ದೇವರೇ.. ನನ್ನ ಅಪ್ಪನಂತ ಅಪ್ಪನನ್ನು ಯಾವ ಮಕ್ಕಳಿಗೂ ಕೊಡಬೇಡ, ನನ್ನ ತಂದೆಗೆ ನನ್ನ ದೇಹ ಮುಟ್ಟಲು ಬಿಡಬೇಡಿ; ಪೋಷಕರ ಕಿರುಕುಳಕ್ಕೆ ಬೇಸತ್ತ ವಕೀಲನ ದಾರುಣ ಅಂತ್ಯ!
ನಾನು ಯಾರನ್ನೂ ಕೇಳದೆ ಒಂದುಸಲ ರೆಫ್ರಿಜರೇಟರ್ನಿಂದ ಮಾವಿನ ಜ್ಯೂಸ್ ತೆಗೆದುಕೊಂಡೆ. ಆಗ ನನಗೆ ಕೇವಲ ಆರು ವರ್ಷ. ಇದಕ್ಕಾಗಿ ನನ್ನನ್ನು ಬಟ್ಟೆ ಬಿಚ್ಚಿಸಿ ಮನೆಯಿಂದ ಹೊರಗೆ ಕಳುಹಿಸಲಾಯಿತು. ಪೋಷಕರು ತಮ್ಮ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿರಬೇಕು.

ಕಾನ್ಪುರ: ಅಪ್ಪಾ, ಕೊನೆಗೂ ನೀವು ಗೆದ್ದಿರಿ, ನಾನು ಸೋತುಹೋಗಿದ್ದೇನೆ. ನಿಮಗೆ ಅಭಿನಂದನೆಗಳು... ಇದು ಜೀವನದ ಆರಂಭಿಕ ಹಂತದಲ್ಲೇ ಸಾವಿಗೆ ಶರಣಾದ 23 ವರ್ಷದ ಯುವ ವಕೀಲರೊಬ್ಬರ ಡೆತ್ ನೋಟ್ ಆಗಿದೆ.
ತಂದೆಯ ನಿರಂತರ ಮಾನಸಿಕ ಕಿರುಕುಳ ಹಾಗೂ ಅತಿಯಾದ ಕಟ್ಟುನಿಟ್ಟುಗಳಿಂದ ಬೇಸತ್ತ ಪ್ರಿಯಾಂಶು ಶ್ರೀವಾಸ್ತವ ಎಂಬ ಯುವ ವಕೀಲ, ಕಾನ್ಪುರ ನ್ಯಾಯಾಲಯದ ಸಂಕೀರ್ಣದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಯುವ ಮುನ್ನ ಅವರು ಬರೆದಿಟ್ಟಿರುವ ಸುದೀರ್ಘ ಡೆತ್ನೋಟ್ ಹಾಗೂ ವಾಟ್ಸಾಪ್ ಸ್ಟೇಟಸ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ವೃತ್ತಿಯಲ್ಲಿ ವಕೀಲರಾಗಿದ್ದ ಪ್ರಿಯಾಂಶು, ಕಾನ್ಪುರ ನ್ಯಾಯಾಲಯದ ಆವರಣದಲ್ಲೇ ಈ ತೀವ್ರ ನಿರ್ಧಾರ ಕೈಗೊಂಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಘಟನೆಗೂ ಮುನ್ನ ಅವರು ಐದನೇ ಮಹಡಿಯಲ್ಲಿ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದರು. ಮಾತು ಮುಗಿಯುತ್ತಿದ್ದಂತೆಯೇ ಏಕಾಏಕಿ ಕೆಳಕ್ಕೆ ಜಿಗಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ನಾನು ಯಾರನ್ನೂ ಕೇಳದೆ ಒಂದುಸಲ ರೆಫ್ರಿಜರೇಟರ್ನಿಂದ ಮಾವಿನ ಜ್ಯೂಸ್ ತೆಗೆದುಕೊಂಡೆ. ಆಗ ನನಗೆ ಕೇವಲ ಆರು ವರ್ಷ. ಇದಕ್ಕಾಗಿ ನನ್ನನ್ನು ಬಟ್ಟೆ ಬಿಚ್ಚಿಸಿ ಮನೆಯಿಂದ ಹೊರಗೆ ಕಳುಹಿಸಲಾಯಿತು. ಪೋಷಕರು ತಮ್ಮ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿರಬೇಕು, ಆದರೆ ಅದು ಉಸಿರುಗಟ್ಟಿಸುವ ಹಂತಕ್ಕೆ ಹೋಗಬಾರದು ಎಂದು ಬರೆದಿದ್ದಾರೆ. "ನಾನು ನನ್ನ ಜೀವನದಲ್ಲಿ ಅದೆಲ್ಲವನ್ನು ಮರೆತು ಮುಂದುವರಿಯಲು, ಖುಷಿಯಾಗಿ ಬದುಕಲು ಬಹಳಷ್ಟು ಪ್ರಯತ್ನಿಸಿದೆ, ಆದರೆ ಅದು ಆಗುತ್ತಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಬರೆದಿದ್ದಾರೆ.
