ದೂರದರ್ಶನದ ಖ್ಯಾತ 'ನ್ಯೂಸ್ ಆಂಕರ್' ಸರಳ ಮಹೇಶ್ವರಿ ನಿಧನ!
1980ರ ಕಾಲಘಟ್ಟದ ಜನರು ಇಂದಿಗೂ ಸರಳ ಮಹೇಶ್ವರಿ ಅವರನ್ನು ಮರೆತಿಲ್ಲ. ತಮ್ಮ ಸರಳ ವ್ಯಕ್ತಿತ್ವ ಮತ್ತು ಸ್ಪಷ್ಟ ವಾರ್ತಾ ವಾಚನದಿಂದ ಗುರುತಿಸಿಕೊಂಡಿದ್ದ ಅವರು, ಅಂದಿನ ಕಾಲದಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದರು.

ನವದೆಹಲಿ: ದೂರದರ್ಶನದ ಖ್ಯಾತ ನ್ಯೂಸ್ ರೀಡರ್ ಸರಳ ಮಹೇಶ್ವರಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
1980ರ ಕಾಲಘಟ್ಟದ ಜನರು ಇಂದಿಗೂ ಸರಳ ಮಹೇಶ್ವರಿ ಅವರನ್ನು ಮರೆತಿಲ್ಲ. ತಮ್ಮ ಸರಳ ವ್ಯಕ್ತಿತ್ವ ಮತ್ತು ಸ್ಪಷ್ಟ ವಾರ್ತಾ ವಾಚನದಿಂದ ಗುರುತಿಸಿಕೊಂಡಿದ್ದ ಅವರು, ಅಂದಿನ ಕಾಲದಲ್ಲಿ ಅನೇಕರಿಗೆ ಸ್ಫೂರ್ತಿಯಾಗಿದ್ದರು. ಈ ಕುರಿತು ಡಿಡಿ ನ್ಯೂಸ್ ಸಂತಾಪ ಸೂಚಿಸಿ, ಎಕ್ಸ್ ಖಾತೆಯಲ್ಲಿ ಸರಳ ಮಹೇಶ್ವರಿ ಅವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ದೂರದರ್ಶನ ಕುಟುಂಬದ ಪರವಾಗಿ ಸರಳ ಮಹೇಶ್ವರಿ ನಿಧನಕ್ಕೆ ನಮ್ಮ ಹೃದಯ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅವರು ದೂರದರ್ಶನದ ಗೌರವಯುತ ವಾರ್ತಾವಾಚಕರಾಗಿದ್ದರು. ತಮ್ಮ ಸೌಮ್ಯವಾದ ಧ್ವನಿ, ನಿಖರವಾದ ಉಚ್ಚಾರಣೆಯಿಂದ ಭಾರತೀಯ ಸುದ್ದಿ ಪ್ರಪಂಚದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಅವರ ಸರಳತೆ, ಸಂಯಮ ಮತ್ತು ವ್ಯಕ್ತಿತ್ವ ವೀಕ್ಷಕರಲ್ಲಿ ಆಳವಾದ ನಂಬಿಕೆಯನ್ನು ಹುಟ್ಟಿಸಿತ್ತು ಎಂದು ಟ್ವೀಟ್ ನಲ್ಲಿ ಸ್ಮರಿಸಲಾಗಿದೆ.
ಹಿರಿಯ ಸುದ್ದಿ ನಿರೂಪಕ ಮತ್ತು ಮಹೇಶ್ವರಿ ಅವರ ಮಾಜಿ ಸಹೋದ್ಯೋಗಿ ಶಮ್ಮಿ ನಾರಂಗ್, ಸರಳ ಮಹೇಶ್ವರಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅವರು ಸೌಜನ್ಯ ಮತ್ತು ಸಾಕಾರ ರೂಪವಾಗಿದ್ದರು. ಕೇವಲ ನೋಟದಲ್ಲಿ ಮಾತ್ರವಲ್ಲ, ಹೃದಯದಲ್ಲಿಯೂ ಸುಂದರವಾಗಿದ್ದರು. ಭಾಷೆಯ ಮೇಲೆ ಅಸಾಧಾರಣವಾದ ಹಿಡಿತವನ್ನು ಹೊಂದಿದ್ದರು. ಜ್ಞಾನದ ಭಂಡಾರವಾಗಿದ್ದರು ಎಂದು ನಾರಂಗ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಟಿವಿಯೇ ಒಂದು ಕೌತುಕ ಎಂಬಂತೆ ನೋಡುತ್ತಿದ್ದ ಯುಗದಲ್ಲಿ ಸರಳಾ ಮಹೇಶ್ವರಿ ಹೆಸರಿಗೆ ತಕ್ಕಂತೆ ಸರಳವಾಗಿ, ಸೀರೆಯುಟ್ಟು, ಸ್ಪಷ್ಟವಾಗಿ ಸುದ್ದಿ ಓದುತ್ತಿದ್ದು ಎಲ್ಲರನ್ನೂ ಮನ ಮುಟ್ಟುವಂತಿತ್ತು. ಅದರಲ್ಲಿಯೂ ಜರ್ನಲಿಸಂ ಅಂದ್ರೆ ಹೆಣ್ಣು ಮಕ್ಕಳು ದೂರವೇ ಉಳಿಯುತ್ತಿದ್ದ ಕಾಲದಲ್ಲಿ, ಎಲ್ಲರಿಗೂ ನ್ಯೂಸ್ ಆ್ಯಂಕರ್ ಆಗಬೇಕೆಂಬ ಆಸೆ ಹುಟ್ಟಿಸಿದ ಕೆಲವೇ ಕೆಲವು ನ್ಯೂಸ್ ರೀಡರ್ಸ್‌ನಲ್ಲಿ ಇವರು ಪ್ರಮುಖರು.
80ರ ದಶಕದಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ಟಿವಿಯಿಂದ ಕಲರ್ ಟಿವಿಗೆ ಜನರು ಶಿಫ್ಟ್ ಆಗುತ್ತಿದ್ದ ವೇಳೆಯಲ್ಲಿ ಭಾರತದಲ್ಲಿ ನಡೆದ ಏಷ್ಯನ್ ಗೇಮ್ಸ್ ಅನ್ನು ರಸವತ್ತಾಗಿ ಆ್ಯಂಕರ್ ಮಾಡುತ್ತಿದ್ದರು. ದೆಹಲಿಯ ನಿಗಮ್ ಬೋದ್ ಘಾಟ್ ನಲ್ಲಿ ಇಂದು ಸಂಜೆ 4 ಗಂಟೆಯಲ್ಲಿ ಸರಳ ಮಹೇಶ್ವರಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


