ದೇಶ

ದ್ರಾವಿಡ ಸಿದ್ಧಾಂತ ದ್ವೇಷಿಸುವ RSS ತಮಿಳುನಾಡು ಆಳಲು ಯೋಜಿಸುತ್ತಿದೆ; ಬಿಜೆಪಿಗೆ AIADMK ಶರಣಾಗಿದೆ: ರಾಹುಲ್ ಗಾಂಧಿ

ಕನ್ಯಾಕುಮಾರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ದ್ರಾವಿಡ ಸಿದ್ಧಾಂತವನ್ನು ದ್ವೇಷಿಸುವ ಆರ್‌ಎಸ್‌ಎಸ್ ಕೂಡ ತಮಿಳುನಾಡನ್ನು ಆಳಲು ಯೋಜಿಸುತ್ತಿದೆ" ಎಂದು ಹೇಳಿದರು.

ದ್ರಾವಿಡ ಸಿದ್ಧಾಂತ ದ್ವೇಷಿಸುವ RSS ತಮಿಳುನಾಡು ಆಳಲು ಯೋಜಿಸುತ್ತಿದೆ; ಬಿಜೆಪಿಗೆ AIADMK ಶರಣಾಗಿದೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :

ಕನ್ಯಾಕುಮಾರಿ: ಎಐಎಡಿಎಂಕೆ ನಾಯಕರು "ಭ್ರಷ್ಟಾಚಾರ" ದಿಂದಾಗಿ ಬಿಜೆಪಿಗೆ "ಶರಣಾಗಿದ್ದಾರೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರಾದೇಶಿಕ ಪಕ್ಷವು ಈಗ ತಮಿಳುನಾಡಿನಲ್ಲಿ ಬಿಜೆಪಿ ಪ್ರವೇಶಕ್ಕೆ ಒಂದು ಮಾರ್ಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

ಕನ್ಯಾಕುಮಾರಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ದ್ರಾವಿಡ ಸಿದ್ಧಾಂತವನ್ನು ದ್ವೇಷಿಸುವ ಆರ್‌ಎಸ್‌ಎಸ್ ಕೂಡ ತಮಿಳುನಾಡನ್ನು ಆಳಲು ಯೋಜಿಸುತ್ತಿದೆ" ಎಂದು ಹೇಳಿದರು.

ಪ್ರತಿಯೊಂದು ರಾಜ್ಯವು ತನ್ನ ಧ್ವನಿ ಮತ್ತು ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ಪ್ರತಿಯೊಂದು ರಾಜ್ಯದ ಜನರು ತಮ್ಮ ರಾಜ್ಯವನ್ನು ನಡೆಸಬೇಕು. ಆದರೆ ಬಿಜೆಪಿ ಈ ರೀತಿ ಯೋಚಿಸುವುದಿಲ್ಲ. ಅದು ಒಂದು ಸಂಪ್ರದಾಯ, ಒಂದು ಭಾಷೆ ಮತ್ತು ಒಂದು ಇತಿಹಾಸ ಎಂದು ನಂಬುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

ವಿಕೇಂದ್ರೀಕೃತ ಆಡಳಿತದ ತತ್ವಗಳಿಗೆ ಅನುಗುಣವಾಗಿ ತಮಿಳುನಾಡನ್ನು ತನ್ನದೇ ಆದ ಜನರಿಂದ ಆಳಬೇಕು ಎಂದು ಅವರು ಹೇಳಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಮೇಲೆ ಪ್ರಭಾವ ಬೀರುತ್ತಿದ್ದಾರೆ.

ಅವರು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಮೂಲಕ ತಮಿಳುನಾಡನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ ಎಂದರು. ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ತಮಿಳು ಭಾಷೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಕಾಪಾಡಲು ಬದ್ಧವಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.