ಯೋಗ್ಯತಾ ಪರವಾನಗಿ ಇಲ್ಲದೆ ಎಂಟು ಬಾರಿ ವಿಮಾನ ಹಾರಾಟ: ಏರ್ ಇಂಡಿಯಾಗೆ 1 ಕೋಟಿ ರೂ ದಂಡ!
ಏರ್ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 2025ರಲ್ಲಿ ಸ್ವಯಂ ಪ್ರೇರಣೆಯಿಂದ ವರದಿಯಾದ ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ನವದೆಹಲಿ: ವಿಮಾನಯಾನ ಯೋಗ್ಯತಾ ಪರವಾನಗಿ ಇಲ್ಲದೆ ಕಳೆದ ವರ್ಷ ಎಂಟು ಬಾರಿ ಏರ್ ಬಸ್ A320 ವಿಮಾನವನ್ನು ಚಲಾಯಿಸಿದ್ದಕ್ಕಾಗಿ ಏರ್ ಇಂಡಿಯಾಕ್ಕೆ 110,350 ಯುಎಸ್ ಡಾಲರ್ ಸುಮಾರು 1 ಕೋಟಿ ರೂ. ದಂಡವನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA)ವಿಧಿಸಿದೆ.
ಕಳೆದ ವರ್ಷ ಡಿಸೆಂಬರ್ 2 ರಂದು ಏರ್ ಇಂಡಿಯಾ ಕನಿಷ್ಠ ಎಂಟು ಮಾರ್ಗಗಳಲ್ಲಿ ಅಗತ್ಯವಾದ ಯೋಗ್ಯತಾ ಪರವಾನಗಿ ಇಲ್ಲದೆ A320 ನಿಯೋ ವಿಮಾನವನ್ನು ಚಲಾಯಿಸಿದ ಘಟನೆಯ ಬಗ್ಗೆ DGCA ತನಿಖೆ ನಡೆಸುತ್ತಿದೆ. ನಿಯಮ ಉಲ್ಲಂಘಿಸಿದ್ದಕ್ಕಾಗಿ ಏರ್ ಇಂಡಿಯಾಕ್ಕೆ 1 ಕೋಟಿ ರೂಪಾಯಿ ದಂಡ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.
ಏರ್ ಇಂಡಿಯಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 2025ರಲ್ಲಿ ಸ್ವಯಂ ಪ್ರೇರಣೆಯಿಂದ ವರದಿಯಾದ ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ ಆದೇಶವನ್ನು ಸ್ವೀಕರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಎಲ್ಲಾ ಅಂತರಗಳನ್ನು ತೃಪ್ತಿಕರವಾಗಿ ಪರಿಹರಿಸಲಾಗಿದೆ ಮತ್ತು ಪ್ರಾಧಿಕಾರದೊಂದಿಗೆ ಹಂಚಿಕೊಳ್ಳಲಾಗಿದೆ. ಕಾರ್ಯಾಚರಣೆಯ ಸಮಗ್ರತೆ ಮತ್ತು ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬದ್ದತೆಯಲ್ಲಿ ಏರ್ ಇಂಡಿಯಾ ಅಚಲವಾಗಿದೆ ಎಂದು ತಿಳಿಸಿದೆ.
ಎಂಟು ಮಾರ್ಗಗಳಲ್ಲಿ ಯೋಗ್ಯತಾ ಪರವಾನಗಿ ಇಲ್ಲದೆ (ARC) A320 ವಿಮಾನದ ಹಾರಾಟದ ಕುರಿತು ನವೆಂಬರ್ 26, 2025 ರಂದು ಏರ್ಲೈನ್ DGCA ಗೆ ಮಾಹಿತಿ ನೀಡಿದೆ.
ವಿಮಾನಕ್ಕೆ ಸಂಬಂಧಿಸಿದ ನಿರ್ವಹಣಾ ದಾಖಲೆಗಳು, ಭೌತಿಕ ಸ್ಥಿತಿ ಮತ್ತು ಎಲ್ಲಾ ಯೋಗ್ಯತೆಯ ಮಾನದಂಡಗಳ ಸಮಗ್ರ ಪರಿಶೀಲನೆಯ ನಂತರ ಪರವಾನಗಿ ನೀಡಲಾಗುತ್ತದೆ. ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಈ ಹಿಂದೆ ಅನೇಕ ಬಾರಿ ನಿಯಮ ಉಲ್ಲಂಘನೆಗಳಿಗಾಗಿ ಡಿಜಿಸಿಎಯಿಂದ ಕ್ರಮಗಳನ್ನು ಎದುರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



