ದೇಶ

ನಿತೀಶ್ ಕುಮಾರ್ ಪುತ್ರ ನಿಶಾಂತ್ ಮುಂದಿನ CM; ಪಾಟ್ನಾ ಜೆಡಿಯು ಕಚೇರಿ ಮುಂದೆ ಪೋಸ್ಟರ್‌!

ಈ ಪೋಸ್ಟರ್‌ಗಳಲ್ಲಿ ನಿತೀಶ್ ಕುಮಾರ್ ಅವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರೂ, ನಿಶಾಂತ್ ಅವರನ್ನು "ಬಿಹಾರದ ಮುಂದಿನ ಸಿಎಂ" ಎಂದು ಬಿಂಬಿಸಲಾಗಿದೆ.

ನಿತೀಶ್ ಕುಮಾರ್ ಪುತ್ರ ನಿಶಾಂತ್ ಮುಂದಿನ CM; ಪಾಟ್ನಾ ಜೆಡಿಯು ಕಚೇರಿ ಮುಂದೆ ಪೋಸ್ಟರ್‌!
ಪಾಟ್ನಾ ಜೆಡಿಯು ಕಚೇರಿ ಮುಂದೆ ಪೋಸ್ಟರ್‌
Published On :

ಪಾಟ್ನಾ: ಬಿಹಾರದ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳಾಗಿ ಹಲವಾರು ಬಿಜೆಪಿ ನಾಯಕರ ಹೆಸರುಗಳು ಕೇಳಿಬರುತ್ತಿರುವುದರದ ನಡುವೆ ಶನಿವಾರ ಪಾಟ್ನಾದ ಜೆಡಿ(ಯು) ಕಚೇರಿ ಬಳಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರೇ ಮುಂದಿನ ಸಿಎಂ ಎಂದು ಬಿಂಬಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.

ಈ ಪೋಸ್ಟರ್‌ಗಳಲ್ಲಿ ನಿತೀಶ್ ಕುಮಾರ್ ಅವರು ಪ್ರಮುಖವಾಗಿ ಕಾಣಿಸಿಕೊಂಡಿದ್ದರೂ, ನಿಶಾಂತ್ ಅವರನ್ನು "ಬಿಹಾರದ ಮುಂದಿನ ಸಿಎಂ" ಎಂದು ಬಿಂಬಿಸಲಾಗಿದೆ. ಜೆಡಿ(ಯು) ಕಾರ್ಯಕರ್ತರು "ಅಭಿವೃದ್ಧಿ ಹೊಂದಿದ ಬಿಹಾರ-2040"ಗಾಗಿ ಒಂದು ದೃಷ್ಟಿಕೋನವನ್ನು ಈ ಪೋಸ್ಟರ್‌ಗಳಲ್ಲಿ ಪ್ರಸ್ತುತಪಡಿಸಿದ್ದಾರೆ.

ಪೋಸ್ಟರ್‌ಗಳಲ್ಲಿ "ನಿಶಾಂತ್ ಅವರು ನಿತೀಶ್ ಕುಮಾರ್ ಅವರ ಪ್ರತಿಜ್ಞೆಯನ್ನು ಪೂರೈಸಲು ಸಿದ್ಧರಾಗಿರುವಾಗ ಹೊಸ ಮುಖವನ್ನು ಏಕೆ ಪರಿಗಣಿಸಬೇಕು" ಎಂಬಂತಹ ಘೋಷಣೆಗಳಿವೆ.

"ನಿತೀಶ್ ಸೇವಕ್ ಮಾಂಗೆ ನಿಶಾಂತ್"(ನಿತೀಶ್ ಸೇವಕರು ನಿಶಾಂತ್ ಅವರು ಸಿಎಂ ಆಗಲಿ ಎಂದು ಒತ್ತಾಯಿಸುತ್ತಾರೆ) ಎಂಬ ಘೋಷಣೆಗಳಿವೆ.

ಈ ಪೋಸ್ಟರ್‌ಗಳನ್ನು ಜೆಡಿ(ಯು) ವಿದ್ಯಾರ್ಥಿ ವಿಭಾಗದ ರಾಜ್ಯ ಉಪಾಧ್ಯಕ್ಷ ಕೃಷ್ಣ ಪಟೇಲ್ ಹಾಕಿದ್ದಾರೆ.

ಆದಾಗ್ಯೂ, ಬಿಹಾರ ಮೊದಲ ಬಿಜೆಪಿ ಮುಖ್ಯಮಂತ್ರಿಯನ್ನು ನೋಡಲು ಸಿದ್ಧತೆ ನಡೆಸಿದ್ದೆ ಎಂಬ ವದಂತಿ ಇದೆ. ಆದರೆ "ಏನೂ ಬದಲಾಗುವುದಿಲ್ಲ" ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ನಿತೀಶ್ ಅವರ ಉತ್ತರಾಧಿಕಾರಿಯಾಗುವ ಸಾಧ್ಯತೆ ಇದ್ದು, ಏಪ್ರಿಲ್ ದ್ವಿತೀಯಾರ್ಧದಲ್ಲಿ ರಚನೆಯಾಗುವ ಹೊಸ ಸರ್ಕಾರದಲ್ಲಿ ನಿಶಾಂತ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಬಹುದು ಎನ್ ಡಿಎ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.