ದೇಶ

500 ರೂ ಗೆ ಗ್ಯಾಸ್ ಸಿಲಿಂಡರ್: ತೇಜಸ್ವಿಯಿಂದ ಮತ್ತೊಂದು ಭರವಸೆ; ನಿತೀಶ್ ಸರ್ಕಾರ ಕಿತ್ತೊಗೆಯಲು ಕರೆ

ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು "ರಿಮೋಟ್ ಕಂಟ್ರೋಲ್ ಮೂಲಕ" ನಡೆಸಲಾಗುತ್ತಿದೆ. ಜೆಡಿಯು ನಾಯಕ ನಿತೀಶ್ ಕುಮಾರ್ ಬಿಜೆಪಿಯ ಕೈಗೊಂಬೆ ಎಂದು ಆರೋಪಿಸಿದರು.

500 ರೂ ಗೆ ಗ್ಯಾಸ್ ಸಿಲಿಂಡರ್: ತೇಜಸ್ವಿಯಿಂದ ಮತ್ತೊಂದು ಭರವಸೆ; ನಿತೀಶ್ ಸರ್ಕಾರ ಕಿತ್ತೊಗೆಯಲು ಕರೆ
ತೇಜಸ್ವಿ ಯಾದವ್
Published On :

ಪಾಟ್ನಾ: ಬಿಹಾರದಲ್ಲಿ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೆ 500 ರೂ.ಗೆ ಅಡುಗೆ ಅನಿಲ ಸಿಲಿಂಡರ್‌ಗಳು ಲಭ್ಯವಾಗಲಿವೆ ಎಂದು ಇಂಡಿಯಾ ಬಣದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಬುಧವಾರ ಭರವಸೆ ನೀಡಿದ್ದಾರೆ.

ಮುಜಫರ್‌ಪುರದಲ್ಲಿ ನಡೆದ ರ್‍ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ತೇಜಸ್ವಿ, "ನಾವು ಮುಂದಿನ ಸರ್ಕಾರ ರಚಿಸಿದರೆ 500 ರೂ.ಗೆ ಗ್ಯಾಸ್ ಸಿಲಿಂಡರ್‌ಗಳು ನೀಡುತ್ತೇವೆ" ಎಂದು ಹೇಳಿದರು.

ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ತೇಜಸ್ವಿ ಯಾದವ್, ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರವನ್ನು "ರಿಮೋಟ್ ಕಂಟ್ರೋಲ್ ಮೂಲಕ" ನಡೆಸಲಾಗುತ್ತಿದೆ. ಜೆಡಿಯು ನಾಯಕ ನಿತೀಶ್ ಕುಮಾರ್ ಬಿಜೆಪಿಯ ಕೈಗೊಂಬೆ ಎಂದು ಆರೋಪಿಸಿದರು.

"ಆದರೆ, ಬಿಹಾರದಲ್ಲಿ ಮತಗಳನ್ನು ಕೇಳುತ್ತಾರೆ. ಆದರೆ ಕಾರ್ಖಾನೆಗಳನ್ನು ಮಾತ್ರ ಗುಜರಾತ್‌ನಲ್ಲಿ ಸ್ಥಾಪಿಸುತ್ತಾರೆ. ಹೊರಗಿನವರು(ಬಹರಿ) ನಿಯಂತ್ರಿಸುತ್ತಿರುವ ಈ ಸರ್ಕಾರವನ್ನು ನಾವು ಬಿಹಾರಿಗಳು ಕಿತ್ತೊಗೆಯಬೇಕು" ಎಂದು ಹೇಳಿದರು.

70 ವರ್ಷದ ಸಿಎಂ ನಿತೀಶ್ ಕುಮಾರ್‌ಗೆ ವ್ಯತಿರಿಕ್ತವಾಗಿ, ತಮ್ಮ ಯುವ ಆಕರ್ಷಣೆಯನ್ನು ಎತ್ತಿ ತೋರಿಸುವ ಪ್ರಯತ್ನದಲ್ಲಿ ಟಿ-ಶರ್ಟ್ ಧರಿಸಿ ಪ್ರಚಾರ ನಡೆಸುತ್ತಿರುವ ಆರ್‌ಜೆಡಿ ನಾಯಕ, ಜನಸಮೂಹ 'ಯುವ ಕಿ ಸರ್ಕಾರ್' ಪರವಾಗಿ ಘೋಷಣೆಗಳನ್ನು ಕೂಗುವಂತೆ ಮಾಡಿದರು.

"ನಾವು ಹೊಸ ಬಿಹಾರವನ್ನು ನಿರ್ಮಿಸುತ್ತೇವೆ. ರಾಜ್ಯದಲ್ಲಿ ಕೋಮು ದ್ವೇಷವನ್ನು ಹರಡಲು ನಾವು ಅವಕಾಶ ನೀಡುವುದಿಲ್ಲ" ಎಂದು ಅವರು ಪ್ರತಿಪಾದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.