'ರಾಜಕೀಯ ಪ್ರವೇಶವೇ ತಪ್ಪು ನಿರ್ಧಾರ; ನಾನು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಲಿಲ್ಲ': ಡೆತ್ ನೋಟ್ ನಲ್ಲಿ ಆಸೀಶ್ ಬ್ಯಾನರ್ಜಿ ಪಶ್ಚಾತ್ತಾಪ!
ನನ್ನ ಸಾವಿಗೆ ಯಾರೂ ಕಾರಣರಲ್ಲ" ಎಂದು ಬರೆಯಲಾಗಿದೆ. ರಾಂಪುರ್ಹತ್ ಕ್ಷೇತ್ರದಿಂದ ಐದು ಬಾರಿ ತೃಣಮೂಲ ಶಾಸಕರಾಗಿರುವ ಅವರು ರಾಜಕೀಯಕ್ಕೆ ಸೇರಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟಿದ್ದಾರೆ.

ಕೊಲ್ಕೋತಾ: ನಾನು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ. ರಾಜಕೀಯಕ್ಕೆ ಸೇರಿದ್ದೆ ನನ್ನ ತಪ್ಪು" ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಉಪಸಭಾಪತಿ ಆಶಿಸ್ ಬ್ಯಾನರ್ಜಿ ಅವರ ಆತ್ಮಹತ್ಯೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಭಾನುವಾರ ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಟಿಎಂಸಿ ಮಾಜಿ ಶಾಸಕ ಆಸೀಶ್ ಬ್ಯಾನರ್ಜಿ ಅವರ ಡೆತ್ ನೋಟ್ ಪತ್ತೆಯಾಗಿದ್ದು, ಹಲವು ವಿಷಯದಳು ಬಹಿರಂಗಗೊಂಡಿವೆ.
ರಾಂಪುರ್ಹತ್ ಪುರಸಭೆಯ ವಾರ್ಡ್ ಸಂಖ್ಯೆ V ರಲ್ಲಿರುವ ಹಟ್ಟಲಪಾರದಲ್ಲಿರುವ ಅವರ ನಿವಾಸದ ಬಳಿಯಿರುವ ಪಕ್ಷದ ಕಚೇರಿಯಿಂದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಶಾಸಕರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅವರ ಸಾವಿಗೆ ಕಾರಣವಾದ ನಿಖರವಾದ ಸಂದರ್ಭಗಳು ಇನ್ನೂ ತಿಳಿದುಬಂದಿಲ್ಲ.
ಬಂಗಾಳಿ ಭಾಷೆಯಲ್ಲಿ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ "ನನ್ನ ಸಾವಿಗೆ ಯಾರೂ ಕಾರಣರಲ್ಲ" ಎಂದು ಬರೆಯಲಾಗಿದೆ. ರಾಂಪುರ್ಹತ್ ಕ್ಷೇತ್ರದಿಂದ ಐದು ಬಾರಿ ತೃಣಮೂಲ ಶಾಸಕರಾಗಿರುವ ಅವರು ರಾಜಕೀಯಕ್ಕೆ ಸೇರಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟಿದ್ದಾರೆ. ಜೊತೆಗೆ ತಮ್ಮ ಕುಟುಂಬದ ಯಾವುದೇ ಸದಸ್ಯರು ರಾಜಕೀಯದಲ್ಲಿ ಭಾಗಿಯಾಗದಂತೆ ಸಲಹೆ ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ಆಡಳಿತದ ಸಮಯದಲ್ಲಿ ಮಾಜಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತಮ್ಮ ಸಂಪುಟದಲ್ಲಿ ರಾಜ್ಯ ಶಾಲಾ ಶಿಕ್ಷಣ ಸಚಿವರನ್ನಾಗಿ ಮಾಡಿದ್ದರು. ಅವರು ಆತ್ಮಹತ್ಯೆ ಪತ್ರದಲ್ಲಿ ತಾವು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಪದೇ ಪದೇ ಹೇಳಿಕೊಂಡಿದ್ದಾರೆ. ಆತ್ಮಹತ್ಯೆ ಪತ್ರದ ಪ್ರಕಾರ, ತಮ್ಮ ಪಕ್ಷದ ತಪ್ಪುಗಳ ವಿರುದ್ಧ ಅವರು ಎಂದಿಗೂ ಪ್ರತಿಭಟನೆ ಮಾಡಲು ಸಾಧ್ಯವಾಗಲಿಲ್ಲ.
ನನ್ನ ವಿದ್ಯಾರ್ಥಿ ಜೀವನದಿಂದಲೇ ನಾನು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ನನ್ನ ಜೀವನದಲ್ಲಿ ನಾನು ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರಲಿಲ್ಲ. ನಾನು ಬರ್ಧಮಾನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿದ್ದೆ ಆದರೆ ಎಂದಿಗೂ ಭ್ರಷ್ಟಾಚಾರದಲ್ಲಿ ಭಾಗಿಯಾಗಿರಲಿಲ್ಲ.
