ದೇಶ

ಪ್ರಧಾನಿ ಮೋದಿ ಈಗ ಮಣಿಪುರ ಭೇಟಿ 'ದೊಡ್ಡ ವಿಷಯ'ವಲ್ಲ; 'ವೋಟ್ ಚೋರಿ' ದೇಶದ ಪ್ರಮುಖ ವಿಷಯ: ರಾಹುಲ್ ಗಾಂಧಿ; Video

"ವೋಟ್ ಚೋರಿ"(ಮತ ಕಳ್ಳತನ) ಪ್ರಸ್ತುತ ದೇಶದ ಮುಂದಿರುವ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಒತ್ತಿ ಹೇಳಿದರು.

ಪ್ರಧಾನಿ ಮೋದಿ ಈಗ ಮಣಿಪುರ ಭೇಟಿ 'ದೊಡ್ಡ ವಿಷಯ'ವಲ್ಲ; 'ವೋಟ್ ಚೋರಿ' ದೇಶದ ಪ್ರಮುಖ ವಿಷಯ: ರಾಹುಲ್ ಗಾಂಧಿ; Video
ರಾಹುಲ್ ಗಾಂಧಿ
Published On :

ಜುನಾಗಢ್: ಮಣಿಪುರ ಬಹಳ ಸಮಯದಿಂದ ಸಮಸ್ಯೆಯಿಂದ ಬಳಲುತ್ತಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈಗ ಗಲಭೆಪೀಡಿತ ರಾಜ್ಯಕ್ಕೆ ಭೇಟಿ ನೀಡುವುದು "ದೊಡ್ಡ ವಿಷಯ"ವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

"ವೋಟ್ ಚೋರಿ"(ಮತ ಕಳ್ಳತನ) ಪ್ರಸ್ತುತ ದೇಶದ ಮುಂದಿರುವ ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಒತ್ತಿ ಹೇಳಿದರು.

ಇಂದು ಗುಜರಾತ್‌ನ ಜುನಾಗಢ್ ಜಿಲ್ಲೆಯ ಕೆಶೋಡ್ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಎಲ್ಲೆಡೆ ಜನ "ವೋಟ್ ಚೋರಿ"(ಮತ ಕಳ್ಳ) ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿ ಶನಿವಾರ ಮಣಿಪುರಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿರುವುದು ಒಳ್ಳೆಯ ವಿಚಾರ. ಆದರೆ ಮಣಿಪುರ ಬಹಳ ದಿನಗಳಿಂದ ಸಮಸ್ಯೆಯಲ್ಲಿದೆ. ಪ್ರಧಾನಿ ಈಗ ಅಲ್ಲಿಗೆ ಹೋಗಲು ನಿರ್ಧರಿಸಿದ್ದಾರೆ. ಆದ್ದರಿಂದ ಅದು ಈಗ ದೊಡ್ಡ ವಿಷಯವಲ್ಲ. ಈಗ ದೇಶದ ಪ್ರಮುಖ ವಿಷಯವೆಂದರೆ 'ವೋಟ್ ಚೋರಿ'(ಮತ ಕಳ್ಳತನ)" ಎಂದು ರಾಹುಲ್ ಗಾಂಧಿ ಹೇಳಿದರು.

"ಹರಿಯಾಣ ಮತ್ತು ಮಹಾರಾಷ್ಟ್ರದ ಚುನಾವಣೆಯಲ್ಲಿ ಅವರು ಮತ ಕದ್ದಿದ್ದಾರೆ. ಇತ್ತೀಚೆಗೆ ಕರ್ನಾಟಕದಲ್ಲಿ ನಾವು ಅದನ್ನು ಸಾಬೀತುಪಡಿಸಿದ್ದೇವೆ. ಆದ್ದರಿಂದ, ಈಗ ಮುಖ್ಯ ವಿಷಯವೆಂದರೆ ಮತ ಕಳ್ಳತನ. ಎಲ್ಲೆಡೆ ಜನ 'ವೋಟ್ ಚೋರಿ'(ಮತ ಕಳ್ಳ) ಬಗ್ಗೆ ಮಾತನಾಡುತ್ತಿದ್ದಾರೆ" ಎಂದು ರಾಯ್‌ಬರೇಲಿಯ ಲೋಕಸಭಾ ಸಂಸದ ತಿಳಿಸಿದರು.

ಮೋದಿ ಸೆಪ್ಟೆಂಬರ್ 13 ರಂದು ಮಣಿಪುರಕ್ಕೆ ಭೇಟಿ ನೀಡಲಿದ್ದು, ಚುರಾಚಂದ್‌ಪುರ ಮತ್ತು ರಾಜಧಾನಿ ಇಂಫಾಲ್‌ನಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.

ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮೊದಲ ಬಾರಿ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.