ಸೇಲ್ ಆಗದೇ ಉಳಿದಿದ್ದ ಕೊನೆ ಟಿಕೆಟ್‌ನಿಂದ ಖುಲಾಯಿಸಿದ ಅದೃಷ್ಟ! ಮೈ ತುಂಬಾ ಸಾಲ ಮಾಡಿಕೊಂಡಿದ್ದ ರೈತನಿಗೆ ಜಾಕ್‌ಪಾಟ್!
ಚರಂಜಿತ್ ಸಿಂಗ್ ಅವರಿಗೆ ಒಂದೇ ದಿನ ಎರಡು ಬಾರಿ ಅದೃಷ್ಟ ಖುಲಾಯಿಸಿದೆ. ಇದಕ್ಕೂ ಮೊದಲು ಚರಂಜಿತ್ ಸಿಂಗ್ ಮತ್ತೊಂದು ಲಾಟರಿ ಟಿಕೆಟ್ ತೆಗೆದುಕೊಂಡಿದ್ದು, ಅದಕ್ಕೆ 20,000 ರೂಪಾಯಿ ಬಹುಮಾನ ಬಂದಿತ್ತು.

ಮೋಗಾ: 17 ಲಕ್ಷ ರೂಪಾಯಿ ಸಾಲ ಮಾಡಿಕೊಂಡು ತೀವ್ರ ಸಂಕಷ್ಟದಲ್ಲಿದ್ದ ಪಂಜಾಬ್‌ನ ಮೋಗಾ ಜಿಲ್ಲೆಯ 66 ವರ್ಷದ ರೈತನಿಗೆ ಲಾಟರಿಯಲ್ಲಿ ಜಾಕ್‌ಪಾಟ್ ಹೊಡೆದಿದ್ದು, ಮಾರಾಟವಾಗದೇ ಉಳಿದಿದ್ದ ಕೊನೆಯ ಲಾಟರಿ ಟಿಕೆಟ್ ನಿಂದ ಅವರ ಅದೃಷ್ಟವೇ ಬದಲಾಗಿದೆ.
ಸ್ಥಳೀಯ ಲಾಟರಿ ಸ್ಟಾಲ್‌ನಲ್ಲಿ ಮಾರಾಟವಾಗದೇ ಉಳಿದಿದ್ದ 1,000 ರೂ. ಮೌಲ್ಯದ ಕೊನೆಯ ಲಾಟರಿ ಟಿಕೆಟ್ ಖರೀದಿಸಿದ್ದ ಮೋಗಾ ನಿವಾಸಿ ಚರಂಜಿತ್ ಸಿಂಗ್ ಅವರು 50 ಲಕ್ಷ ರೂ.ಗಳ ಮೊದಲ ಬಹುಮಾನ ಗೆದ್ದಿದ್ದಾರೆ.
ಚರಣ್‌ಜಿತ್ ಸಿಂಗ್ ಅವರ ಪ್ರಕಾರ, ಲಾಟರಿ ಟಿಕೆಟ್‌ಗಳನ್ನು ಖರೀದಿಸುವುದು ಅವರಿಗೆ ಬಹಳ ಹಿಂದಿನಿಂದಲೂ ಇದ್ದ ಅಭ್ಯಾಸವಾಗಿದೆ. ಕಳೆದ 15 - 16 ವರ್ಷಗಳಿಂದ, ಅವರು ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಆಗಾಗ್ಗೆ ಅವರು ಪ್ರಯಾಣಿಸಿದಾಗಲ್ಲೆಲ್ಲಾ ಒಂದು ಟಿಕೆಟ್ ತೆಗೆದುಕೊಳ್ಳುತ್ತಾರೆ.
ಎರಡು ಬಾರಿ ಅದೃಷ್ಟ!
ಚರಂಜಿತ್ ಸಿಂಗ್ ಅವರಿಗೆ ಒಂದೇ ದಿನ ಎರಡು ಬಾರಿ ಅದೃಷ್ಟ ಖುಲಾಯಿಸಿದೆ. ಇದಕ್ಕೂ ಮೊದಲು ಚರಂಜಿತ್ ಸಿಂಗ್ ಮತ್ತೊಂದು ಲಾಟರಿ ಟಿಕೆಟ್ ತೆಗೆದುಕೊಂಡಿದ್ದು, ಅದಕ್ಕೆ 20,000 ರೂಪಾಯಿ ಬಹುಮಾನ ಬಂದಿತ್ತು. ಅವರು ತಮ್ಮ ಬಹುಮಾನದ ಹಣ 20 ಸಾವಿರ ರೂಪಾಯಿ ಪಡೆಯಲು ಆ ಲಾಟರಿ ಸ್ಟಾಲ್‌ಗೆ ಭೇಟಿ ನೀಡಿದ್ದರು. ಈ ವೇಳೆ ಲಾಟರಿ ಮಾರಾಟಗಾರನು 1,000 ಮೌಲ್ಯದ ಲಾಟರಿ ಡ್ರಾದಿಂದ ಕೇವಲ ಒಂದು ಟಿಕೆಟ್ ಮಾತ್ರ ಮಾರಾಟವಾಗದೆ ಉಳಿದಿದೆ ಎಂದು ತೋರಿಸಿ ಅದನ್ನು ಖರೀದಿಸುವಂತೆ ಒತ್ತಾಯ ಮಾಡಿದ್ದಾನೆ.
ಚರಂಜಿತ್ ಸಿಂಗ್ ತಾವು ಗೆದ್ದ 20 ಸಾವಿರ ರೂಪಾಯಿ ಲಾಟರಿ ಹಣ ಪಡೆದು, ಅದರಲ್ಲಿ ಗೆಲುವಿನ ಒಂದು ಭಾಗವನ್ನು ಮತ್ತೊಂದು ಲಾಟರಿ ಟಿಕೆಟ್ ಖರೀದಿಸಲು ನಿರ್ಧರಿಸಿದ್ರು. ಮಾರಾಟವಾಗದೇ ಉಳಿದಿದ್ದ ಕೊನೆಯ ಲಾಟರಿ ಟಿಕೆಟ್‌ಗಾಗಿ 1 ಸಾವಿರ ರೂಪಾಯಿ ಖರ್ಚು ಮಾಡಲು ನಿರ್ಧರಿಸಿದರು. ಕೊನೆಗೆ ಅಲ್ಲಿ ಮಾರಾಟವಾಗದೇ ಉಳಿದಿದ್ದ 50 ಲಕ್ಷ ರೂಪಾಯಿ ಬಂಪರ್ ಬಹುಮಾನದ ಟಿಕೆಟ್ ಅನ್ನು 1 ಸಾವಿರ ರೂಪಾಯಿ ಕೊಟ್ಟು, ಖರೀದಿಸಿ ಮನೆಗೆ ಬಂದರು.
ಅವರ ಈ ನಿರ್ಧಾರ ಅದೃಷ್ಟವನ್ನೇ ಬದಲಾಯಿಸಿತು. ಫಲಿತಾಂಶ ಪ್ರಕಟವಾದಾಗ, ಅದೇ ಲಾಟರಿ ಟಿಕೆಟ್ ಗೆ ಪ್ರಥಮ ಬಹುಮಾನ ಬಂದಿದ್ದು, ಅವರಿಗೆ 50 ಲಕ್ಷ ರೂಪಾಯಿ ಗಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


