'ನೀವು BJPಗೆ ಕೆಲಸ ಮಾಡುತ್ತಿದ್ದೀರಾ? ನಿಮಗೆ ಜವಾಬ್ದಾರಿ ಇಲ್ಲವೇ? ವಸ್ತುನಿಷ್ಠ ವರದಿ ಮಾಡಿ': ಮಾಧ್ಯಮಗಳ ವಿರುದ್ಧ ರಾಹುಲ್ ಗಾಂಧಿ ಕೆಂಡಾಮಂಡಲ; Video
ನೀವು ಸರ್ಕಾರ ನೀಡುವ “ಕೀವರ್ಡ್” ನ್ನು ಹಿಡಿದು ಅದೇ ಆಧಾರದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವುದು ದೇಶಕ್ಕೆ ಮಾಡುವುದು ಅನ್ಯಾಯವಲ್ಲವೇ ಎಂದು ಕೇಳಿದರು.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತಾತ್ವಿಕ ಪ್ರಸ್ತಾವನೆ (substantive motion) ತರಲು ನೋಟಿಸ್ ಸಲ್ಲಿಸಿದ ಬಳಿಕ, ಸಂಸತ್ತಿನ ಹೊರಗೆ ಬಂದ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ ಮಾಧ್ಯಮಗಳ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀವು ಸರ್ಕಾರ ನೀಡುವ “ಕೀವರ್ಡ್” ನ್ನು ಹಿಡಿದು ಅದೇ ಆಧಾರದಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವುದು ದೇಶಕ್ಕೆ ಮಾಡುವುದು ಅನ್ಯಾಯವಲ್ಲವೇ ಎಂದು ಕೇಳಿದರು.
ಸಂಸತ್ತಿನಲ್ಲಿ ಈ ಪ್ರಸ್ತಾವನೆ ಕುರಿತು ಪ್ರಶ್ನಿಸಲ್ಪಟ್ಟಾಗ, ಇದೇ ದಿನಕ್ಕೆ ಮಾಧ್ಯಮಗಳಿಗೆ ನೀಡಲಾದ ಕೀವರ್ಡ್ ಇದೆಯೇ ರಾಹುಲ್ ಗಾಂಧಿ ಪ್ರಶ್ನಿಸಿದರು.
ಕನಿಷ್ಠ ನಿಮ್ಮ ಕೆಲಸವನ್ನು ಸ್ವತಃ ಮಾಡಿ. ನೀವು ಸಂಪೂರ್ಣವಾಗಿ ಬಿಜೆಪಿಯವರಾಗಿ ಕೆಲಸ ಮಾಡುತ್ತಿಲ್ಲ ತಾನೇ, ಸ್ವಲ್ಪವಾದರೂ ವಸ್ತುನಿಷ್ಠವಾಗಿ ಕೆಲಸ ಮಾಡಲು ಪ್ರಯತ್ನಿಸಿ. ಇದು ನಿಜಕ್ಕೂ ಲಜ್ಜೆಗೇಡು ಕೃತ್ಯ, ಅತಿಯಾಯಿತು, ನಿಮಗೂ ಹಾಗೆ ಅನಿಸುತ್ತಿಲ್ಲವೇ? ನೀವು ಜವಾಬ್ದಾರಿಯುತ ವ್ಯಕ್ತಿಗಳು. ನೀವು ಮಾಧ್ಯಮದವರು.
ನಿಮಗೆ ವಸ್ತುನಿಷ್ಠವಾಗಿರುವ ಜವಾಬ್ದಾರಿ ಇದೆ. ಪ್ರತಿದಿನ ಅವರು ಕೊಡುವ ಒಂದೇ ಪದವನ್ನು ಹಿಡಿದು ನಿಮ್ಮ ಸಂಪೂರ್ಣ ಕಾರ್ಯಕ್ರಮವನ್ನು ನಡೆಸಲು ಸಾಧ್ಯವಿಲ್ಲ. ನೀವು ದೇಶಕ್ಕೆ ಅನ್ಯಾಯ ಮಾಡುತ್ತಿದ್ದೀರಿ. ಅದು ನಿಮಗೆ ಅರ್ಥವಾಗುತ್ತಿಲ್ಲವೇ?” ಎಂದು ಕಾರಿನಲ್ಲಿ ತೆರಳುವ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ರಾಹುಲ್ ಗಾಂಧಿ ಕೇಳಿದರು.
ತಮ್ಮ ನೋಟಿಸ್‌ನಲ್ಲಿ, ನಿಶಿಕಾಂತ್ ದುಬೆ ಅವರು ರಾಹುಲ್ ಗಾಂಧಿ ಸದನವನ್ನು ತಪ್ಪು ದಾರಿಗೆಳೆದುದಾಗಿ ಆರೋಪಿಸಿ, ಅವರ ಸಂಸದೀಯ ಸದಸ್ಯತ್ವವನ್ನು ರದ್ದುಪಡಿಸುವಂತೆ ನಿನ್ನೆ ನೊಟೀಸ್ ಜಾರಿ ಮಾಡಿದ್ದರು. ಜೊತೆಗೆ, ರಾಹುಲ್ ಗಾಂಧಿಗೆ ಭವಿಷ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧ ಹೇರಬೇಕು ಎಂದು ಸಹ ಕೇಳಿಕೊಂಡರು.
ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ರಾಹುಲ್ ಗಾಂಧಿ ತೀವ್ರ ಟೀಕೆ ನಡೆಸಿದ ಬಳಿಕ ಈ ನೊಟೀಸ್ ಬಂದಿದೆ. ಆ ಒಪ್ಪಂದವು ದೇಶದ ಇಂಧನ ಭದ್ರತೆ ಮತ್ತು ರೈತರ ಹಿತಾಸಕ್ತಿಗಳಿಗೆ ಧಕ್ಕೆಯುಂಟುಮಾಡುತ್ತದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ತರಲಾದ ತಾತ್ವಿಕ ಪ್ರಸ್ತಾವನೆ ಕುರಿತು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಪ್ರತಿಕ್ರಿಯಿಸಿ, ಸರ್ಕಾರ ಪ್ರಸ್ತಾವನೆ ತರಲು ಮುಂದಾದರೆ ಪ್ರತಿಕ್ರಿಯೆಯನ್ನು ಕೇಳಲು ಸಹ ಸಿದ್ಧವಾಗಿರಬೇಕು ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕನ ಭಾಷಣದಲ್ಲಿನ ಎಲ್ಲ ವಿಷಯ ತೆಗೆದುಹಾಕುತ್ತಿದ್ದಾರೆ. ಪ್ರಸ್ತಾವನೆ ತರಲು ಸರ್ಕಾರ ಮುಂದಾದರೆ, ವಿರೋಧ ಪಕ್ಷದ ಉತ್ತರವನ್ನು ಕೂಡ ಕೇಳಬೇಕು. ಎಪ್ಸ್ಟೀನ್ ಫೈಲ್‌ಗಳಲ್ಲಿ ಏನು ಸಂಸತ್ತಿಗೆ ವಿರುದ್ಧವಾದುದು? ಅದು ಮಹತ್ವದ ವಿಷಯ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



