ಮೋದಿ ರಾಮಾಯಣದಲ್ಲಿ ಸೀತಾಮಾತೆಯನ್ನು ಅಪಹರಿಸಲು ಬಂದಿದ್ದ ಮಾರೀಚನಿದ್ದಂತೆ: ರೇವಂತ್ ರೆಡ್ಡಿ ವಿವಾದ!
“ಮಾರೀಚನು ಸೀತಾ ಮಾತೆಯ ಅಪಹರಣಕ್ಕಾಗಿ ಬಂದಿದ್ದ. ಅದೇ ರೀತಿ ಮೋದಿ ಜಿ ಮತ್ತು ಸಂಪೂರ್ಣ ಬಿಜೆಪಿ–ಎನ್‌ಡಿಎ ಸಂವಿಧಾನವನ್ನೇ ಕಸಿದುಕೊಳ್ಳಲು ಯತ್ನಿಸುತ್ತಿವೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ತೆಲಂಗಾಣ: ಭಾರತೀಯ ಜನತಾ ಪಕ್ಷ ಭಾನುವಾರ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ರಾಮಾಯಣದ ರಾಕ್ಷಸ ಮಾರೀಚನಿಗೆ ಹೋಲಿಕೆ ಮಾಡಿರುವುದನ್ನು ಬಿಜೆಪಿ ಖಂಡಿಸಿ, ಈ ಮೂಲಕ ಅವರು ಸಂವಿಧಾನಿಕ ಹುದ್ದೆಯನ್ನು ‘ಅವಮಾನ’ ಮಾಡಿದ್ದಾರೆ ಮತ್ತು ದ್ವೇಷವೇ ಕಾಂಗ್ರೆಸ್ ಪಕ್ಷದ ಗುರುತಾಗಿಬಿಟ್ಟಿದೆ ಎಂದು ಆರೋಪಿಸಿದೆ.
ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಲ್ಲಾ, ಕಾಂಗ್ರೆಸ್‌ನೊಳಗಿನ ಒಂದು ಮೂಲ ತಿಳಿಸಿದಂತೆ, ವಿರೋಧ ಪಕ್ಷದ ಎಲ್ಲಾ ನಾಯಕರಿಗೂ, ಪಕ್ಷದ ಅಧ್ಯಕ್ಷರಿಗಿಂತಲೂ “ಮೇಲಿರುವ” ಹೈಕಮಾಂಡ್‌ನಿಂದ ಮೋದಿಯನ್ನು ಗುರಿಯಾಗಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೇವಂತ್ ರೆಡ್ಡಿ, ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸುವುದಕ್ಕಾಗಿ ಮೋದಿ ಸರ್ಕಾರ ಒತ್ತಡ ಹೇರುತ್ತಿದ್ದು, 2029ರ ಲೋಕಸಭಾ ಚುನಾವಣೆಯಲ್ಲಿ ತನ್ನ ರಾಜಕೀಯ ಬಲವನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು.
“ಮಾರೀಚನು ಸೀತಾ ಮಾತೆಯ ಅಪಹರಣಕ್ಕಾಗಿ ಬಂದಿದ್ದ. ಅದೇ ರೀತಿ ಮೋದಿ ಜಿ ಮತ್ತು ಸಂಪೂರ್ಣ ಬಿಜೆಪಿ–ಎನ್‌ಡಿಎ ಸಂವಿಧಾನವನ್ನೇ ಕಸಿದುಕೊಳ್ಳಲು ಯತ್ನಿಸುತ್ತಿವೆ. ಆದರೆ ನಾವು ಅಂತಹ ಯಾವುದೇ ಪ್ರಯತ್ನ ಯಶಸ್ವಿಯಾಗಲು ಬಿಡುವುದಿಲ್ಲ,” ಎಂದು ಅವರು ಹೇಳಿದರು.
ರೆಡ್ಡಿ ದ್ವೇಷದ ರಾಜಕೀಯವನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ಪೂನಾವಾಲಾ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿ, ರೇವಂತ್ ರೆಡ್ಡಿ ಪ್ರಧಾನಿಯ ಸಂವಿಧಾನಿಕ ಹುದ್ದೆಗೆ ಅವಮಾನ ಮಾಡಿದ್ದಾರೆ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದರು.
“ರೇವಂತ್ ರೆಡ್ಡಿ ಅವರು ಪ್ರಧಾನಿಯನ್ನು ರಾಕ್ಷಸನಿಗೆ ಹೋಲಿಸಿದ್ದಾರೆ... ಕಾಂಗ್ರೆಸ್ ಪಕ್ಷವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ 150 ಕ್ಕೂ ಹೆಚ್ಚು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದೆ. ‘ನಾರಿ ಶಕ್ತಿ’ಗೆ ಉತ್ತೇಜನ ನೀಡಿದ ಕಾರಣಕ್ಕೂ ಅವರು ಮತ್ತೆ ಅವರನ್ನು ನಿಂದಿಸುತ್ತಿದ್ದಾರೆ. ಇದು ಅಪರೂಪದ ಘಟನೆ ಅಲ್ಲ, ಪೂರ್ವನಿಯೋಜಿತ ರಾಜಕೀಯ ಪ್ರಯೋಗ,” ಎಂದು ಪೂನಾವಾಲಾ ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



