ಗೊಗೊಯ್ ಪತ್ನಿಗೆ ಪಾಕಿಸ್ತಾನ ನಂಟು: ಕುಟುಂಬವನ್ನು ರಾಜಕೀಯಕ್ಕೆ ಎಳೆದು ತರಬೇಡಿ; ಹಿಮಂತ್ ಬಿಸ್ವಾಸ್ ವಿರುದ್ಧ ಪ್ರಿಯಾಂಕಾ ಕಿಡಿ
ರಾಜಕೀಯದಲ್ಲಿ ಎರಡು ರೀತಿಯ ನಾಯಕರಿದ್ದಾರೆ. ಪಾಸಿಟಿವ್ ರಾಜಕೀಯ ಮಾಡುವವರು ಮತ್ತು ಇನ್ನೊಬ್ಬರು ಧ್ರುವೀಕರಣ ಮಾಡುವವರು. ಗೌರವ್ ಗೊಗೊಯ್ ಪ್ರೀತಿಯಿಂದ ರಾಜಕೀಯ ಮಾಡುತ್ತಿದ್ದಾರೆ"

ಗುವಾಹಟಿ: ಅಸ್ಸಾಂ ರಾಜಕೀಯಕ್ಕೆ ಗೌರವ್ ಗೊಗೊಯ್ ಅವರ ಕುಟುಂಬ ಮತ್ತು ಮಕ್ಕಳನ್ನು ಎಳೆದು ತರುತ್ತಿರುವುದು ಸರಿಯಲ್ಲ ಎಂದು ವಯನಾಡ್ ಸಿಎಂ ಹಿಮಂತ್ ಬಿಸ್ವಾಸ್ ಶರ್ಮಾ ವಿರುದ್ಧ ಸಂಸದೆ ಪ್ರಿಯಾಂಕಾ ಗಾಂಧಿ ಹರಿಹಾಯ್ದಿದ್ದಾರೆ.
ಗುವಾಹಟಿಯ ಹೊರವಲಯದಲ್ಲಿರುವ ಸೋನಾಪುರದಲ್ಲಿರುವ 'ಜುಬೀನ್ ಖೇತ್ರಾ'ದಲ್ಲಿ ದಿವಂಗತ ಗಾಯಕ ಜುಬೀನ್ ಗಾರ್ಗ್ ಅವರಿಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಪ್ರಿಯಾಂಕಾ ವಾದ್ರಾ, ಗಾಯಕ ಜುಬೀನ್ ಗಾರ್ಗ್"ರಾಜಕೀಯಕ್ಕಿಂತ ಮೇಲಿದ್ದಾರೆ", ಅವರು ತಮ್ಮ ಜೀವನದುದ್ದಕ್ಕೂ ಪ್ರೀತಿಯ ಸಂದೇಶವನ್ನು ಹರಡಿದರು ಎಂದು ಹೇಳಿದರು.
ರಾಜಕೀಯದಲ್ಲಿ ಎರಡು ರೀತಿಯ ನಾಯಕರಿದ್ದಾರೆ. ಪಾಸಿಟಿವ್ ರಾಜಕೀಯ ಮಾಡುವವರು ಮತ್ತು ಇನ್ನೊಬ್ಬರು ಧ್ರುವೀಕರಣ ಮಾಡುವವರು. ಗೌರವ್ ಗೊಗೊಯ್ ಪ್ರೀತಿಯಿಂದ ರಾಜಕೀಯ ಮಾಡುತ್ತಿದ್ದಾರೆ" ಎಂದು ಪಾಕಿಸ್ತಾನ ಸಂಬಂಧಗಳ ಆರೋಪದ ಮೇಲೆ ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥರ ವಿರುದ್ಧ ಹಿಮಂತ್ ಶರ್ಮಾ ಪದೇಪದೇ ನಡೆಸುತ್ತಿರುವ ವಾಗ್ದಾಳಿ ಹಿನ್ನೆಲೆಯಲ್ಲಿ ಪ್ರಿಯಾಂಕಾ ಕಿಡಿ ಕಾರಿದ್ದಾರೆ.
ಗೊಗೊಯ್ "ಒಬ್ಬ ಸಕಾರಾತ್ಮಕ ವ್ಯಕ್ತಿ, ಮತ್ತು ರಾಜಕೀಯದಲ್ಲಿ ಸಕಾರಾತ್ಮಕತೆಯನ್ನು ತರಲು ಬಯಸುತ್ತಾರೆ, ಅದಕ್ಕಾಗಿಯೇ ಅವರ ಮೇಲೆ ಇಂತಹ ದಾಳಿಗಳು ನಡೆಯುತ್ತಿವೆ. ಅಸ್ಸಾಂನ ಜನರು ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ ಗೌರವ್ ಮತ್ತು ಅವರ ಕುಟುಂಬದ ಮೇಲಿನ ದಾಳಿಗಳು ತಪ್ಪು ರಾಜಕೀಯ. ಒಬ್ಬ ರಾಜಕೀಯ ನಾಯಕನ ಕುಟುಂಬ ಮತ್ತು ಮಕ್ಕಳ ಮೇಲೆ ಯಾರೂ ದಾಳಿ ಮಾಡಬಾರದು" ಎಂದು ವಾದ್ರಾ ಹೇಳಿದರು.
ಈ ರೀತಿಯ ರಾಜಕೀಯ ಮಾಡುವ ಬದಲು, ಅಸ್ಸಾಂ ಮುಖ್ಯಮಂತ್ರಿ "ಉದ್ಯೋಗ ಹುಡುಕುತ್ತಿರುವ ರಾಜ್ಯದ ಯುವಕರು ಮತ್ತು ಮಹಿಳೆಯರ ಬಗ್ಗೆ ಮಾತನಾಡಬೇಕು" ಎಂದು ಪ್ರಿಯಾಂಕಾಂ ಗಾಂಧಿ ಸಲಹೆ ನೀಡಿದ್ದಾರೆ. ನೀವು ಎಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ನೋಡುತ್ತಿದ್ದೀರಿ. ಇದು ರಾಜ್ಯದ ಜನರಿಗೆ ಮಾಡಿದ ದ್ರೋಹ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಗಾಯಕ ಜುಬೀನ್ ಗೆ ಗೌರವ ಸಲ್ಲಿಸಲು ಸ್ಮಶಾನಕ್ಕೆ ಹೋಗಿದ್ದೆ ಅದರಲ್ಲಿ ಯಾವುದೇ ರಾಜಕೀಯ ಇರಲಿಲ್ಲ ಎಂದು ಹೇಳಿದರು. "ಜುಬೀನ್ ಗರ್ಗ್ ರಾಜಕೀಯವನ್ನು ಮೀರಿದವರಾಗಿದ್ದರು. ಅವರ ಸ್ಮಶಾನ ಪವಿತ್ರ ಸ್ಥಳವಾಗಿರಬೇಕು ಮತ್ತು ರಾಜಕೀಯಕ್ಕೆ ಬಳಸಬಾರದು" ಎಂದು ಅವರು ಹೇಳಿದರು.
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರ ಪತ್ನಿ ಪಾಕಿಸ್ತಾನ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




