20 ವರ್ಷಗಳ ಬಳಿಕ ಕೋಲ್ಕತಾಗೆ ಮರಳುತ್ತಿರುವ ತಸ್ಲಿಮಾ ನಸ್ರೀನ್: ರಾಜಕೀಯ ವಲಯದಲ್ಲಿ ತೀವ್ರ ಸಂಚಲನ
ಆಗಸ್ಟ್ 1 ರಂದು ರವೀಂದ್ರ ಸದನದಲ್ಲಿ ನಡೆಯವ ಮೂಲಭೂತವಾದ ವಿರೋಧಿ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕೋಲ್ಕತಾಗೆ ಆಗಮಿಸಲಿದ್ದಾರೆ .

ಕೋಲ್ಕತಾ : 2007ರಲ್ಲಿ ತಮ್ಮ ಬರಹಗಳ ಕಾರಣದಿಂದ ಸೃಷ್ಟಿಯಾಗಿದ್ದ ವಿರೋಧದಿಂದ ಕೋಲ್ಕತಾ ತೊರೆದಿದ್ದ ಬಾಂಗ್ಲಾದೇಶದ ಲೇಖಕಿ 20 ತಸ್ಲೀಮಾ ನಸ್ರೀನ್ ವರ್ಷಗಳ ಬಳಿಕ ಮತ್ತೆ ಕೋಲ್ಕತಾಗೆ ಮರಳಲು ಸಜ್ಜಾಗಿದ್ದಾರೆ.
ಆಗಸ್ಟ್ 1 ರಂದು ರವೀಂದ್ರ ಸದನದಲ್ಲಿ ನಡೆಯವ ಮೂಲಭೂತವಾದ ವಿರೋಧಿ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕೋಲ್ಕತಾಗೆ ಆಗಮಿಸಲಿದ್ದಾರೆ. ಎರಡು ದಶಕಗಳ ಬಳಿಕ ನಗರಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಬೆಳವಣಿಗೆ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
63 ವರ್ಷದ ತಸ್ಲಿಮಾ ನಸ್ರೀನ್ ಅವರ ಆತ್ಮಕಥನದಲ್ಲಿ ಧರ್ಮನಿಂದನೆ ಮಾಡಲಾಗಿದೆ ಎಂದು ಆರೋಪಿಸಿ ಭಾರಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಹಿನ್ನೆಲೆಯಲ್ಲಿ ಅಂದಿನ ಎಡರಂಗ ಸರ್ಕಾರ (2001-2006) ಅವರ ಈ ಪುಸ್ತಕವನ್ನು ನಿಷೇಧಿಸಿತ್ತು ಮತ್ತು ತಸ್ಲಿಮಾ ಅವರು ಕೋಲ್ಕತ್ತದಿಂದ ಹೊರಹೋಗಬೇಕಾಯಿತು.
ಆಗಸ್ಟ್ 1 ರಂದು ರವೀಂದ್ರ ಸದನದಲ್ಲಿ ಆಯೋಜಿಸಲಾಗಿರುವ 'ಮೂಲಭೂತವಾದ ವಿರೋಧಿ' ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಕೋಲ್ಕತ್ತಗೆ ಬರಲು ಸಜ್ಜಾಗಿದ್ದಾರೆ. ಮೂರು ಪ್ರಮುಖ ಸಂಘಟನೆಗಳು ಜಂಟಿಯಾಗಿ ನೀಡಿದ ಆಹ್ವಾನದ ಮೇರೆಗೆ ಅವರು ಆಗಮಿಸುತ್ತಿದ್ದಾರೆ.
ಮೂಲತಃ ಬಾಂಗ್ಲಾದೇಶದವರಾದ ತಸ್ಲೀಮಾ ನಸ್ರಿನ್ ಲೇಖಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ ತಮ್ಮ ಬರಹಗಳಿಂದಲೇ ಜಗತ್ತಿನಾದ್ಯಂತ ಹೆಚ್ಚು ಚರ್ಚೆ ವಿವಾದಗಳಿಗೆ ಒಳಗಾದ ವ್ಯಕ್ತಿಗಳಲ್ಲಿ ಒಬ್ಬರು. ಮಹಿಳೆಯರ ಹಕ್ಕು, ಧಾರ್ಮಿಕ ಮೂಲಭೂತವಾದ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನಿರ್ಭಯವಾಗಿ ಬರೆಯುತ್ತಿದ್ದುದು ಮೂಲಭೂತವಾದಿಗಳಿಗೆ ಕೆಂಗಣ್ಣಿಗೆ ಗುರಿಯಾಗಿ ಜೀವ ಬೆದರಿಕೆಗೆ ಒಳಗಾಗಿ ಬಾಂಗ್ಲಾ ತೊರೆಯುವಂತಾಯ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



