Kerala: ಸ್ಕೂಟರ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ; 4 ಮಂದಿಗೆ ಗಂಭೀರ ಗಾಯ, Video
ಕಲಡಿ ಕಡೆಯಿಂದ ಎಲಂಜಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪ್ರವಾಸಿ ಬಸ್ ಕೊತ್ತಟ್ಟೂಕುಳಂ ಬಳಿ ಚಲಿಸುತ್ತಿದ್ದಾಗ ಅದರ ಮುಂದಿದ್ದ ಸ್ಕೂಟರ್ ಚಾಲಕ ದಿಢೀರ್ ಬಲಕ್ಕೆ ತಿರುಗಿದೆ.

ಎರ್ನಾಕುಲಂ: ಕೇರಳದಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಸ್ಕೂಟರ್ ಚಾಲಕ ಅಜಾರೂಕತೆಗೆ ಬಸ್ ವೊಂದು ಪಲ್ಟಿಯಾದ ಘಟನೆ ನಡೆದಿದೆ.
ಕೇರಳದ ಎರ್ನಾಕುಲಂನ ಸಮೀಪ ಕೊತ್ತಟ್ಟೂಕುಳಂನ ಕಕ್ಕೂರು ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಕಲಡಿ ಕಡೆಯಿಂದ ಎಲಂಜಿಗೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪ್ರವಾಸಿ ಬಸ್ ಕೊತ್ತಟ್ಟೂಕುಳಂ ಬಳಿ ಚಲಿಸುತ್ತಿದ್ದಾಗ ಅದರ ಮುಂದಿದ್ದ ಸ್ಕೂಟರ್ ಚಾಲಕ ದಿಢೀರ್ ಬಲಕ್ಕೆ ತಿರುಗಿದ್ದು, ಇದರಿಂದ ಬಸ್ ಚಾಲಕ ಸಂಭಾವ್ಯ ಅಪಘಾತ ತಪ್ಪಿಸಲು ಬಸ್ ಅನ್ನು ತಿರುಗಿಸಿದ್ದಾನೆ.
ಬಸ್ ತಿರುಗುತ್ತಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಬಸ್ ಪೆಟ್ರೋಲ್ ಬಂಕ್ ತಡೆಗೋಡೆಗೆ ಗುದ್ದಿ ಪಲ್ಟಿಯಾಗಿದೆ. ಈ ಅಪಘಾತದ ವೇಳೆ ಬಸ್ ನಲ್ಲಿ ಸುಮಾರು 35 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.
ಅಚ್ಚರಿ ಎಂದರೆ ಆ ಪೆಟ್ರೋಲ್ ಬಂಕ್ ಸಮೀಪವೇ ವೃದ್ದನೊಬ್ಬ ತನ್ನ ಬೈಕ್ ನಲ್ಲಿ ರಸ್ತೆ ಕ್ರಾಸ್ ಮಾಡಲು ನಿಂತಿದ್ದು ಬಸ್ ಪಲ್ಟಿಯಾಗಿ ಆತನ ಪಕ್ಕದಲ್ಲೇ ಬಿದ್ದಿದೆ. ಅದೃಷ್ಟವಶಾತ್ ಆ ವೃದ್ದ ವ್ಯಕ್ತಿಗೆ ಯಾವುದೇ ಅಪಾಯಗಳಾಗಿಲ್ಲ.
ಆದರೆ ಬಸ್ ನಲ್ಲಿದ್ದವರ ಪೈಕಿ 4 ಮಂದಿಗೆ ಗಂಭೀರ ಗಾಯಗಳಾಗಿದ್ದು, 30 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಡಿಯೋ ವೈರಲ್
ಬಸ್ ಪಲ್ಟಿಯಾಗುವ ದೃಶ್ಯ ಸೇರಿದಂತೆ ಸಂಪೂರ್ಣ ಘಟನೆ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಬಂಕ್‌ನತ್ತ ಬಸ್ ನುಗ್ಗಿದರೂ, ಬಂಕ್‌ಗೆ ಡಿಕ್ಕಿಯಾಗದೆ ನಿಂತಿದ್ದರಿಂದ ಮತ್ತೊಂದು ದೊಡ್ಡ ದುರಂತ ತಪ್ಪಿದೆ. ಅಪಘಾತದ ಬಳಿಕ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಬಸ್‌ನಲ್ಲಿದ್ದವರನ್ನು ಹೊರಗೆ ಕರೆತಂದಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


