UK ಮಕ್ಕಳ ಮೇಲಿನ ಅತ್ಯಾಚಾರ, ಕಳ್ಳಸಾಗಣೆ ಪ್ರಕರಣದ ಆರೋಪಿ ಈಗ ಪಿಒಕೆ ಸಂಸದ!
ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಕ್ಷದ ಪರವಾಗಿ ರುಖ್ಸರ್ ಅಹ್ಮದ್ ಪಿಒಕೆ ಶಾಸಕಾಂಗ ಸಭೆಯಲ್ಲಿ ಸಂಸದರಾಗಿ ಆಯ್ಕೆಯಾದರು.

1990 ರ ದಶಕದಲ್ಲಿ ಮ್ಯಾಂಚೆಸ್ಟರ್‌ನಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಮತ್ತು ಕಳ್ಳಸಾಗಣೆ ಆರೋಪದ ಮೇಲೆ ಎರಡು ವರ್ಷಗಳ ಹಿಂದೆ ಬಂಧಿಸಲ್ಪಟ್ಟಿದ್ದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾಜಿ ಸಚಿವರೊಬ್ಬರು ಕಳೆದ ವಾರ ಪಿಒಕೆಯಲ್ಲಿ ಸಂಸತ್ ಸದಸ್ಯರಾಗಿ ಮರು ಆಯ್ಕೆಯಾಗಿರುವುದನ್ನು ದಿ ಗಾರ್ಡಿಯನ್ ವರದಿ ಮಾಡಿದೆ.
ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಕ್ಷದ ಪರವಾಗಿ ರುಖ್ಸರ್ ಅಹ್ಮದ್ ಪಿಒಕೆ ಶಾಸಕಾಂಗ ಸಭೆಯಲ್ಲಿ ಸಂಸದರಾಗಿ ಆಯ್ಕೆಯಾದರು.
ಜುಲೈ 2024 ರಲ್ಲಿ ಬಂಧಿಸಲ್ಪಟ್ಟ 62 ವರ್ಷದ ರಾಜಕಾರಣಿ, 5 ವರ್ಷಗಳ ಕಾಲ ಅಧಿಕಾರದಿಂದ ಹೊರಗಿದ್ದರು, ಹೆಚ್ಚಿನ ತನಿಖೆ ಬಾಕಿ ಇರುವ ಕಾರಣ ಪೊಲೀಸ್ ಜಾಮೀನಿನ ಮೇಲೆ ತಾತ್ಕಾಲಿಕವಾಗಿ ಆತನನ್ನು ಬಿಡುಗಡೆ ಮಾಡಲಾಗಿದೆ.
ಜುಲೈನಲ್ಲಿ ಅಹ್ಮದ್ ಪೊಲೀಸರೆದುರು ಹಾಜರಾಗುವುದನ್ನು ತಪ್ಪಿಸಿಕೊಳ್ಳಲು ಅಸ್ವಸ್ಥತೆಯ ಕಾರಣ ನೀಡಿದ್ದರು. ಆದಾಗ್ಯೂ, ಪಿಒಕೆಯ ಮಿರ್ಪುರದಲ್ಲಿ ಹಲವಾರು ಚುನಾವಣಾ ಸಭೆಗಳಲ್ಲಿ ಪ್ರಚಾರ ನಡೆಸುತ್ತಿರುವುದು ಕಂಡುಬಂದಿದೆ. ಪ್ರಕಟಣೆಯ ಪ್ರಕಾರ, ಅವರು ಮುಂದಿನ 6 ವಾರಗಳಲ್ಲಿ ಪೊಲೀಸರಿಗೆ ಉತ್ತರಿಸುವ ನಿರೀಕ್ಷೆಯಿದೆ, ಇಲ್ಲದಿದ್ದರೆ ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಅವರ ಬಂಧನಕ್ಕೆ ವಾರಂಟ್ ಹೊರಡಿಸಬಹುದು ಅಥವಾ ಅವರನ್ನು ಹಸ್ತಾಂತರಿಸಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.
ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು, ಅಹ್ಮದ್ ವಿದೇಶ ಪ್ರಯಾಣ ಮಾಡುವುದನ್ನು ನಿರ್ಬಂಧಿಸಲು ಬಯಸಿದ್ದರೂ, ಜುಲೈ 2024 ರಲ್ಲಿ ನ್ಯಾಯಾಧೀಶರು ಕಠಿಣ ಕ್ರಮಗಳನ್ನು ರದ್ದುಗೊಳಿಸಿದರು.
ನಗರದ ರುಶೋಲ್ಮ್ ಪ್ರದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪದ ಮೇಲೆ ಅವರನ್ನು ಜುಲೈ 18, 2024 ರಂದು ಮ್ಯಾಂಚೆಸ್ಟರ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು, ಅಲ್ಲಿ ಅವರು ವರ್ಷಗಳ ಕಾಲ ವಾಸಿಸುತ್ತಿದ್ದರು.
