'ವಿರೋಧವಿದ್ದರೂ ಮೋಹನ್ ಭಾಗವತ್ ಅಮೆರಿಕಕ್ಕೆ ಯಾಕೆ ಹೋದ್ರು?': ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಪ್ರಶ್ನೆ!
ವರಿಗೆ 36 ದೇಶಗಳಲ್ಲಿ ಬ್ಯಾಂಕ್ ಖಾತೆಗಳಿವೆ. ನಿಧಿ ಎಲ್ಲಿಂದ ಬರುತ್ತದೆ ಮತ್ತು ಹಣವನ್ನು ಎಲ್ಲಿ ಖರ್ಚು ಮಾಡಲಾಗುತ್ತದೆ ಎಂಬುದರ ಕುರಿತು ಯಾವುದೇ ಲೆಕ್ಕಪರಿಶೋಧನೆ ಆಗಿಲ್ಲ ಎಂದು ನಾನಾ ಪಟೋಲೆ ಪ್ರಶ್ನಿಸಿದ್ದಾರೆ.

ಮುಂಬೈ: ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) Rally ಯ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಾನಾ ಪಟೋಲೆ ಬುಧವಾರ ಪ್ರಮುಖ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ.
ಈ ಸಂಘಟನೆಯು ಎನ್‌ಜಿಒ (NGO) ಆಗಿ ನೋಂದಾಯಿಸಲ್ಪಟ್ಟಿಲ್ಲ ಮತ್ತು ಅದರ ನಿಧಿಗಳ ಲೆಕ್ಕಪರಿಶೋಧನೆಯೂ ( audits)ನಡೆಯುತ್ತಿಲ್ಲ ಎಂದಿದ್ದಾರೆ. ಸುದ್ದಿಸಂಸ್ಥೆ ಎಎನ್‌ಐ (ANI) ಜೊತೆ ಮಾತನಾಡಿದ ನಾನಾ ಪಟೋಲೆ, ಅಮೆರಿಕದಲ್ಲಿನ ಕೆಲವು ವರ್ಗಗಳು ಸಂಘವನ್ನು ವಿರೋಧಿಸುತ್ತಿದ್ದರೂ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಲ್ಲಿಗೆ ಯಾಕೆ ಹೋದರು ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ನೋಂದಾಯಿಸಲ್ಪಡದ ಈ ಸಂಘಟನೆಯು ಎನ್‌ಜಿಒ ಆಗಿ ಕಾರ್ಯನಿರ್ವಹಿಸುತ್ತಿದೆ. ಅವರಿಗೆ 36 ದೇಶಗಳಲ್ಲಿ ಬ್ಯಾಂಕ್ ಖಾತೆಗಳಿವೆ. ನಿಧಿ ಎಲ್ಲಿಂದ ಬರುತ್ತದೆ ಮತ್ತು ಹಣವನ್ನು ಎಲ್ಲಿ ಖರ್ಚು ಮಾಡಲಾಗುತ್ತದೆ ಎಂಬುದರ ಕುರಿತು ಯಾವುದೇ ಲೆಕ್ಕಪರಿಶೋಧನೆ ಇಲ್ಲ. ಅಮೆರಿಕವು ಇದನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ವಿರೋಧವಿದ್ದರೂ ಮೋಹನ್ ಭಾಗವತ್ ಅಲ್ಲಿಗೆ ಏಕೆ ಹೋದರು ಎಂಬುದು ಅಧ್ಯಯನ ಮಾಡಬೇಕಾದ ವಿಷಯವಾಗಿದೆ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರನ್ಯೂಯಾರ್ಕ್‌ಗೆ ಆಗಮಿಸಿದರು. ಇದು ಅಮೆರಿಕ, ಕೆನಡಾ ಮತ್ತು ಯುಕೆ (UK) ಒಳಗೊಂಡ ಅವರ ಮೂರು ದೇಶಗಳ ಪ್ರವಾಸದ ಮೊದಲ ಹಂತವಾಗಿದೆ. ಆಗಮನದ ವೇಳೆ ಸಾಂಪ್ರದಾಯಿಕ ತಿಲಕದೊಂದಿಗೆ ಸ್ವಾಗತಿಸಲ್ಪಟ್ಟ ಭಾಗವತ್, ಆಗಸ್ಟ್ 29 ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆಯಲಿರುವ "ಯೂನಿವರ್ಸಲ್ ಒನೆಸ್‌ನೆಸ್ ಸೆಲೆಬ್ರೇಷನ್ಸ್" (Universal Oneness Celebrations) ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸಂಘದ ಶತಮಾನೋತ್ಸವ ವರ್ಷ ಮತ್ತು ರಕ್ಷಾಬಂಧನದ ಸಮಯಕ್ಕೆ ಹೊಂದಿಕೆಯಾಗುವಂತೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದಕ್ಕೂ ಮುನ್ನ, ನ್ಯೂಯಾರ್ಕ್‌ನ ಮೇಯರ್ ಝೋಹ್ರಾನ್ ಮಮದಾನಿ ನಗರದಲ್ಲಿ ನಡೆಯಲಿರುವ ಆರ್‌ಎಸ್‌ಎಸ್‌ನ ಕಾರ್ಯಕ್ರಮವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಖಾಸಗಿಯಾಗಿ ಆಯೋಜಿಸಲಾದ ಸಭೆಯನ್ನು ರದ್ದುಗೊಳಿಸುವ ಅಧಿಕಾರ ನಗರಸಭೆಯ ಆಡಳಿತಕ್ಕೆ ಇದೆಯೇ ಎಂಬ ಬಗ್ಗೆ ತಮಗೆ ಖಚಿತವಿಲ್ಲ ಎಂದು ಅವರು ಒಪ್ಪಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



