ತಮಿಳುನಾಡು: ಚುನಾವಣೆ ಮುಗಿಯುತ್ತಿದ್ದಂತೆಯೇ, ವಿಶ್ರಾಂತಿಗಾಗಿ ಕೂಡೈಕೆನಾಲ್ ಗೆ ತೆರಳಿದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್!
ಡಿಎಂಕೆ ಅಧ್ಯಕ್ಷರಾಗಿರುವ ಸ್ಟಾಲಿನ್ ಚಾರ್ಟರ್ಡ್ ವಿಮಾನದಲ್ಲಿ ಮಧುರೈಗೆ ಬಂದಿದ್ದು, ಬಳಿಕ ರಸ್ತೆ ಮಾರ್ಗವಾಗಿ ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕೊಡೈಕೆನಾಲ್‌ಗೆ ತೆರಳಿದರು.

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ವಿಶ್ರಾಂತಿ ಪಡೆಯಲು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸುಂದರ ಗಿರಿಧಾಮ ಕೊಡೈಕೆನಾಲ್‌ಗೆ ಶನಿವಾರ ತೆರಳಿದ್ದಾರೆ.
ಡಿಎಂಕೆ ಅಧ್ಯಕ್ಷರಾಗಿರುವ ಸ್ಟಾಲಿನ್ ಚಾರ್ಟರ್ಡ್ ವಿಮಾನದಲ್ಲಿ ಮಧುರೈಗೆ ಬಂದಿದ್ದು, ಬಳಿಕ ರಸ್ತೆ ಮಾರ್ಗವಾಗಿ ರಾಜ್ಯದ ಜನಪ್ರಿಯ ಪ್ರವಾಸಿ ತಾಣವಾದ ಕೊಡೈಕೆನಾಲ್‌ಗೆ ತೆರಳಿದರು. ಇದನ್ನು "ಗಿರಿಧಾಮಗಳ ರಾಜಕುಮಾರಿ ಎಂದು ಕರೆಯಲಾಗುತ್ತದೆ.
ಹಸಿರು ಕಾಡುಗಳು, ಸರೋವರಗಳು ಮತ್ತು ಜಲಪಾತಗಳಿಗೆ ಇದು ಹೆಸರುವಾಸಿಯಾಗಿದೆ. ಸ್ಟಾಲಿನ್ ಪತ್ನಿ ದುರ್ಗಾ ಮತ್ತಿತರ ಕುಟುಂಬ ಸದಸ್ಯರು ಅವರೊಂದಿಗೆ ಇದ್ದರು. ಏಪ್ರಿಲ್ 23 ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಮುಗಿದಿತ್ತು. ಎರಡು ದಿನಗಳ ನಂತರ ಅವರು ನಾಲ್ಕು ದಿನ ವಿರಾಮ ಪಡೆದಿದ್ದು, ಏಪ್ರಿಲ್ 29 ರಂದು ಚೆನ್ನೈಗೆ ಹಿಂತಿರುಗಲಿದ್ದಾರೆ.
ಸ್ಟಾಲಿನ್ ಒಂದು ತಿಂಗಳಿಗೂ ಹೆಚ್ಚು ಕಾಲ ರಾಜ್ಯದಾದ್ಯಂತ ಡಿಎಂಕೆ ಮತ್ತು ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದರು. ಚುನಾವಣೆಯ ನಂತರ ಸಣ್ಣ ವಿರಾಮಕ್ಕಾಗಿ ಸ್ಟಾಲಿನ್ ಕೊಡೈಕೆನಾಲ್‌ಗೆ ಭೇಟಿ ನೀಡಿದ್ದು ಇದೇ ಮೊದಲಲ್ಲ. 2021 ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆ ಮುಗಿದ ನಂತರ ಈ ಪ್ರತ್ಯೇಕ ತಾಣಕ್ಕೆ ಭೇಟಿ ನೀಡಿದ್ದರು.
ಉಪಮುಖ್ಯಮಂತ್ರಿ ಉದಯನಿಧಿ ಈಗಾಗಲೇ ತಮ್ಮ ಪತ್ನಿ ಮತ್ತು ಮಗಳೊಂದಿಗೆ ದುಬೈಗೆ ಸಣ್ಣ ಪ್ರವಾಸಕ್ಕೆ ತೆರಳಿದ್ದಾರೆ. ಮೇ 4 ರಂದು ಮತ ಎಣಿಕೆ ನಡೆಯುವ ಮುನ್ನ ಇಬ್ಬರೂ ನಗರಕ್ಕೆ ಹಿಂತಿರುಗಲಿದ್ದಾರೆ ಎಂದು ಡಿಎಂಕೆ ಮೂಲವೊಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