ನಮ್ಮ ರಾಜಕೀಯ ಸಿದ್ಧಾಂತದಲ್ಲಿ ನಮಗೆ ಭಿನ್ನಾಭಿಪ್ರಾಯಗಳಿದ್ದವು ಆದರೆ ಯಾವುದೇ ದ್ವೇಷವಿರಲಿಲ್ಲ. ಪಕ್ಷದ ದುಷ್ಕೃತ್ಯಗಳ ವಿರುದ್ಧ ನಾನು ಎಂದಿಗೂ ಪ್ರತಿಭಟಿಸಲು ಸಾಧ್ಯವಾಗಲಿಲ್ಲ. "ನಾನು ಮಾಡಿದ ಯಾವುದೇ ಕೆಲಸಕ್ಕೆ ನಾನು ಒಂದು ಪೈಸೆಯನ್ನೂ ತೆಗೆದುಕೊಂಡಿಲ್ಲ" ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿದ್ದಾರೆ..
ಜಿಲ್ಲೆಯ ತಾರಾಪೀಠ ರಾಂಪುರ್ಹತ್ ಅಭಿವೃದ್ಧಿ ಪ್ರಾಧಿಕಾರದಲ್ಲಿ (TRDA) ತನಗೆ ಯಾವುದೇ ಅಧಿಕಾರವಿಲ್ಲ ಎಂದು ಆಶಿಶ್ ಟಿಪ್ಪಣಿಯಲ್ಲಿ ಹೇಳಿಕೊಂಡಿದ್ದಾರೆ. ಟಿಪ್ಪಣಿಯಲ್ಲಿ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸುತ್ತಾ, "TRDA ಯಲ್ಲಿ ಸಾಮಾನ್ಯ ಸಭೆಯ ಹೊರತಾಗಿ, ನನಗೆ ಅಲ್ಲಿ ಬೇರೆ ಯಾವುದೇ ಜವಾಬ್ದಾರಿಗಳಿಲ್ಲ. ನಾನು ಎಂದಿಗೂ ಟೆಂಡರ್ ಸಮಿತಿಯಲ್ಲಿ ಇರಲಿಲ್ಲ ಮತ್ತು ಚೆಕ್‌ಗಳನ್ನು ನೀಡುವಲ್ಲಿ ನನಗೆ ಯಾವುದೇ ಅಧಿಕಾರವಿರಲಿಲ್ಲ.
ಕಟ್ಟಡ ಯೋಜನೆಗಳ ಅನುಮೋದನೆ ಅಥವಾ ನಿರಾಕ್ಷೇಪಣಾ ಪ್ರಮಾಣಪತ್ರಗಳು (NoC) ನಂತಹ ವಿಷಯಗಳಲ್ಲಿ ನಾನು ಎಂದಿಗೂ ಭಾಗಿಯಾಗಿರಲಿಲ್ಲ. ಈ ವಿಷಯಗಳ ಬಗ್ಗೆ ಯಾರೂ ನನ್ನೊಂದಿಗೆ ಏನನ್ನೂ ಚರ್ಚಿಸಲಿಲ್ಲ. ನನ್ನ ವಿರುದ್ಧ ಮಾಡಲಾದ ಪಿತೂರುಯನ್ನು ನಾನು ಖಂಡಿಸಿದೆ. ಇಂದು, ರಾಜಕೀಯಕ್ಕೆ ಸೇರಿದ್ದು ದೊಡ್ಡ ತಪ್ಪು ಎಂದು ನನಗೆ ಅನಿಸಿದೆ. ನಮ್ಮ ಕುಟುಂಬದ ಹುಡುಗರು ರಾಜಕೀಯಕ್ಕೆ ಸೇರಬೇಡಿ ಎಂದು ನಾನು ಸಲಹೆ ನೀಡುತ್ತೇನೆ. ನೀವು ನಿಮ್ಮ ಸ್ವಂತ ಕೆಲಸಗಳನ್ನು ಮಾಡಿ ಎಂದು ಉಲ್ಲೇಖಿಸಿದ್ದಾರೆ.
ನನ್ನ ಜೀವನದುದ್ದಕ್ಕೂ ನಾನು ಶಿಕ್ಷಕ ವೃತ್ತಿಯನ್ನು ಮಾಡಿದ್ದೇನೆ. ನಾನು ಯಾವುದೇ ತರಗತಿಗಳನ್ನು ಬಿಟ್ಟಿಲ್ಲ, ವಿಶೇಷ ತರಗತಿಗಳನ್ನು ತೆಗೆದುಕೊಂಡಿದ್ದೇನೆ. ಯಾವುದೇ ಶುಲ್ಕವನ್ನು ತೆಗೆದುಕೊಳ್ಳದೆ ನಾನು ಅನೇಕ ವಿದ್ಯಾರ್ಥಿಗಳಿಗೆ ಕಲಿಸಿದ್ದೇನೆ. ಅವರಿಂದ ನನಗೆ ಬಹಳಷ್ಟು ಪ್ರೀತಿ ಸಿಕ್ಕಿದೆ" ಎಂದು ಬರೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




