ತಿರುಮಲದಲ್ಲಿ ಹೂಕೋಸು ಬಳಸಿದ ಆಹಾರ ನಿಷೇಧ: TTD ಮಹತ್ವದ ಆದೇಶ
ತಿರುಮಲದಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಫಾಸ್ಟ್ ಫುಡ್ ಸೆಂಟರ್‌ಗಳಲ್ಲಿ ಹೂಕೋಸಿನಿಂದ (ಕಾಲಿಫ್ಲವರ್) ತಯಾರಿಸುವ ಗೋಬಿ ಖಾದ್ಯಗಳ ಮಾರಾಟ ನಿಷೇಧಿಸಲಾಗಿದೆ.

ತಿರುಪತಿ: ಹಿಂದೂಗಳ ಪವಿತ್ರ ಧಾರ್ಮಿಕ ಯಾತ್ರಾ ತಾಣ ತಿರುಮಲದಲ್ಲಿ ಹೂಕೋಸು ಬಳಸಿದ ಆಹಾರಗಳನ್ನು ನಿಷೇಧಿಸಿ ತಿರುಮಲ ತಿರುಪತಿ ದೇವಸ್ಥಾನಂ (TTD) ಆಡಳಿತ ಮಂಡಳಿ ಹೊಸ ಆದೇಶ ಹೊರಡಿಸಿದೆ.
ಕಲಿಯುಗ ದೈವ ಎಂದೇ ಖ್ಯಾತಿಯಾಗಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕಾಗಿ ತಿರುಮಲ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಟಿಟಿಡಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ತಿರುಮಲದಲ್ಲಿರುವ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಫಾಸ್ಟ್ ಫುಡ್ ಸೆಂಟರ್‌ಗಳಲ್ಲಿ ಹೂಕೋಸಿನಿಂದ (ಕಾಲಿಫ್ಲವರ್) ತಯಾರಿಸುವ ಗೋಬಿ ಖಾದ್ಯಗಳ ಮಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ಇತ್ತೀಚೆಗೆ ಹೂಕೋಸು ಅಥವಾ ಗೋಬಿಯಲ್ಲಿ ಹುಳುಗಳು ಕಂಡುಬಂದ ಹಿನ್ನೆಲೆಯಲ್ಲಿ ಭಕ್ತರ ಆರೋಗ್ಯಕ್ಕೆ ಯಾವುದೇ ಅಪಾಯ ಎದುರಾಗಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಟಿಟಿಡಿ ಈ ತೀರ್ಮಾನ ತೆಗೆದುಕೊಂಡಿದೆ.
ಈ ಕುರಿತು ಟಿಟಿಡಿ ಆರೋಗ್ಯ ಉಪ ಕಾರ್ಯನಿರ್ವಹಣಾಧಿಕಾರಿ (ಇಒ) ಸೋಮನ್ನಾರಾಯಣ ಅವರು ಶುಕ್ರವಾರ ತಿರುಮಲದ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಫಾಸ್ಟ್ ಫುಡ್ ಕೇಂದ್ರಗಳ ಮಾಲೀಕರು ಹಾಗೂ ನಿರ್ವಾಹಕರೊಂದಿಗೆ ವಿಶೇಷ ಸಭೆ ನಡೆಸಿದರು.
ಸಭೆಯಲ್ಲಿ ಭಕ್ತರಿಗೆ ಶುದ್ಧ ಮತ್ತು ನೈರ್ಮಲ್ಯಯುತ ಆಹಾರವನ್ನು ಮಾತ್ರ ಪೂರೈಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಹೂಕೋಸಿನಲ್ಲಿ ಕ್ರಿಮಿ-ಕೀಟಗಳು ಕಂಡುಬರುತ್ತಿರುವುದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಗೋಬಿ ಖಾದ್ಯಗಳ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಆದೇಶಿಸಲಾಗಿದೆ.
ಇದು ಶಾಶ್ವತ ನಿಷೇಧವಲ್ಲ, ಬದಲಿಗೆ ಭಕ್ತರ ಆರೋಗ್ಯ ರಕ್ಷಣೆಗಾಗಿ ಕೈಗೊಂಡಿರುವ ತಾತ್ಕಾಲಿಕ ಕ್ರಮವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




