US ಜೊತೆಗಿನ ವ್ಯಾಪಾರ ಒಪ್ಪಂದ ಆಯ್ತು, ಈಗ 'AI' ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕೈ ವಾಗ್ದಾಳಿ; ಏನಿದು ಆರೋಪ?
AI ಬಳಸಿ ರಚಿಸಲಾದ ತನ್ನ 9 ವಿಡಿಯೋಗಳನ್ನು ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಬಲವಂತದಿಂದ ಡಿಲೀಟ್ ಮಾಡಿದೆ ಎಂದು ಆರೋಪಿಸಿದೆ.

ನವದೆಹಲಿ: ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇದೀಗ ಮತ್ತೊಂದು ಆರೋಪ ಮಾಡಿದೆ. ಇಲ್ಲಿಯವರೆಗೂ ಅಮೆರಿಕ ಜೊತೆಗಿನ ಮಧ್ಯಂತರ ವ್ಯಾಪಾರ ಒಪ್ಪಂದ ಕುರಿತು ಆರೋಪ ಮಾಡುತ್ತಿದ್ದ ವಿಪಕ್ಷ ಇದೀಗ ಕೃತಕ ಬುದ್ಧಿಮತ್ತೆ ವಿಚಾರದಲ್ಲೂ ಸರ್ಕಾರದ ವಿರುದ್ಧ ಮುಗಿಬಿದಿದ್ದೆ.
ಹೌದು. AI ಬಳಸಿ ರಚಿಸಲಾದ ತನ್ನ 9 ವಿಡಿಯೋಗಳನ್ನು ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಬಲವಂತದಿಂದ ಡಿಲೀಟ್ ಮಾಡಿದೆ ಎಂದು ಆರೋಪಿಸಿದೆ. ಎಲ್ಲ ಭಿನ್ನಮತದ ಧ್ವನಿ ಅಡಗಿಸುವ ಬದಲು ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡಬೇಕು ಎಂದು ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರಿನೇಟ್, ವಿಡಿಯೋ ಡಿಲೀಟ್ ಮಾಡಿರುವುದು ರಾಜಕೀಯ ವಿರೋಧಿಗಳನ್ನು ನಿರ್ಬಂಧಿಸುವ ನಿಯಮಗಳ ದುರ್ಬಳಕೆ ಮತ್ತು ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯ ಕೊರತೆಯಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಆರೋಪಕ್ಕೆ ಸರ್ಕಾರ ಅಥವಾ ಬಿಜೆಪಿಯಿಂದ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
ಭಾರತದ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯವನ್ನು ದುರ್ಬಳಕೆ ಮಾಡಿಕೊಳ್ಳುವಲ್ಲಿ ಮೋದಿ ಸರ್ಕಾರ ಏನನ್ನೂ ಬಿಟ್ಟಿಲ್ಲ. ಮೊದಲು ವ್ಯಾಪಾರ ಒಪ್ಪಂದದಲ್ಲಿ ನಮ್ಮ ಎಲ್ಲಾ ಡೇಟಾವನ್ನು ಅಮೆರಿಕಕ್ಕೆ ಹಸ್ತಾಂತರಿಸಿದ ಸರ್ಕಾರ ಈಗ ನಡೆಯುತ್ತಿರುವ AI ಶೃಂಗಸಭೆ ನಿರ್ವಹಣೆಯಲ್ಲಿ ದೇಶಕ್ಕೆ ಮುಜುಗರ ಮಾಡುತ್ತಿದೆ. ನಾಚಿಕೆಯಿಲ್ಲದೆ ಕಳ್ಳತನವನ್ನು ಬಹಿರಂಗಪಡಿಸುವ ಮೂಲಕ ಭಾರತದ ಪ್ರತಿಷ್ಠೆಗೆ ಕಳಂಕ ತಂದಿದೆ. "ಆದರೆ ವಿಪರ್ಯಾಸವೆಂದರೆ, AI ಬಗ್ಗೆ ದೊಡ್ಡದಾಗಿ ಮಾತನಾಡುವ ಇದೇ ನರೇಂದ್ರ ಮೋದಿ, ವಾಸ್ತವವಾಗಿ ಕೃತಕ ಬುದ್ಧಿಮತ್ತೆಯ ಬಗ್ಗೆ ಭಯಪಡುತ್ತಾರೆ ಎಂದರು.
ಕಳೆದ ಆರು ವಾರಗಳಲ್ಲಿ, AI ಬಳಸಿ ಕಾಂಗ್ರೆಸ್ ರಚಿಸಿದ ಒಂಬತ್ತು ವೀಡಿಯೊಗಳನ್ನು ಹೇಡಿ" ಪ್ರಧಾನಿ, ಅವರ ಕೇಂದ್ರ ಮತ್ತು ಬಿಜೆಪಿ ರಾಜ್ಯ ಸರ್ಕಾರಗಳು "ಬಲವಂತವಾಗಿ ಡಿಲೀಟ್ ಮಾಡಿವೆ ಎಂದು ಆರೋಪಿಸಿದರು.
ಈ ಎಲ್ಲಾ ವೀಡಿಯೊಗಳು ಕಾನೂನುಬದ್ಧವಾಗಿ ಅಗತ್ಯವಿರುವ AI ಹಕ್ಕುಬಾಧ್ಯತೆ (disclaimer) ಹೊಂದಿದ್ದವು ಎಂಬುದನ್ನು ಸಂಪೂರ್ಣವಾಗಿ ಸ್ಪಷ್ಟಪಡಿಸುತ್ತೇನೆ. ವೀಡಿಯೊಗಳ ಸಮಾಯವಧಿಯಲ್ಲಿ'AI- ರಚಿತವಾದ ವೀಡಿಯೊ' ಅನ್ನು ಮೇಲ್ಭಾಗದಲ್ಲಿ ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ. ಇದು ಯಾರನ್ನೂ ದಾರಿತಪ್ಪಿಸುವ ಅಥವಾ ಮೋಸಗೊಳಿಸುವ ಯಾವುದೇ ಪ್ರಯತ್ನವಿಲ್ಲ ಎಂದು ಸ್ಪಷ್ಟವಾಗಿ ಸಾಬೀತುಪಡಿಸುತ್ತದೆ. ಆದರೂ, ಸ್ವತಃ ಪ್ರಧಾನಿ ಮೋದಿ ಮತ್ತು ಬಿಜೆಪಿ ಸತ್ಯದ ಬಗ್ಗೆ ತುಂಬಾ ಭಯಭೀತರಾಗಿದ್ದಾರೆ ಎಂದು ಸುಪ್ರೀಯಾ ಶ್ರೀನೇಟ್ ಟೀಕಾ ಪ್ರಹಾರ ನಡೆಸಿದರು.
ಜನರಲ್ ನರವಾಣೆ ಮತ್ತು ಸೇನೆಗೆ ಹೇಳುವ ಮೂಲಕ ಪ್ರಧಾನಿ ಮೋದಿ ಎಷ್ಟು ಹೇಡಿತನದಿಂದ ತಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ಅಲ್ಲದೇ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಮುಂದುವರಿಸುವಾಗ ಮೋದಿ ಭಾರತದ ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಹೇಗೆ ರಾಜಿ ಮಾಡಿಕೊಂಡರು" ಎಂಬುದನ್ನು ಈ ವೀಡಿಯೊಗಳು ತೋರಿಸುತ್ತವೆ ಎಂದು ಶ್ರೀನೇಟ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



