನೆ.
"ನಾನು ನಿಮಗಾಗಿ ಹೊಟೆಲ್ ರೂಂ ಬುಕ್ ಮಾಡಬೇಕೇ?.. ನಿಮ್ಮಂತಹವರಿಗೆ ಸ್ವಲ್ಪ ಕೂಡ ನಾಚಿಕೆಯಾಗಲ್ವಾ? ಇದಕ್ಕೇ ಕ್ಯಾಬ್ ಬುಕ್ ಮಾಡಿಕೊಂಡ್ರಾ? ನಗರದಲ್ಲಿ ಇದಕ್ಕೇ ಅಂತಾನೆ ಹೊಟೆಲ್ ಮತ್ತು ರೂಮ್ ಗಳಿವೆ. ಅದನ್ನು ಆಯ್ಕೆ ಮಾಡಿಕೊಳ್ಳಿ.. ಕ್ಯಾಬ್ ನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಬೇಡ. ನಾಚಿಕೆ ಅನ್ನೋ ಪದವೇ ಸತ್ತು ಹೋಗಿದೆ' ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಇದರ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಕ್ಯಾಬ್ ಚಾಲಕನಿಗೆ ಬೆಂಬಲ ಸೂಚಿಸಿದರೆ, ಮತ್ತೆ ಕೆಲವರು ಕಾಬ್ ಚಾಲಕನ ವರ್ತನೆಯನ್ನೇ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ನಡವಳಿಕೆ ಎಷ್ಟು ಸೂಕ್ತವಾಗಿದೆ ಎಂದು ಓರ್ವ ಬಳಕೆದಾರ ಟ್ವೀಟ್ ಮಾಡಿದರೆ, ಮತ್ತೋರ್ವ ಬಳಕೆದಾಕ ಚಾಲಕ ವೀಡಿಯೊವನ್ನು ರೆಕಾರ್ಡ್ ಮಾಡುವುದು ಸರಿಯೇ? ಅವರಿಗೂ ಖಾಸಗಿತನದ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



