EVM ಗಳಲ್ಲಿ ಅಭ್ಯರ್ಥಿಗಳ ಕಲರ್ ಫೋಟೋ; ಚುನಾವಣಾ ಆಯೋಗದಿಂದ ಹೊಸ ಬದಲಾವಣೆ
ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತಪತ್ರಗಳಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಸುಲಭವಾಗಿ ಓದಲು ಮತ್ತು ಮತದಾರ ಸ್ನೇಹಿ ಮತಪತ್ರಗಳ ಬಿಡುಗಡೆಗೆ ಕ್ರಮ ಕೈಗೊಂಡಿದೆ.

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಿಂದ ಪ್ರಾರಂಭಿಸಿ, ಇನ್ನು ಮುಂದೆ ಎಲೆಕ್ಟ್ರಾನಿಕ್ ಮತಯಂತ್ರಗಳು(ಇವಿಎಂ) ಅಭ್ಯರ್ಥಿಗಳ ಬಣ್ಣದ ಫೋಟೋಗಳನ್ನು ಹೊಂದಿರುತ್ತವೆ ಎಂದು ಕೇಂದ್ರ ಚುನಾವಣಾ ಆಯೋಗ ಬುಧವಾರ ತಿಳಿಸಿದೆ.
2015 ರಿಂದ, ಇವಿಎಂ ಮತಪತ್ರಗಳಲ್ಲಿ ಅಭ್ಯರ್ಥಿಗಳ ಕಪ್ಪು ಮತ್ತು ಬಿಳಿ ಫೋಟೋಗಳನ್ನು ಅಂಟಿಸಲಾಗುತ್ತಿದೆ. ಇದನ್ನು ಗುರುತಿಸಲು ಹಲವು ಮತದಾರರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತಪತ್ರಗಳಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಸುಲಭವಾಗಿ ಓದಲು ಮತ್ತು ಮತದಾರ ಸ್ನೇಹಿ ಮತಪತ್ರಗಳ ಬಿಡುಗಡೆಗೆ ಕ್ರಮ ಕೈಗೊಂಡಿದೆ. ಇದು ಬಿಹಾರ ವಿಧಾನಸಭೆ ಚುನಾವಣೆಯಿಂದಲೇ ಅನ್ವಯವಾಗಲಿದೆ.
ಸರಣಿ ಸಂಖ್ಯೆಯನ್ನು ಯಂತ್ರಗಳಲ್ಲಿ ಹೆಚ್ಚು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ ಎಂದು ಭಾರತ ಚುನಾವಣಾ ಆಯೋಗ ಬುಧವಾರ ತಿಳಿಸಿದೆ.
ಇವಿಎಂ ಮತಪತ್ರಗಳ ವಿನ್ಯಾಸ ಮತ್ತು ಮುದ್ರಣದ ಸ್ಪಷ್ಟತೆ ಮತ್ತು ಓದುವಿಕೆಯನ್ನು ಹೆಚ್ಚಿಸಲು 1961ರ ಚುನಾವಣಾ ನೀತಿ ನಿಯಮಗಳು, ಸೆಕ್ಷನ್ 49 ಬಿ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
"ಇನ್ನು ಮುಂದೆ, ಅಭ್ಯರ್ಥಿಗಳ ಛಾಯಾಚಿತ್ರಗಳನ್ನು ಇವಿಎಂ ಮತಪತ್ರದಲ್ಲಿ ಬಣ್ಣದಲ್ಲಿ ಮುದ್ರಿಸಲಾಗುತ್ತದೆ. ಅಭ್ಯರ್ಥಿಯ ಮುಖವು ಸ್ಪಷ್ಟವಾಗಿ ಕಾಣಲು ಫೋಟೋ ಜಾಗದ ನಾಲ್ಕನೇ ಮೂರು ಭಾಗವನ್ನು ಆಕ್ರಮಿಸಿಕೊಂಡಿರುತ್ತದೆ" ಎಂದು ಆಯೋಗ ಹೇಳಿದೆ.
ಎಲ್ಲಾ ಅಭ್ಯರ್ಥಿಗಳ ಹೆಸರು, ಸರಣಿ ಸಂಖ್ಯೆಗಳು ಮತ್ತು ನೋಟಾ ಆಯ್ಕೆಯ ಅಕ್ಷರ ಗಾತ್ರ 30 ಇರಲಿದ್ದು, ಇವು ದಪ್ಪ ಅಕ್ಷಗಳಲ್ಲಿ ಮತ್ತು ಸ್ಪಷ್ಟವಾಗಿರಲಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



