ಮಧ್ಯ ಪ್ರದೇಶ: ಆಯುರ್ವೇದಿಕ್ ಕೆಮ್ಮಿನ ಸಿರಪ್ ಸೇವಿಸಿದ ನಂತರ ಮಗು ಸಾವು
ಇದಕ್ಕೂ ಮೊದಲು, ಛಿಂದ್ವಾರಾದ 21, ಬೇತುಲ್‌ನ ಇಬ್ಬರು ಮತ್ತು ಪಂಧುರ್ನಾದ ಒಬ್ಬ ಮಗು ಸೇರಿದಂತೆ 24 ಮಕ್ಕಳು ಅಲೋಪತಿ ಕೆಮ್ಮಿನ ಸಿರಪ್ 'ಕೋಲ್ಡ್ರಿಫ್' ಸೇವನೆಯಿಂದ ಮೃತಪಟ್ಟಿದ್ದರು.

ಛಿಂದ್ವಾರಾ: 'ಕೋಲ್ಡ್ರಿಫ್' ಕೆಮ್ಮಿನ ಸಿರಪ್ ಸೇವಿಸಿ ಹಲವು ಮಕ್ಕಳ ಸಾವಿನ ಬೆನ್ನಲ್ಲೇ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಆಯುರ್ವೇದಿಕ್ ಕೆಮ್ಮಿನ ಸಿರಪ್ ಮತ್ತು ಔಷಧೀಯ ಪುಡಿ ಸೇವಿಸಿದ ನಂತರ ಐದು ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿದೆ ಆಘಾತಕಾರಿ ಘಟನೆ ಶುಕ್ರವಾರ ವರದಿಯಾಗಿದೆ.
ಇದಕ್ಕೂ ಮೊದಲು, ಛಿಂದ್ವಾರಾದ 21, ಬೇತುಲ್‌ನ ಇಬ್ಬರು ಮತ್ತು ಪಂಧುರ್ನಾದ ಒಬ್ಬ ಮಗು ಸೇರಿದಂತೆ 24 ಮಕ್ಕಳು ಅಲೋಪತಿ ಕೆಮ್ಮಿನ ಸಿರಪ್ 'ಕೋಲ್ಡ್ರಿಫ್' ಸೇವನೆಯಿಂದ ಮೃತಪಟ್ಟಿದ್ದರು.
'ಕೋಲ್ಡ್ರಿಫ್' ಸೇವನೆಗೆ ಸಂಬಂಧಿಸಿದ ಕೊನೆಯ ಸಾವಿನ ಎರಡು ವಾರಗಳ ನಂತರ ಆಯುರ್ವೇದಿಕ್ ಕೆಮ್ಮಿನ ಸಿರಪ್ ಸೇವಿಸಿ ಐದು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ. ಇದರೊಂದಿಗೆ ಸಿರಪ್ ಸೇವನೆಯಿಂದ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 25ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ರುಹಿ ಮಿನೋಟೆ ಎಂಬ ಮಗು ಗುರುವಾರ ಮೃತಪಟ್ಟಿದೆ. ಅವರ ಕುಟುಂಬವು ನಾಲ್ಕು ದಿನಗಳ ಹಿಂದೆ ಕುರತಾ ಮೆಡಿಕಲ್ ಶಾಪ್‌ನಿಂದ ಆಯುರ್ವೇದಿಕ್ ಸಿರಪ್ ಮತ್ತು ಕೆಲವು ಔಷಧೀಯ ಪುಡಿಯನ್ನು ಖರೀದಿಸಿತ್ತು. ಮೆಡಿಕಲ್ ಶಾಪ್ ಅನ್ನು ಸೀಲ್ ಮಾಡಲಾಗಿದೆ," ಎಂದು ಚೌರೈ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್(SDM) ಪ್ರಭಾತ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
"ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದು, ಸಿರಪ್ ಮತ್ತು ಪುಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ" ಎಂದು ಎಸ್‌ಡಿಎಂ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



