IRS ಅಧಿಕಾರಿ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವ ಮುನ್ನ ಮತ್ತೊಬ್ಬ ಮಹಿಳೆ ಮೇಲೆ ರೇಪ್; ಭಯಾನಕ ಸಂಗತಿ ಬಹಿರಂಗ!
ಭಾರತೀಯ ಕಂದಾಯ ಸೇವೆ(ಐಆರ್ ಎಸ್)ಯ ಹಿರಿಯ ಅಧಿಕಾರಿಯ 22 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ತನಿಖೆ ವೇಳೆ ಕೆಲವು ಭಯಾನಕ ಸಂಗತಿಗಳು ಬಹಿರಂಗವಾಗಿವೆ.

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಹಿರಿಯ ಐಆರ್ ಎಸ್ ಅಧಿಕಾರಿಯೊಬ್ಬರ 22 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವ ಕೆಲವೇ ಗಂಟೆಗಳ ಮುನ್ನ ಆರೋಪಿ ಮತ್ತೊಬ್ಬ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ ಎಂಬ ಭಯಾನಕ ಸಂಗತಿ ಬಹಿರಂಗವಾಗಿದೆ.
ಆಗ್ನೇಯ ದೆಹಲಿಯ ಕೈಲಾಶ್ ಹಿಲ್ಸ್ ಪ್ರದೇಶದಲ್ಲಿ ಬುಧವಾರ ನಡೆದ ಭಾರತೀಯ ಕಂದಾಯ ಸೇವೆ(ಐಆರ್ ಎಸ್)ಯ ಹಿರಿಯ ಅಧಿಕಾರಿಯ 22 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದ ತನಿಖೆ ವೇಳೆ ಕೆಲವು ಭಯಾನಕ ಸಂಗತಿಗಳು ಬಹಿರಂಗವಾಗಿವೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ 19 ವರ್ಷದ ರಾಹುಲ್ ಮೀನಾ, ಮತ್ತೊಂದು ಕೀ ಬಳಸಿ ಅಧಿಕಾರಿಯ ಮನೆಗೆ ನುಸುಳಿದ್ದು, ನೇರವಾಗಿ ಮೇಲ್ಛಾವಣಿಯ ಅಧ್ಯಯನ ರೂಮ್ ಗೆ ತೆರಳಿದ್ದಾನೆ. ಅಲ್ಲಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ಮೇಲೆ ದಾಳಿ ಮಾಡಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ರಕ್ತಸಿಕ್ತ ದೇಹವನ್ನು ಕೆಳಕ್ಕೆ ಎಳೆದೊಯ್ದಿದ್ದಾನೆ.
ಅಪರಾಧ ಎಸಗಿದ ಕೆಲವು ಗಂಟೆಗಳ ನಂತರ ದ್ವಾರಕಾದ ಹೋಟೆಲ್‌ನಲ್ಲಿ ಬಂಧಿಸಲ್ಪಟ್ಟ ರಾಹುಲ್, ವಿಚಾರಣೆಯ ಸಮಯದಲ್ಲಿ ತನಗೆ ಯಾವುದೇ ಪಶ್ಚಾತ್ತಾಪ ಇಲ್ಲ ಎಂದು ಹೇಳಿದ್ದಾನೆ.
"ಆರೋಪಿಯು, ಯುವತಿ ಪ್ರಜ್ಞಾಹೀನಳಾಗಿದ್ದಾಗಲೇ ಆಕೆಯ ಮೇಲೆ ಅತ್ಯಾಚಾರ ಮಾಡಿದನೆಂದು ತನಿಖೆ ಸೂಚಿಸುತ್ತದೆ. ನಂತರ ಅವನು ಅವಳನ್ನು ಮತ್ತೊಂದು ಕೋಣೆಗೆ ಎಳೆದುಕೊಂಡು ಹೋಗಿ, ಆಕೆಯ ಬೆರಳಚ್ಚು ಬಳಸಿ ಬಯೋಮೆಟ್ರಿಕ್ ಲಾಕ್ ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಅದು ಸಾಧ್ಯವಾಗಿಲ್ಲ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂತರ ಅವನು ಸ್ಕ್ರೂಡ್ರೈವರ್ ಬಳಸಿ ಲಾಕರ್ ಒಡೆದು, ನಗದು ಮತ್ತು ಆಭರಣಗಳನ್ನು ಕಳ್ಳತನ ಮಾಡಿದ್ದಾನೆ. ರಕ್ತಸಿಕ್ತ ಬಟ್ಟೆ ಮತ್ತು ಚಪ್ಪಲಿಗಳನ್ನು ಬದಲಾಯಿಸಿದ್ದು, ಯುವತಿಯ ಪೋಷಕರು ಮನೆಗೆ ಮರಳುವ ಸುಮಾರು 30 ನಿಮಿಷಗಳ ಮೊದಲು ಸ್ಥಳದಿಂದ ಪರಾರಿಯಾಗುತ್ತಾನೆ.
