ಸೇನೆಗೆ ಭಾರತೀಯ ಪ್ರಜೆಗಳ ಸೇರ್ಪಡೆ: ನೇಮಕಾತಿ ಕೈಬಿಟ್ಟು, ನಮ್ಮ ನಾಗರೀಕರ ಬಿಡುಗಡೆಗೊಳಿಸಿ; ರಷ್ಯಾಗೆ ಭಾರತ ಆಗ್ರಹ
ಇತ್ತೀಚೆಗೆ ರಷ್ಯಾದ ಸೈನ್ಯಕ್ಕೆ ಭಾರತೀಯರನ್ನ ನೇಮಸಿಕೊಳ್ಳಲಾಗಿದೆ ಎಂಬ ವರದಿಗಳನ್ನ ನೋಡಿದ್ದೇವೆ. ಕಳೆದ ಒಂದು ವರ್ಷದಿಂದ ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಇದರಲ್ಲಿನ ಅಪಾಯಗಳನ್ನ ಒತ್ತಿ ಹೇಳಿದೆ.

ನವದಹಲಿ: ಸೇನೆಗೆ ಭಾರತೀಯ ಪ್ರಜೆಗಳನ್ನು ನೇಮಕ ಮಾಡಿಕೊಳ್ಳುತ್ತಿರುವ ರಷ್ಯಾ ನಡೆಯನ್ನು ಭಾರತ ತೀವ್ರವಾಗಿ ಖಂಡಿಸಿದ್ದು, ನೇಮಕಾತಿ ಕೈಬಿಟ್ಟು ಕೂಡಲೇ ಭಾರತೀಯರನ್ನು ಬಿಡುಗಡೆಗೊಳಿಸುವಂತೆ ಗುರುವಾರ ಆಗ್ರಹಿಸಿದೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡಲು ಭಾರತೀಯರು ರಷ್ಯಾ ಸೇನೆ ಸೇರುತ್ತಿರುವ ವರದಿಗಳನ್ನು ನಾವು ನೋಡಿದ್ದೇವೆ. ಹೀಗೆ ರಷ್ಯಾ ಸೇನೆ ಸೇರಲು ಬಯಸುತ್ತಿರುವ ಎಲ್ಲಾ ಭಾರತೀಯರು ದೂರಬೇಕು. ಏಕೆಂದರೆ ಇದು ತುಂಬಾ ಅಪಾಯಕಾರಿ ನಡೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇತ್ತೀಚೆಗೆ ರಷ್ಯಾದ ಸೈನ್ಯಕ್ಕೆ ಭಾರತೀಯರನ್ನ ನೇಮಸಿಕೊಳ್ಳಲಾಗಿದೆ ಎಂಬ ವರದಿಗಳನ್ನ ನೋಡಿದ್ದೇವೆ. ಕಳೆದ ಒಂದು ವರ್ಷದಿಂದ ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಇದರಲ್ಲಿನ ಅಪಾಯಗಳನ್ನ ಒತ್ತಿ ಹೇಳಿದೆ. ಇದೀಗ ಮತ್ತೆ ಭಾರತೀಯರಿಗೆ ಎಚ್ಚರಿಕೆ ನೀಡುತ್ತಿದ್ದೇವೆಂದು ತಿಳಿಸಿದೆ.
ದೆಹಲಿ ಮತ್ತು ಮಾಸ್ಕೋದಲ್ಲಿರುವ ರಷ್ಯಾದ ಅಧಿಕಾರಿಗಳೊಂದಿಗೆ ಈ ವಿಷಯ ಚರ್ಚಿಸಿದ್ದೇವೆ. ಈ ಪದ್ದತಿಯನ್ನ ಕೊನೆಗೊಳಿಸಬೇಕು. ನಮ್ಮ ಪ್ರಜೆಗಳನ್ನು ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದೇವೆ. ರಷ್ಯಾ ಸೇನೆಯಲ್ಲಿ ಸಿಲುಕಿರುವ ಕುಟುಂಬದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಸಚಿವಾಲಯ ತಿಳಿಸಿದೆ.
ಇದೇ ವೇಳೆ ರಷ್ಯಾ ಸೇನೆ ಸೇರಲು ಬಯಸುತ್ತಿರುವ ಎಲ್ಲಾ ಭಾರತೀಯ ಪ್ರಜೆಗಳು ಇದರಿಂದ ದೂರವಿರಬೇಕೆಂದು ಹೇಳಿದ್ದು, ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ. ಇದು ತುಂಬಾ ಅಪಾಯಕಾರಿಯಾದ ನಡೆ ಎಂದೂ ಎಚ್ಚರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



