ಶಿವಾಜಿ ಜೊತೆಗೆ ಟಿಪ್ಪು ಹೋಲಿಕೆ: ವಿವಾದ ಹುಟ್ಟುಹಾಕಿದ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ; ಬಿಜೆಪಿ ಕಿಡಿ!
ಮಾಲೆಗಾಂವ್ ಮಹಾನಗರ ಪಾಲಿಕೆ ಉಪಮೇಯರ್ ಶಾನ್-ಎ-ಹಿಂದ್ ನಿಹಾಲ್ ಅಹಮದ್ ಅವರ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಇಡುವುದಕ್ಕೆ ಶಿವಸೇನೆ ಕಾರ್ಪೋರೇಟರ್ ಹಾಗೂ ಹಿಂದೂ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿವೆ.

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಜೊತೆಗೆ 18 ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಹೋಲಿಸುವುದರೊಂದಿಗೆ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ವಿವಾದ ಹುಟ್ಟುಹಾಕಿದ್ದಾರೆ. ಅವರದು ನಾಚಿಕೆಗೇಡಿನ ಹೇಳಿಕೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕಿಡಿಕಾರಿದ್ದಾರೆ.
ಮಾಲೆಗಾಂವ್ ಮಹಾನಗರ ಪಾಲಿಕೆ ಉಪಮೇಯರ್ ಶಾನ್-ಎ-ಹಿಂದ್ ನಿಹಾಲ್ ಅಹಮದ್ ಅವರ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಇಡುವುದಕ್ಕೆ ಶಿವಸೇನೆ ಕಾರ್ಪೋರೇಟರ್ ಹಾಗೂ ಹಿಂದೂ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿವೆ.
ಈ ವಿವಾದ ಕುರಿತು ಬುಲ್ಧಾನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಪ್ಕಲ್, ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಮತ್ತು ಅವರ ಸ್ವರಾಜ್ಯ ಪರಿಕಲ್ಪನೆ ಉಲ್ಲೇಖಿಸುತ್ತಾ, ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಟಿಪ್ಪು ಸುಲ್ತಾನನ ಕರೆಯನ್ನು ಉದಾಹರಣೆಯಾಗಿ ನೀಡಿದರು. ಅಲ್ಲದೇ ಅದೇ ಮಾರ್ಗದಲ್ಲಿ ವ್ಯಕ್ತಪಡಿಸಿದ ಆದರ್ಶ ಎಂದು ಪ್ರತಿಪಾದಿಸಿದರು.
"ಆ ಅರ್ಥದಲ್ಲಿ, ಟಿಪ್ಪು ಸುಲ್ತಾನ್ ಭಾರತದ ಯೋಧ ಮತ್ತು ಭೂಮಿಪುತ್ರ. ಅವರು ಎಂದಿಗೂ ವಿಷಕಾರಿ ಸಿದ್ಧಾಂತಗಳನ್ನು ಸ್ವೀಕರಿಸಲಿಲ್ಲ. ಬದಲಿಗೆ ಶೌರ್ಯದ ಸಂಕೇತವಾಗಿ, ನಾವು ಟಿಪ್ಪು ಸುಲ್ತಾನ್ ಅನ್ನು ಶಿವಾಜಿ ಮಹಾರಾಜರಿಗೆ ಸಮಾನವಾಗಿ ಪರಿಗಣಿಸಬೇಕು ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಸಪ್ಕಾಲ್ ವಿರುದ್ಧ ಫಡ್ನವೀಸ್ ತೀವ್ರ ವಾಗ್ದಾಳಿ ನಡೆಸಿದ್ದು, ಈ ಹೋಲಿಕೆ ಖಂಡನೀಯವಾಗಿದ್ದು, ಸಪ್ಕಲ್ ತನ್ನ ಹೇಳಿಕೆ ಬಗ್ಗೆ ನಾಚಿಕೆಪಡಬೇಕು ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



