ದೇಶ

ಮತಕ್ಕಾಗಿ ಮೋದಿ 'ಭರತ ನಾಟ್ಯ'ನೂ ಮಾಡ್ತಾರೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!

ಟೀಕೆಗಳನ್ನು ವೈಯಕ್ತಿಕ" ಮತ್ತು "ಅವಮಾನಕರ" ಎಂದು ಕರೆದಿರುವ ಬಿಜೆಪಿ, ರಾಹುಲ್ ಗಾಂಧಿಗೆ ಶೋಕಾಸ್ ನೋಟಿಸ್ ನೀಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಮತಕ್ಕಾಗಿ ಮೋದಿ 'ಭರತ ನಾಟ್ಯ'ನೂ ಮಾಡ್ತಾರೆ: ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು!
ರಾಹುಲ್ ಗಾಂಧಿ
Published On :

ಪಾಟ್ನಾ: ಮತಕ್ಕಾಗಿ ಪ್ರಧಾನಿ ಮೋದಿ ಬೇಕಿದ್ರೆ ಭರತನಾಟ್ಯನೂ ಮಾಡ್ತಾರೆ ಎಂದು ಇತ್ತೀಚಿಗೆ ಹೇಳಿಕೆ ನೀಡಿದ್ದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚಿಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಗುರುವಾರ ಬಿಹಾರದ ಮುಖ್ಯ ಚುನಾವಣಾ ಅಧಿಕಾರಿಗೆ (ಸಿಇಒ) ದೂರು ಸಲ್ಲಿಸಿದೆ.

ರಾಹುಲ್ ಗಾಂಧಿಯವರ ಹೇಳಿಕೆಗಳು ಪ್ರಧಾನಿ ಕಚೇರಿಯ ಘನತೆಗೆ ಅಪಹಾಸ್ಯ ಮತ್ತು ಅವಮಾನ, ಮಾದರಿ ನೀತಿ ಸಂಹಿತೆ ಮತ್ತು ಪ್ರಜಾಪ್ರತಿನಿಧಿ ಕಾಯಿದೆ, 1951 ಅನ್ನು ಉಲ್ಲಂಘಿಸಿವೆ ಎಂದು ಬಿಜೆಪಿಯ ಚುನಾವಣಾ ಆಯೋಗದ ಸಮನ್ವಯ ವಿಭಾಗದ ಸಂಚಾಲಕ ಬಿಂಧ್ಯಾಚಲ ರೈ ಅವರು ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.

ಬುಧವಾರ ಮುಜಾಫರ್‌ಪುರ ಮತ್ತು ದರ್ಭಾಂಗದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ನರೇಂದ್ರ ಮೋದಿ ಮತಕ್ಕಾಗಿ ಎಲ್ಲಾ ರೀತಿಯ ನಾಟಕ ಮಾಡಲು ಸಿದ್ಧರಿರುತ್ತಾರೆ. ನೀವು ಡ್ಯಾನ್ಸ್ ಮಾಡಿದ್ರೆ ನಾವು ವೋಟ್ ಹಾಕ್ತೀವಿ ಅಂತಾ ನೀವು ಹೇಳಿದ್ರೆ, ಅವರು ಭರತ ನಾಟ್ಯನೂ ಮಾಡ್ತಾರೆ ಎಂದು ಹೇಳಿದ್ದರು.

ಈ ಟೀಕೆಗಳನ್ನು ವೈಯಕ್ತಿಕ" ಮತ್ತು "ಅವಮಾನಕರ" ಎಂದು ಕರೆದಿರುವ ಬಿಜೆಪಿ, ರಾಹುಲ್ ಗಾಂಧಿಗೆ ಶೋಕಾಸ್ ನೋಟಿಸ್ ನೀಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಅಲ್ಲದೇ ಬೇಷರತ್ತಾದ ಸಾರ್ವಜನಿಕ ಕ್ಷಮೆಯಾಚನೆ" ನೀಡುವಂತೆ ನಿರ್ದೇಶಿಸಬೇಕು. ಪ್ರಜಾಪ್ರಭುತ್ವ ಮತ್ತು ಚುನಾವಣಾ ಸೌಹಾರ್ದತೆಯ ಪಾವಿತ್ರ್ಯತೆಯನ್ನು ಕಾಪಾಡಲು" ನಿರ್ದಿಷ್ಟ ಅವಧಿಗೆ ಪ್ರಚಾರ ಮಾಡದಂತೆ ನಿರ್ಬಂಧಿಸಬೇಕು ಎಂದು ಆಗ್ರಹಿಸಿದೆ.

ರಾಜಕೀಯ ಲಾಭಕ್ಕಾಗಿ ಮೋದಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಇದನ್ನು ಭ್ರಷ್ಟ ಚುನಾವಣಾ ಅಭ್ಯಾಸ ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.