ದೇಶ

ಬಡವರಿಗೆ ಉಚಿತ ಔಷಧಿ ಒದಗಿಸಲು ಜಾರ್ಖಂಡ್ ಸರ್ಕಾರದಿಂದ 700 ಮೆಡಿಕಲ್ ಸ್ಟೋರ್ ಓಪನ್

ಈ ಯೋಜನೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉಚಿತ ಔಷಧಿ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಜಾರ್ಖಂಡ್ ಆರೋಗ್ಯ ಸಚಿವ ಡಾ. ಇರ್ಫಾನ್ ಅನ್ಸಾರಿ ಅವರು ಹೇಳಿದ್ದಾರೆ.

ಬಡವರಿಗೆ ಉಚಿತ ಔಷಧಿ ಒದಗಿಸಲು ಜಾರ್ಖಂಡ್ ಸರ್ಕಾರದಿಂದ 700 ಮೆಡಿಕಲ್ ಸ್ಟೋರ್ ಓಪನ್
ಸಾಂದರ್ಭಿಕ ಚಿತ್ರ
Published On :

ರಾಂಚಿ: ಆರೋಗ್ಯ ಸೇವೆಯಲ್ಲಿ ದೊಡ್ಡ ನಿರ್ಧಾರ ಕೈಗೊಂಡಿರುವ ಜಾರ್ಖಂಡ್ ಸರ್ಕಾರ, ಬಡವರಿಗೆ ಉಚಿತ ಔಷಧಿ ಲಭ್ಯವಾಗುವಂತೆ ಮಾಡಲು ರಾಜ್ಯಾದ್ಯಂತ 700 ಅಬುವಾ ವೈದ್ಯಕೀಯ ಅಂಗಡಿಗಳನ್ನು ಆರಂಭಿಸುತ್ತಿದೆ.

ಈ ಯೋಜನೆ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉಚಿತ ಔಷಧಿ ಒದಗಿಸುವ ಗುರಿಯನ್ನು ಹೊಂದಿದೆ ಎಂದು ಜಾರ್ಖಂಡ್ ಆರೋಗ್ಯ ಸಚಿವ ಡಾ. ಇರ್ಫಾನ್ ಅನ್ಸಾರಿ ಅವರು ಹೇಳಿದ್ದಾರೆ.

ಆರೋಗ್ಯ ಸಚಿವ ಡಾ. ಇರ್ಫಾನ್ ಅನ್ಸಾರಿ ಅವರ ಪ್ರಕಾರ, ಬಡವರಿಗೆ ಉಚಿತ ಔಷಧಿಗಳು ಲಭ್ಯವಾಗುವಂತೆ ಮಾಡಲು ಮುಖ್ಯಮಂತ್ರಿ ಹೇಮಂತ್ ಸೊರೆನ್ ರಾಜ್ಯಾದ್ಯಂತ ಅಬುವಾ ವೈದ್ಯಕೀಯ ಅಂಗಡಿಗಳನ್ನು ತೆರೆಯಲು ನಿರ್ದೇಶಿಸಿದ್ದಾರೆ.

"ಮೊದಲ ಹಂತದಲ್ಲಿ 700 ಅಂಗಡಿಗಳನ್ನು ತೆರೆಯಲಾಗುವುದು. ಮುಂದಿನ ಹಂತದಲ್ಲಿ ಇದನ್ನು ಮತ್ತಷ್ಟು ಹೆಚ್ಚಿಸಲಾಗುವುದು" ಎಂದು ಅನ್ಸಾರಿ ತಿಳಿಸಿದ್ದಾರೆ.

ಔಷಧಿಗಳು ರಾಜ್ಯದ ದೂರದ ಪ್ರದೇಶಗಳನ್ನು ತಲುಪಬೇಕು ಮತ್ತು ಯಾವುದೇ ಬಡವರು ಚಿಕಿತ್ಸೆಯ ಕೊರತೆಯಿಂದ ಸಾಯಬಾರದು ಎಂಬುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅನ್ಸಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.