ಇಬ್ಬರು ಮಹಿಳೆಯರು ತಾವು ಚಿಕ್ಕ ಹುಡುಗಿಯರಾಗಿದ್ದಾಗ ಅಹ್ಮದ್ ತಮ್ಮ ಮೇಲೆ ಅತ್ಯಾಚಾರ ಮತ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ನಂತರ ಜುಲೈ 2024 ರಲ್ಲಿ ಪತ್ತೆದಾರರು ಅವರನ್ನು ಪ್ರಶ್ನಿಸಿದರು. ಅವರನ್ನು ವಿಚಾರಣೆ ನಡೆಸುತ್ತಿದ್ದಾಗ ಪತ್ತೆದಾರರು ರಾಜಕೀಯದಲ್ಲಿ ಅವರ ಹಿನ್ನೆಲೆಯ ಬಗ್ಗೆ ತಿಳಿದುಕೊಂಡರು.
ವರದಿಯ ಪ್ರಕಾರ, ಅಹ್ಮದ್ ಅವರ ಸ್ನೇಹಿತರು ಅವರ ರಾಜಕೀಯ ಪಾತ್ರದಿಂದಾಗಿ ಅವರನ್ನು ಮ್ಯಾಂಚೆಸ್ಟರ್‌ನ ಪಾಕಿಸ್ತಾನಿ ಸಮುದಾಯದಲ್ಲಿ "ಊಹೆಗೂ ಮೀರಿದ ಪ್ರಭಾವಶಾಲಿ" ಎಂದು ಹೇಳಿದ್ದಾರೆ. ರುಶೋಲ್ಮ್‌ನಲ್ಲಿರುವ ಅವರ ಸಹಚರರಲ್ಲಿ ಒಬ್ಬರು ಅವರು "ಜನರ ಮನುಷ್ಯ" ಮತ್ತು "ಕಡಿಮೆ ಭ್ರಷ್ಟ ಜನರಲ್ಲಿ ಒಬ್ಬರು" ಎಂದು ಹೇಳಿದ್ದಾರೆ ಮತ್ತು ಅವರು ಇತ್ತೀಚೆಗೆ ಆ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದರು.
ಅಹ್ಮದ್ ಅವರ ಸಹಚರರು ಅವರು ನಿಯಮಿತವಾಗಿ ರುಶೋಲ್ಮ್‌ಗೆ ಭೇಟಿ ನೀಡುತ್ತಿದ್ದರು ಮತ್ತು ಮೇ ತಿಂಗಳಿನಲ್ಲಿಯೂ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದರು ಎಂದು ಹೇಳಿದ್ದಾರೆ
ಯುಕೆಯಲ್ಲಿ ಗ್ರೂಮಿಂಗ್ ಗ್ಯಾಂಗ್‌ಗಳ ಇತಿಹಾಸ
"ಗ್ರೂಮಿಂಗ್ ಗ್ಯಾಂಗ್‌ಗಳು" ಹಗರಣ ಉತ್ತರ ಇಂಗ್ಲಿಷ್ ಪಟ್ಟಣಗಳಲ್ಲಿ ಪ್ರಧಾನವಾಗಿ ಪಾಕಿಸ್ತಾನಿ ಪರಂಪರೆಯ ಪುರುಷರ ಸಂಘಟಿತ ಜಾಲಗಳನ್ನು ಉಲ್ಲೇಖಿಸುತ್ತದೆ. ಅವರು ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ಅತ್ಯಾಚಾರ ಮಾಡುವ ಮತ್ತು ಕಳ್ಳಸಾಗಣೆ ಮಾಡುವವರಾಗಿದ್ದರು. ಸಾಂಸ್ಥಿಕ ವೈಫಲ್ಯಗಳು ಮತ್ತು ಸಾಮಾಜಿಕ ಅಶಾಂತಿಯ ಭಯ ದಶಕಗಳ ಕಾಲ ಈ ಗ್ಯಾಂಗ್ ವಿರುದ್ಧ ಕ್ರಮವನ್ನು ವಿಳಂಬಗೊಳಿಸಿದೆ.
ಪ್ರೊಫೆಸರ್ ಅಲೆಕ್ಸಿಸ್ ಜೇ ಅವರ 2014 ರ ವರದಿಯ ಪ್ರಕಾರ, ರೋಥರ್‌ಹ್ಯಾಮ್‌ನಲ್ಲಿ ಒಂದರಲ್ಲೇ 1997 ಮತ್ತು 2013 ರ ನಡುವೆ 16 ವರ್ಷಗಳಲ್ಲಿ 1,400 ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಅನೇಕ ಬಲಿಪಶುಗಳನ್ನು ಅಪಹರಿಸಲಾಗಿದೆ, ಅತ್ಯಾಚಾರ ಮಾಡಲಾಗಿದೆ, ಕಳ್ಳಸಾಗಣೆ ಮಾಡಲಾಗಿದೆ ಮತ್ತು ಊಹಿಸಲಾಗದ ಹಿಂಸಾಚಾರಕ್ಕೆ ಗುರಿಪಡಿಸಲಾಗಿದೆ. ಜನಾಂಗೀಯ ನಿಂದನೆ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ ಎಂಬ ಭಯದಿಂದಾಗಿ ಅಧಿಕಾರಿಗಳು ಯಾವುದೇ ಕ್ರಮ ಕೈಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



