'39 ದಿನಗಳ ಯುದ್ಧದಲ್ಲಿ ಅಮೆರಿಕ ಸಾಧಿಸಿದ್ದಾದರೂ ಏನು?': ಸಿಎಂ ಒಮರ್ ಅಬ್ದುಲ್ಲಾ ಪ್ರಶ್ನೆ
ಯುದ್ಧ ಪ್ರಾರಂಭವಾಗುವ ಮೊದಲೇ ಹಾರ್ಮುಜ್ ಮಾರ್ಗವು ಮುಕ್ತ ಮತ್ತು ಉಚಿತವಾಗಿ ಲಭ್ಯವಿತ್ತು. ಈಗ ಯುದ್ಧದಿಂದ ಉಂಟಾದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.

ಶ್ರೀನಗರ: ಅಮೆರಿಕ-ಇರಾನ್ ಯುದ್ದದಿಂದ ಡೊನಾಲ್ಟ್ ಟ್ರಂಪ್ ಸಾಧಿಸಿದ್ದು ಏನು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಕದನ ವಿರಾಮದ ಭಾಗವಾಗಿ ಮಹತ್ವದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗಿದೆ. ಯುದ್ಧ ಪ್ರಾರಂಭವಾಗುವ ಮೊದಲೇ ಹಾರ್ಮುಜ್ ಮಾರ್ಗವು ಮುಕ್ತ ಮತ್ತು ಉಚಿತವಾಗಿ ಲಭ್ಯವಿತ್ತು. ಈಗ ಯುದ್ಧದಿಂದ ಉಂಟಾದ ಪ್ರಯೋಜನವೇನು ಎಂದು ಪ್ರಶ್ನಿಸಿದ್ದಾರೆ.
ಕದನ ವಿರಾಮವು ಜಲಸಂಧಿಯನ್ನು ಮತ್ತೆ ತೆರೆಯಲು ಅನುವು ಮಾಡಿಕೊಟ್ಟಿದೆ, ಯುದ್ಧ ಪ್ರಾರಂಭವಾಗುವ ಮೊದಲು ಎಲ್ಲರಿಗೂ ಮುಕ್ತವಾಗಿ ಜಲಸಂಧಿ ತೆರೆದಿತ್ತು ಅಲ್ಲವೇ. ಈ 39 ದಿನಗಳ ಯುದ್ಧದಲ್ಲಿ ಅಮೆರಿಕಾ ನಿಖರವಾಗಿ ಏನು ಸಾಧಿಸಿತು? ಇದೊಂದು ಅನ್ಯಾಯದ ಯುದ್ಧ ಎಂದು ಒಮರ್ ಅಬ್ದುಲ್ಲಾ ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಏಷ್ಯಾವನ್ನು ನಾಶ ಮಾಡಿ, ಜಾಗತಿಕ ಇಂಧನ ಮಾರುಕಟ್ಟೆಯನ್ನು ಅಲ್ಲೋಲ ಕಲ್ಲೋಲಗೊಳಿಸಿದ ನಂತರ ಇರಾನ್, ಅಮೆರಿಕ ಮತ್ತು ಇಸ್ರೇಲ್ ಬುಧವಾರ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಘೋಷಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