ಸಣ್ಣ ಸಣ್ಣ ವಿಷಯಗಳಿಗೆ ಅವರನ್ನು ಆಗಾಗ ಪ್ರಶ್ನೆ ಮಾಡಲಾಗುತ್ತಿತ್ತು. ಇದು ಅವರನ್ನು ಯಾವಾಗಲೂ ಅವರ ಮೇಲೆ ಒತ್ತಡ ಹೇರುತ್ತಿತ್ತು ಅವರು ಹೇಳಿದರು. "ಈ ಒತ್ತಡದೊಂದಿಗೆ ನಾನು ಇನ್ನು ಮುಂದೆ ಬದುಕಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಪತ್ರದಲ್ಲಿ, ಪ್ರಿಯಾಂಶು ಫಿಸಿಕಲ್ ಶಿಕ್ಷಣ ಪಡೆಯೋಕೆ ಬಯಸಿದ್ದರೂ ತನ್ನ ತಂದೆ ಕಂಪ್ಯೂಟರ್ ಸೈನ್ಸ್ ಕಲಿಯೋಕೆ ಒತ್ತಾಯಿಸುತ್ತಿದ್ದರು ಎಂದು ಅವರು ಹೇಳಿದರು. ತನ್ನ ತಂದೆ ಸಾರ್ವಜನಿಕವಾಗಿ ತನ್ನನ್ನು ಅವಮಾನಿಸುತ್ತಿದ್ದರು. ತನ್ನ ಜೀವನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
"ನಾನು ಎಲ್ಲಿಗೆ ಹೋಗುತ್ತಿದ್ದೇನೆ, ನಾನು ಯಾವಾಗ ವಾಪಸ್ ಬರುತ್ತೇನೆ, ಫೋನ್ನಲ್ಲಿ ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಅವರು ಯಾವಾಗಲೂ ನನ್ನನ್ನು ಕೇಳುತ್ತಾರೆ. ನನ್ನ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ ಉಸಿರುಗಟ್ಟಿಸುತ್ತಿದೆ. ಪ್ರತಿದಿನ ಉಸಿರುಗಟ್ಟಿಸುವುದಕ್ಕಿಂತ ಒಮ್ಮೆಲೇ ಶಾಶ್ವತವಾಗಿ ಸಾಯುವುದು ಉತ್ತಮ" ಎಂದು ಅವರು ಬರೆದಿದ್ದಾರೆ.
ನಾನು ಎಲ್ಲಾ ಪೋಷಕರಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮ ಮಕ್ಕಳನ್ನು ಅವರಿಗೆ ತಡೆಯೋಕೆ ಸಾಧ್ಯವಾಗದಷ್ಟು ಹಿಂಸಿಸಬೇಡಿ. ನನ್ನ ತಂದೆ ನನ್ನ ದೇಹವನ್ನು ಮುಟ್ಟಲು ಬಿಡಬೇಡಿ. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದು ಬೇಡ, ಇದರಿಂದ ನನ್ನ ಕುಟುಂಬ ಕಷ್ಟ ಎದುರಿಸುವುದನ್ನು ನಾನು ಬಯಸುವುದಿಲ್ಲ. "ಇಂತಹ ತಂದೆ ಯಾರಿಗೂ ಸಿಗದಿರಲಿ ಎಂದು ನಾನು ಬಯಸುತ್ತೇನೆ. ನಾನು ಸೋತಿದ್ದೇನೆ, ಅಪ್ಪ ಗೆದ್ದಿದ್ದಾರೆ. ಅವರಿಗೆ ಅಭಿನಂದನೆಗಳು" ಎಂದು ಅವರು ಬರೆದಿದ್ದಾರೆ.
ನನ್ನ ಸಾವಿನ ನಂತರ ತಂದೆ ನನ್ನ ದೇಹವನ್ನು ಮುಟ್ಟಬಾರದು. ಆದರೆ, ನನ್ನ ಕುಟುಂಬದ ಮೇಲೆ ಯಾವುದೇ ತೊಂದರೆ ಬರಬಾರದು ಎಂಬ ಕಾರಣಕ್ಕೆ ಅವರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಬೇಡಿ. ನನ್ನಂತಹ ತಂದೆ ಜಗತ್ತಿನಲ್ಲಿ ಯಾರಿಗೂ ಸಿಗಬಾರದು ಎಂದು ಬರೆಯುವ ಮೂಲಕ ತಂದೆಯ ಮೇಲಿದ್ದ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