ಪೊಲೀಸರ ಪ್ರಕಾರ, ಆರೋಪಿ ಸುಮಾರು 40 ನಿಮಿಷಗಳ ಕಾಲ ಮನೆಯೊಳಗೆ ಇದ್ದನು.
ಆರೋಪಿ ರಾಹುಲ್ ಬೆಳಗ್ಗೆ 6.30 ರ ಸುಮಾರಿಗೆ ಕಾಲೋನಿಗೆ ಪ್ರವೇಶಿಸಿ, 6.49 ಕ್ಕೆ ಅಧಿಕಾರಿಯ ಮನೆಗೆ ನುಸುಳಿ, 7.20 ಕ್ಕೆ ಹೊರಟುಹೋದನೆಂದು ಸಿಸಿಟಿವಿ ದೃಶ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ದೃಢಪಡಿಸಿವೆ.
ಸಂತ್ರಸ್ತೆಯ ಪೋಷಕರು ಮನೆಗೆ ಹಿಂತಿರುಗಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು, ಬಟ್ಟೆ ಹರಿದು ಹೋಗಿರುವುದನ್ನು ಮತ್ತು ಆಕೆಯ ವಸ್ತುಗಳು ಸುತ್ತಲೂ ಹರಡಿಕೊಂಡಿರುವುದನ್ನು ಕಂಡು ಆಘಾತಗೊಂಡಿದ್ದಾರೆ.
ಸುಮಾರು ಎಂಟು ತಿಂಗಳ ಕಾಲ ಅಧಿಕಾರಿಯ ಮನೆಯಲ್ಲಿ ಮನೆಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಸುಮಾರು ಒಂದು ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಲಾಗಿತ್ತು. ಘಟನೆಯ ಸಮಯದಲ್ಲಿ ಯುವತಿಯ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
19 ವರ್ಷದ ಈ ಯುವಕ ದೆಹಲಿಯಲ್ಲಿ ಅಧಿಕಾರಿ ಮಗಳ ಮೇಲೆ ಅತ್ಯಾಚಾರ ಎಸಗುವ ಕೆಲವು ಗಂಟೆಗಳ ಮೊದಲು ರಾಜಸ್ಥಾನದ ಅಲ್ವಾರ್‌ನಲ್ಲಿ ಮತ್ತೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಸರಣಿ ಅಪರಾಧಿಯಂತೆ ಕಾಣುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ರಾಹುಲ್ ಮೀನಾ ವಿರುದ್ಧದ ಅತ್ಯಾಚಾರ ಆರೋಪದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ವಿಚಾರಣೆಗಾಗಿ ನಾವು ಅರ್ಧ ಡಜನ್‌ಗೂ ಹೆಚ್ಚು ಜನರನ್ನು ಬಂಧಿಸಿದ್ದೇವೆ" ಎಂದು ಅಲ್ವಾರ್ ಎಸ್‌ಪಿ ಸುಧೀರ್ ಚೌಧರಿ ಗುರುವಾರ ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ರಾಹುಲ್ ಸಂತ್ರಸ್ತೆಗೆ ಪರಿಚಿತನಾಗಿದ್ದನು ಮತ್ತು ಆಕೆಯ ಪತಿಯೊಂದಿಗೆ ಆನ್‌ಲೈನ್‌ನಲ್ಲಿ ಲುಡೋ ಆಡುತ್ತಿದ್ದನು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




