ಕೋಲ್ಕತ್ತಾದಲ್ಲಿ 5.4 ತೀವ್ರತೆಯ ಭೂಕಂಪ: ವೇದಿಕೆಯಲ್ಲಿ ಭಾಷಣ ಮಾತನಾಡುತ್ತಿದ್ದಾಗ ಅಲುಗಾಡಿದ ಕೇಂದ್ರ ಸಚಿವರು! Video
ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆಯ ಭೂ ಕಂಪವಾಗಿದ್ದು, ಜನರು ಮನೆ ಮತ್ತು ಕಚೇರಿಗಳಿಂದ ಹೊರ ಬಂದಿದ್ದಾರೆ. ಮಧ್ಯಾಹ್ನ 1.22 ಕ್ಕೆ ಭೂಕಂಪನದ ಅನುಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಶುಕ್ರವಾರ 5.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಕೋಲ್ಕತ್ತಾ ಮತ್ತಿತರ ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪದ ಕೇಂದ್ರ ಬಿಂದು ಬಾಂಗ್ಲಾದೇಶದಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ. ಪಶ್ಚಿಮ ಬೆನಾಲ್ ರಾಜಧಾನಿಯಲ್ಲಿ ಮಧ್ಯಾಹ್ನ 1.22 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಜನರು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ಕೋಲ್ಕತ್ತಾದಲ್ಲಿ ಈ ತಿಂಗಳು ಭೂಕಂಪ ಸಂಭವಿಸಿದ್ದು ಇದು ಎರಡನೇ ಬಾರಿ. ಈ ಹಿಂದೆ ಫೆಬ್ರವರಿ 3 ರಂದು ಲಘು ಭೂಕಂಪ ಆಗಿತ್ತು.
ನೆರೆಯ ರಾಜ್ಯಗಳು ಮತ್ತು ಬಾಂಗ್ಲಾದೇಶದಲ್ಲಿಯೂ ಭೂಕಂಪದ ಅನುಭವವಾಗಿದೆ. EMSC ದತ್ತಾಂಶದ ಪ್ರಕಾರ, ಮ್ಯಾನ್ಮಾರ್‌ನ ಅಕ್ಯಾಬ್‌ನಿಂದ ಪೂರ್ವಕ್ಕೆ 70 ಮೈಲುಗಳಷ್ಟು ದೂರದಲ್ಲಿ ಭೂಕಂಪನ ಸಂಭವಿಸಿದೆ. ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಮತ್ತು ನೆರೆಯ ಬಾಂಗ್ಲಾದೇಶದಲ್ಲಿ ಕಂಪನದ ಅನುಭವವಾಗಿದೆ. 10 ಕಿಲೋಮೀಟರ್ ಅಥವಾ 6.21 ಮೈಲಿ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ ಹೇಳಿದೆ.
ಕೇಂದ್ರ ಸಚಿವ ಸುಕಾಂತ ಮಜುಂದಾರ್ ಕೋಲ್ಕತ್ತಾದಲ್ಲಿ ಇಂದು ಮಧ್ಯಾಹ್ನ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದಾಗ ಭೂಕಂಪ ಸಂಭವಿಸಿದೆ. ಈ ಕುರಿತ ವಿಡಿಯೋವನ್ನು ಸುದ್ದಿ ಸಂಸ್ಥೆ ಐಎಎನ್‌ಎಸ್ ಹಂಚಿಕೊಂಡಿದೆ.
ವಿಡಿಯೋದಲ್ಲಿ ವೇದಿಕೆಯಲ್ಲಿದ್ದ ಮಜುಂದಾರ್, ನಡುಗುತ್ತಿರುವಂತೆ ಕಾಣಿಸುತ್ತದೆ. ನಾನು ಭಾಷಣ ನಿಲ್ಲಿಸಲೇ ಎಂದು ಅವರು ಕೇಳುತ್ತಾರೆ. ಕಾರ್ಯಕ್ರಮ ಸ್ಥಳದಲ್ಲಿದ್ದ ಲೈಟ್ , ಕ್ಯಾಮರಾಗಳು ಕೂಡಾ ಅಲುಗಾಡುವುದು ಕಂಡುಬಂದಿದೆ.
ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆಯ ಭೂ ಕಂಪವಾಗಿದ್ದು, ಜನರು ಮನೆ ಮತ್ತು ಕಚೇರಿಗಳಿಂದ ಹೊರ ಬಂದಿದ್ದಾರೆ. ಮಧ್ಯಾಹ್ನ 1.22 ಕ್ಕೆ ಭೂಕಂಪನದ ಅನುಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯ ಸಚಿವಾಲಯದಲ್ಲಿ ಕಂಪನದ ಹಿನ್ನೆಲೆಯಲ್ಲಿ ನಬಣ್ಣ, ನೌಕರರು ಬೀದಿಗೆ ಬಂದಿದ್ದಾರೆ. ಸಾಲ್ಟ್ ಲೇಕ್‌ನಲ್ಲಿರುವ ನಗರದ ಐಟಿ ಹಬ್ ಮತ್ತು ಇತರ ಪ್ರದೇಶಗಳಲ್ಲಿನ ಬಹುಮಹಡಿ ವಸತಿ ಕಟ್ಟಡಗಳಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


