ಬ್ಯಾಂಕ್ ಖಾತೆ ಕೊಟ್ಟು ಕಮಿಷನ್ ಪಡೆಯುತ್ತಿದ್ದೀರಾ? ಎಚ್ಚರ, ಪೊಲೀಸ್ ಖೆಡ್ಡಾಗೆ ಬಿದ್ದರು 837 ಮಂದಿ!
ಸೈಬರ್ ಕ್ರೈಮ್ ವಿರುದ್ದ ಸಮರ ಸಾರಿರುವ ತಮಿಳುನಾಡು ಸೈಬರ್ ಕ್ರೈಮ್ ವಿಭಾಗದ ಪೊಲೀಸರು, ₹545.27 ಕೋಟಿ ಮೌಲ್ಯದ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಕೇವಲ 48 ಗಂಟೆಗಳಲ್ಲಿ 837 ಜನರನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಚೆನ್ನೈ (ತಮಿಳುನಾಡು): ಸೈಬರ್ ಕ್ರೈಮ್ ವಿರುದ್ದ ಸಮರ ಸಾರಿರುವ ತಮಿಳುನಾಡು ಸೈಬರ್ ಕ್ರೈಮ್ ವಿಭಾಗದ ಪೊಲೀಸರು, ₹545.27 ಕೋಟಿ ಮೌಲ್ಯದ ಆನ್‌ಲೈನ್ ವಂಚನೆಗೆ ಸಂಬಂಧಿಸಿದಂತೆ ಕೇವಲ 48 ಗಂಟೆಗಳಲ್ಲಿ 837 ಜನರನ್ನು ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
837 ಜನರ ಬಂಧನ
ರಾಷ್ಟ್ರೀಯ ಸೈಬರ್ ಕ್ರೈಮ್ ವರದಿ ಪೋರ್ಟಲ್‌ನಲ್ಲಿ (NCRP) ದಾಖಲಾಗಿದ್ದ ಒಟ್ಟು 9,804 ದೂರುಗಳಿಗೆ ಸಂಬಂಧಿಸಿದಂತೆ, ತಮ್ಮ ಬ್ಯಾಂಕ್ ಖಾತೆಗಳನ್ನು ಬಾಡಿಗೆಗೆ ನೀಡುವ 'ಮ್ಯೂಲ್ ಅಕೌಂಟ್ ಹೋಲ್ಡರ್ಸ್' (Mule Account Holders) ಅರ್ಥಾತ್ ಮಧ್ಯವರ್ತಿಗಳನ್ನು ಗುರಿಯಾಗಿಸಿಕೊಂಡು, ತಮಿಳುನಾಡು ಸೈಬರ್ ಕ್ರೈಮ್ ವಿಭಾಗದ ಪೊಲೀಸರು, ವಿಶೇಷ ಸೈಬರ್ ಕಾರ್ಯಾಚರಣೆ ನಡೆಸಿ, ಈಗಾಗಲೇ ದಾಖಲಾಗಿದ್ದ 601 ಎಫ್‌ಐಆರ್‌ಗಳ (FIR) ಆಧಾರದ ಮೇಲೆ ಈ 837 ಜನರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಮುಂದುವರೆದು, ಈ 48 ಗಂಟೆಗಳ ತಪಾಸಣೆಯ ಸಮಯದಲ್ಲಿ ಪೊಲೀಸರು ಆರೋಪಿಗಳಿಂದ ಭಾರಿ ಪ್ರಮಾಣದ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಅದರಂತೆ, 204 ಮೊಬೈಲ್ ಫೋನ್‌ಗಳು ಮತ್ತು 185 ಸಿಮ್ ಕಾರ್ಡ್‌ಗಳು, 4 ಲ್ಯಾಪ್‌ಟಾಪ್‌ಗಳು ಮತ್ತು ಇತರ ಸ್ಟೋರೇಜ್ ಡಿವೈಸ್‌ಗಳು, 114 ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು 29 ಚೆಕ್ ಬುಕ್‌ಗಳು ಹಾಗೂ 73 ಎಟಿಎಂ/ಡೆಬಿಟ್ ಕಾರ್ಡ್‌ಗಳು ಮತ್ತು ₹1.02 ಲಕ್ಷ ನಗದು ಹಣವನ್ನ ವಶಕ್ಕೆ ಪಡೆದಿದ್ದಾರೆ.

ದೇವರ ವಿಗ್ರಹದ ರೀಲ್ಸ್, ವಿಡಿಯೋಗಳಿಗೆ ಬ್ರೇಕ್; ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ಮೊಬೈಲ್ ನಿಷೇಧ ಮಾಡಿದ ವಿಜಯ್ ಸರ್ಕಾರ
ಏತನ್ಮಧ್ಯೆ, ತಮಿಳುನಾಡಿನಲ್ಲಿ ಇಂತಹ ಮಧ್ಯವರ್ತಿಗಳಿಗೆ ವಂಚನೆ ಇಲಾಖೆಯ ಹಣದಲ್ಲಿ ಶೇಕಡಾ 10 ರಷ್ಟು ಕಮಿಷನ್ ನೀಡಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಏನಿದು ಮ್ಯೂಲ್ ಅಕೌಂಟ್?
ಮ್ಯೂಲ್ ಅಕೌಂಟ್ (Mule Account) ಎಂದರೆ ಸೈಬರ್ ಅಪರಾಧಿಗಳು ಆನ್‌ಲೈನ್ ವಂಚನೆ, ಲಾಟರಿ ಹಗರಣ ಅಥವಾ ಹ್ಯಾಕಿಂಗ್ ಮೂಲಕ ಗಳಿಸಿದ ಅಕ್ರಮ ಹಣವನ್ನು ಸರ್ಕಾರದ ಕಣ್ಣಿಗೆ ಬೀಳದಂತೆ ವರ್ಗಾಯಿಸಲು ಬಳಸುವ ಮೂರನೇ ವ್ಯಕ್ತಿಯ ಸಾಮಾನ್ಯ ಬ್ಯಾಂಕ್ ಖಾತೆಯಾಗಿದೆ. ಅಂದರೆ, ಸೈಬರ್ ಕಳ್ಳರು ವಂಚಿಸಿದ ಹಣವನ್ನು ನೇರವಾಗಿ ತಮ್ಮ ಸ್ವಂತ ಬ್ಯಾಂಕ್ ಖಾತೆಗೆ ಹಾಕಿಸಿಕೊಳ್ಳುವುದಿಲ್ಲ. ಹಾಗೆ ಮಾಡಿದರೆ ಪೊಲೀಸರು ಅವರನ್ನು ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಇದಕ್ಕಾಗಿಯೇ ಅವರು ಬೇರೆಯವರ ಬ್ಯಾಂಕ್ ಖಾತೆಗಳನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ಹೀಗೆ ಬಳಸಿಕೊಳ್ಳುವ ಅಕೌಂಟ್ ಗಳೇ ಮ್ಯೂಲ್ ಅಕೌಂಟ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



