ದೇಶ

'ಮಹಾ ಜಂಗಲ್ ರಾಜ್'ಗೆ ಮರಣ ಶಾಸನ'; ಮೊದಲ ಹಂತದ ದಾಖಲೆಯ ಮತದಾನದಿಂದ TMC ಬೆಚ್ಚಿಬಿದ್ದಿದೆ!

ಮೇ 4 ರಂದು ಫಲಿತಾಂಶ ಪ್ರಕಟವಾದ ನಂತರ, ಟಿಎಂಸಿ "ಗೂಂಡಾಗಳಿಗೆ" ಅಡಗಿಕೊಳ್ಳಲು ಸ್ಥಳ ಸಿಗುವುದಿಲ್ಲ ಮತ್ತು ಕಾನೂನಿನಿಂದ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

'ಮಹಾ ಜಂಗಲ್ ರಾಜ್'ಗೆ ಮರಣ ಶಾಸನ'; ಮೊದಲ ಹಂತದ ದಾಖಲೆಯ ಮತದಾನದಿಂದ TMC ಬೆಚ್ಚಿಬಿದ್ದಿದೆ!
ಪ್ರಧಾನಿ ಮೋದಿ
Published On :

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಗುರುವಾರ ನಡೆದ ಮೊದಲ ಹಂತದ ಮತದಾನದಲ್ಲಿ ಭಾರಿ ಪ್ರಮಾಣದ ಮತದಾನವಾಗಿದ್ದು, ಇದರಿಂದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸರ್ಕಾರ ಬೆಚ್ಚಿ ಬಿದ್ದಿದೆ ಮತ್ತು "ಜಂಗಲ್ ರಾಜ್ ಆಡಳಿತಕ್ಕೆ ಮರಣ ಶಾಸನ" ಸಿದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಇಂದು ಪಾಣಿಹಟಿಯಲ್ಲಿ ನಡೆದ ಹೈ-ಡೆಸಿಬಲ್ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸಾರ್ವಜನಿಕರ ಅಗಾಧ ಭಾಗವಹಿಸುವಿಕೆಯು ಟಿಎಂಸಿಯ "ಮಹಾ ಜಂಗಲ್ ರಾಜ್" ಆಡಳಿತಕ್ಕೆ ಅಂತಿಮ ದಿನವಾಗಿದೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಲಂಚವಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ. "ವ್ಯವಸ್ಥಿತ ಭ್ರಷ್ಟಾಚಾರ, ದುರಾಡಳಿತ ಮತ್ತು ಒಳನುಸುಳುವವರ ಪ್ರಭಾವ" ದಿಂದ ರಾಜ್ಯವನ್ನು ಗುರುತಿಸಲಾಗುತ್ತಿದೆ ಎಂದು ಆರೋಪಿಸಿದರು.

"ಬಂಗಾಳದಲ್ಲಿ ಬಹಳ ದಿನಗಳಿಂದ ಗೋಚರಿಸುತ್ತಿದ್ದ ಬದಲಾವಣೆಯ ಅಲೆ - ನಿನ್ನೆಯ ಮೊದಲ ಹಂತದ ಮತದಾನದ ನಂತರ ಕಂಡು ಬಂದಿತು. ನಿನ್ನೆ ಬಿಜೆಪಿ ಪರವಾಗಿ ತೋರಿದ ಬೆಂಬಲವು ಅದರ ವಿಜಯದ ಕಹಳೆ ಊದಿದೆ" ಎಂದು ಮೋದಿ ಹೇಳಿದರು.

ಮೇ 4 ರಂದು ಫಲಿತಾಂಶ ಪ್ರಕಟವಾದ ನಂತರ, ಟಿಎಂಸಿ "ಗೂಂಡಾಗಳಿಗೆ" ಅಡಗಿಕೊಳ್ಳಲು ಸ್ಥಳ ಸಿಗುವುದಿಲ್ಲ ಮತ್ತು ಕಾನೂನಿನಿಂದ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು.

"ಮೊದಲ ಹಂತದ ಮತದಾನವು ಟಿಎಂಸಿಯ 'ಮಹಾ ಜಂಗಲ್ ರಾಜ್' ಅಂತ್ಯಗೊಂಡಿತು" ಎಂಬುದುನ್ನು ಸೂಚಿಸುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.