ದೇಶ

ಪಹಲ್ಗಾಮ್ ದಾಳಿಯ ನಂತರ ಬಂದ್ ಆಗಿದ್ದ 14 ಪ್ರವಾಸಿ ತಾಣಗಳು ಮತ್ತೆ ಓಪನ್

ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು.

ಪಹಲ್ಗಾಮ್ ದಾಳಿಯ ನಂತರ ಬಂದ್ ಆಗಿದ್ದ 14 ಪ್ರವಾಸಿ ತಾಣಗಳು ಮತ್ತೆ ಓಪನ್
ಪಹಲ್ಗಾಮ್ ದಾಳಿಯ ನಂತರದ ದೃಶ್ಯ
Published On :

ಶ್ರೀನಗರ: ಕಳೆದ ವರ್ಷ ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಬಂದ್ ಆಗಿದ್ದ ಕೇಂದ್ರಾಡಳಿತ ಪ್ರದೇಶದ 14 ಪ್ರವಾಸಿ ತಾಣಗಳನ್ನು ಪುನಃ ತೆರೆಯಲು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೋಮವಾರ ಆದೇಶಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು.

"ಸಂಪೂರ್ಣ ಭದ್ರತಾ ಪರಿಶೀಲನೆ ಮತ್ತು ಚರ್ಚೆಯ ನಂತರ, ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ ಕಾಶ್ಮೀರ ಮತ್ತು ಜಮ್ಮು ವಿಭಾಗಗಳಲ್ಲಿನ ಬಹುತೇಕ ಪ್ರವಾಸಿ ತಾಣಗಳನ್ನು ಪುನಃ ತೆರೆಯಲು ನಾನು ಆದೇಶಿಸಿದ್ದೇನೆ" ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ X ನಲ್ಲಿ ಪೋಸ್ಟ್ ಮಾಡಿದೆ.

ಇದರೊಂದಿಗೆ, ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ನಂತರ ಮತ್ತೆ ತೆರೆಯಲಾದ ಒಟ್ಟು ಪ್ರವಾಸಿ ತಾಣಗಳ ಸಂಖ್ಯೆ 26 ಕ್ಕೆ ಏರಿದೆ.

ಸೆಪ್ಟೆಂಬರ್ 26 ರಂದು, ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರು 12 ಪ್ರವಾಸಿ ತಾಣಗಳನ್ನು ಪುನಃ ತೆರೆಯಲು ಆದೇಶಿಸಿದ್ದರು.

"ಕಾಶ್ಮೀರ ವಿಭಾಗದ ಹನ್ನೊಂದು ಪ್ರವಾಸಿ ತಾಣಗಳಾದ - ಯೂಸ್ಮಾರ್ಗ್, ದೂಧ್‌ಪತ್ರಿ, ಕೊಕರ್‌ನಾಗ್‌ನ ದಂಡಿಪೋರಾ ಪಾರ್ಕ್, ಶೋಪಿಯಾನ್‌ನ ಪೀರ್ ಕಿ ಗಲಿ, ದುಬ್ಜನ್ ಮತ್ತು ಪದ್‌ಪವಾನ್, ಅಸ್ತಾನ್‌ಪೋರಾ, ಶ್ರೀನಗರದ ಟುಲಿಪ್ ಗಾರ್ಡನ್, ತಜ್ವಾಸ್ ಗ್ಲೇಸಿಯರ್, ಗಂಡರ್‌ಬಾಲ್‌ನ ಹಂಗ್ ಪಾರ್ಕ್ ಮತ್ತು ಬಾರಾಮುಲ್ಲಾದ ವುಲ್ಲಾರ್ ಮತ್ತು ವಾಟ್ಲಾಬ್" ಗಳನ್ನು ತಕ್ಷಣವೇ ಪುನಃ ತೆರೆಯಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಕಚೇರಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.