ದೇಶ

ನಡು ರಸ್ತೆಯಲ್ಲೇ ಗರ್ಭಿಣಿ ಮಹಿಳೆಗೆ ಲೈಂಗಿಕ ಕಿರುಕುಳ: ಕೊನೆಗೂ ಆರೋಪಿ ಬಂಧನ, Police treatment ಗೆ ಸುಸ್ತು! video

ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಗರ್ಭಿಣಿ ಮಹಿಳೆಗೆ ದುಷ್ಕರ್ಮಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದ.

ನಡು ರಸ್ತೆಯಲ್ಲೇ ಗರ್ಭಿಣಿ ಮಹಿಳೆಗೆ ಲೈಂಗಿಕ ಕಿರುಕುಳ: ಕೊನೆಗೂ ಆರೋಪಿ ಬಂಧನ, Police treatment ಗೆ ಸುಸ್ತು! video
ಗರ್ಭಿಣಿ ಮಹಿಳೆಗೆ ಲೈಂಗಿಕ ಕಿರುಕುಳ
Published On :

ಜೈಪುರ: ಇತ್ತೀಚೆಗೆ ವೈರಲ್ ಆಗಿದ್ದ ಗರ್ಭಿಣಿ ಮಹಿಳೆಯ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕೊನೆಗೂ ರಾಜಸ್ತಾನ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಗೆ ಪೊಲೀಸರು ನೀಡಿರುವ ಸ್ಪೆಷಲ್ ಟ್ರೀಟ್ ಮೆಂಟ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ರಾಜಸ್ಥಾನದ ರಾಜಧಾನಿ ಜೈಪುರದ ಮಾಳವಿಯಾ ನಗರದಲ್ಲಿ ಕಳೆದ ಮಾರ್ಚ್ 25, 2026 ರಂದು ಒಂಟಿಯಾಗಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಗರ್ಭಿಣಿ ಮಹಿಳೆಗೆ ದುಷ್ಕರ್ಮಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದ. ಮಹಿಳೆಯನ್ನು ಹಿಂಬಾಲಿಸಿದ್ದ ದುಷ್ಕರ್ಮಿ ಆಕೆಯನ್ನು ಹಿಂಭಾಗದಿಂದ ಹಿಡಿದುಕೊಂಡು ಆಕೆಯ ಎದೆಗೆ ಕೈಹಾಕಿದ್ದ.

ಈ ದಿಢೀರ್ ಘಟನೆಯಿಂದ ಆಘಾತಕ್ಕೊಳಗಾದ ಮಹಿಳೆ ಕೂಡಲೇ ಕಿರುಚಿಕೊಂಡರು. ಈ ವೇಳೆ ಜನ ಸೇರುತ್ತಾರೆ ಎಂಬ ಭಯದಿಂದ ಆತ ಆಕೆಯನ್ನು ಬಿಟ್ಟು ಪರಾರಿಯಾಗಿದ್ದ. ಈ ಘಟನೆಯ ವಿಡಿಯೋ ಸ್ಥಳೀಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

ಆರೋಪಿಯನ್ನು ಕೂಡಲೇ ಬಂಧಿಸಿ ತಕ್ಕಶಾಸ್ತಿ ಮಾಡಬೇಕು ಎಂದು ಆಗ್ರಹ ಕೂಡ ಕೇಳಿಬಂದಿತ್ತು.

ತಿಂಗಳ ಬಳಿಕ ಕೊನೆಗೂ ಆರೋಪಿ ಬಂಧನ

ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜೈಪುರ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ ಈ ಪ್ರಕರಣ ವ್ಯಾಪಕ ವೈರಲ್ ಆಗುತ್ತಿದ್ದಂತೆಯೇ ಆರೋಪಿ ತಲೆಮರೆಸಿಕೊಂಡಿದ್ದ. ಇದೀಗ ಜೈಪುರ ಪೊಲೀಸರು ಕೊನೆಗೂ ಪ್ರಮುಖ ಆರೋಪಿ ರಾಜನ್ ಅಲಿಯಾಸ್ ರಾಜ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಟ್ರೀಟ್ ಮೆಂಟ್

ಬಂಧನದ ಬಳಿಕ ಆರೋಪಿಗೆ ಪೊಲೀಸರು ತಮ್ಮದೇ ಆದ ವಿಶೇಷ ಟ್ರೀಟ್ ಮೆಂಟ್ ನೀಡಿದ್ದು, ಆರೋಪಿ ಠಾಣೆಯಿಂದ ಹೊರಗೆ ಬರುವಾಗ ಕೈ ಮತ್ತು ಕಾಲುಗಳಿಗೆ ಬ್ಯಾಂಡೇಜ್ ಸಹಿತನಾಗಿ ಹೊರಬಂದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.